ಕನ್ನಡ ಚಿತ್ರರಂಗದ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ದೊಡ್ಡ ಮಗ ಮನೋರಂಜನ್ ಮದುವೆಯನ್ನು ಬಹಳ ಅದ್ಧೂರಿಯಾಗಿ ಬೆಂಗಳೂರಿನ ತ್ರಿಪುರ ವಾಸಿನಿಯಲ್ಲಿ ಇಂದು ನೆರವೇರಿಸಲಾಗಿದೆ.
ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಕ್ರೇಜಿ ಸ್ಟಾರ್ ಪುತ್ರ: ಅಪ್ಪ ಅಮ್ಮನ ಆಸೆಯಂತೆ ನಡೆಯುತ್ತೇನೆಂದ ಮನೋರಂಜನ್ - ಮನೋರಂಜನ್
ರವಿಚಂದ್ರನ್ ಹಾಗು ಪತ್ನಿ ಸುಮತಿ ಆಸೆಯಂತೆ ಮನೋರಂಜನ್ ಸಂಗೀತ ಅವರನ್ನು ವಿವಾಹವಾಗಿದ್ದಾರೆ.
![ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಕ್ರೇಜಿ ಸ್ಟಾರ್ ಪುತ್ರ: ಅಪ್ಪ ಅಮ್ಮನ ಆಸೆಯಂತೆ ನಡೆಯುತ್ತೇನೆಂದ ಮನೋರಂಜನ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಮನೋರಂಜನ್](https://etvbharatimages.akamaized.net/etvbharat/prod-images/768-512-16159200-thumbnail-3x2-nin.jpg)
ರವಿಚಂದ್ರನ್ ಹಾಗು ಪತ್ನಿ ಸುಮತಿ ಆಸೆಯಂತೆ ಅವರು ನೋಡಿ ಒಪ್ಪಿರುವ ಹುಡುಗಿಯನ್ನು ಮನೋರಂಜನ್ ವರಿಸಿದ್ದಾರೆ. ಈ ಮೂಲಕ ವೈವಾಹಿಕ ಜೀವನಕ್ಕೆ ಕಾಲಿರಿಸಿದರು. ಇದಕ್ಕೂ ಮೊದಲಿನ ಮೆಹಂದಿ ಕಾರ್ಯಕ್ರಮಕ್ಕೆ ಚಿತ್ರರಂಗದ ಕೆಲವೇ ಕೆಲವು ಗಣ್ಯರು ಆಗಮಿಸಿದ್ದರು. ಇಂದು ಎರಡು ಕುಟುಂಬದವರ ಸಮ್ಮುಖದಲ್ಲಿ ಮಾಂಗಲ್ಯಧಾರಣೆ ನಡೆದಿದೆ.
ಮದುವೆ ಬಗ್ಗೆ ಮಾತನಾಡಿರೋ ಮನೋರಂಜನ್, ಇದು ಅರೆಂಜ್ ಮ್ಯಾರೇಜ್, ನಾನು ಮದುವೆ ಆಗಲಿರುವ ಹುಡುಗಿ ಸಂಗೀತಾ ನಮಗೆ ದೂರದ ಸಂಬಂಧಿ ಆಗಬೇಕು. ನನಗೆ ಈಗ 34 ವರ್ಷ. ನಮ್ಮ ಕುಟುಂಬದಲ್ಲಿ ಹುಡುಗ ಮತ್ತು ಹುಡುಗಿಯರ ಮದುವೆ 27 ರ ಒಳಗೆಯೇ ನಡೆಯುತ್ತದೆ. ನಾನು ಮಾತ್ರ ಇಷ್ಟು ತಡವಾಗಿ ಮದುವೆ ಆಗುತ್ತಿದ್ದೇನೆ. ನಾವು ಒಬ್ಬರನ್ನೊಬ್ಬರು ಅರಿತುಕೊಂಡೆವು. ನಾನು ನಟನಾಗಿರುವುದರಿಂದ, ಅವರಿಗೆ ನನ್ನ ಬಗ್ಗೆ ತಿಳಿದುಕೊಳ್ಳಲು ಸಮಯ ನೀಡುತ್ತೇನೆ. ಅಪ್ಪ- ಅಮ್ಮನ ಆಸೆಯಂತೆ ನಾವು ಜೀವನ ನಡೆಸುತ್ತೇವೆ ಎಂದರು.