ಕರ್ನಾಟಕ

karnataka

ETV Bharat / entertainment

ಆಲಿಯಾಗಿಂತ ಉತ್ತಮ ಸಂಗಾತಿ ಪಡೆಯಲು ಸಾಧ್ಯವಿಲ್ಲ: ರಣಬೀರ್ ಕಪೂರ್ - ಆಲಿಯಾಗಿಂತ ಉತ್ತಮ ಸಂಗಾತಿ ಪಡೆಯಲು ಸಾಧ್ಯವಿಲ್ಲ

'ಶಂಶೇರಾ' ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ನಟ ರಣಬೀರ್ ಕಪೂರ್ ತಮ್ಮ ಜೀವನ ಸಂಗಾತಿ ಆಲಿಯಾ ಭಟ್​ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು. ನನ್ನ ಜೀವನದಲ್ಲಿ ಆಲಿಯಾಗಿಂತ ಉತ್ತಮ ಸಂಗಾತಿ ಪಡೆಯಲು ಸಾಧ್ಯವಿಲ್ಲ. ಅವಳ ಜೊತೆಗಿನ ನನ್ನ ಜೀವನ ಸುಂದರವಾಗಿದೆ ಎಂದರು.

ರಣಬೀರ್ ಕಪೂರ್
ರಣಬೀರ್ ಕಪೂರ್

By

Published : Jun 25, 2022, 9:34 AM IST

ಬಾಲಿವುಡ್​ ನಟ ರಣಬೀರ್ ಕಪೂರ್ ಮತ್ತು ಸಂಜಯ್ ದತ್ ಅವರ ಬಹುನಿರೀಕ್ಷಿತ ಚಲನಚಿತ್ರ 'ಶಂಶೇರಾ' ಟ್ರೈಲರ್ ನಿನ್ನೆ ರಿಲೀಸ್ ಆಗಿದೆ. ಮುಂಬೈನಲ್ಲಿ ನಡೆದ ಅದ್ಧೂರಿ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಸಿನಿಮಾದ ಜೊತೆಗೆ ತಮ್ಮ ಜೀವನ ಸಂಗಾತಿ ಆಲಿಯಾ ಭಟ್​ ಕುರಿತು ಸಹ ರಣಬೀರ್ ಅಭಿಪ್ರಾಯ ವ್ಯಕ್ತಪಡಿಸಿದರು.

'ಶಂಶೇರಾ' ಟ್ರೈಲರ್ ಬಿಡುಗಡೆ ಸಮಾರಂಭ

ಸಿನಿಮಾಗಳನ್ನು ಬದಿಗಿಟ್ಟು ಈ ವರ್ಷ ನನಗೆ ಉತ್ತಮವಾಗಿದೆ, ನಾನು ಮದುವೆಯಾದೆ. ಮದುವೆ ಎಂಬುದು ನನ್ನ ಜೀವನದಲ್ಲಿ ನಡೆದ ಒಂದು ಸುಂದರ ಸಂಗತಿ. ನನ್ನ ಜೀವನದಲ್ಲಿ ಆಲಿಯಾಗಿಂತ ಉತ್ತಮ ಸಂಗಾತಿ ಪಡೆಯಲು ಸಾಧ್ಯವಿಲ್ಲ. ಆಲಿಯಾ ಜೊತೆಗಿನ ನನ್ನ ಜೀವನ ಸುಂದರವಾಗಿದೆ ಎಂದರು.

ನಿರ್ದೇಶಕ ಕರಣ್ ಮಲ್ಹೋತ್ರಾ ಅವರ ಚಲನಚಿತ್ರ 'ಶಂಶೇರಾ'ದಲ್ಲಿ ರಣಬೀರ್ ಕಪೂರ್ ಡಕಾಯಿತನ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಸಂಜಯ್ ದತ್ ಮತ್ತು ವಾಣಿ ಕಪೂರ್ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ. ಸಂಜಯ್ ಅವರು ಇಂಗ್ಲಿಷ್ ಜನರಲ್ ಪೊಲೀಸ್‌ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಮತ್ತು ವಾಣಿ ಕಪೂರ್‌ ಪಾತ್ರ ನರ್ತಕಿದಾಗಿದೆ. ಯಶ್ ರಾಜ್ ಫಿಲಂಸ್‌ನ 'ಶಂಶೇರಾ' ಜುಲೈ 22 ರಂದು ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ:ವೈವಾಹಿಕ ಜೀವನಕ್ಕೆ ತಿಂಗಳ ಸಂಭ್ರಮ.. ಅಪರೂಪದ ಫೋಟೋಸ್​​ ಹಂಚಿಕೊಂಡ ಆಲಿಯಾ..

ABOUT THE AUTHOR

...view details