ಕರ್ನಾಟಕ

karnataka

ETV Bharat / entertainment

ಮತ್ತೆ ಬರ್ತಿದೆ 'ವೀಕೆಂಡ್ ವಿತ್ ರಮೇಶ್' ಶೋ! ಮೋಹಕತಾರೆ ರಮ್ಯಾ ಮೊದಲ ಅತಿಥಿ - ವೀಕೆಂಡ್ ವಿತ್ ರಮೇಶ್ ಫಸ್ಟ್‌ ಗೆಸ್ಟ್‌ ಆದ ರಮ್ಯಾ

ಜೀ ವಾಹಿನಿಯ ಜನಪ್ರಿಯ ಟೆಲಿವಿಷನ್ ಶೋ 'ವೀಕೆಂಡ್ ವಿತ್ ರಮೇಶ್' ಮತ್ತೆ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸಲು ಸಿದ್ಧವಾಗಿದೆ. ಹೊಸ ಸೀಸನ್‌ನ ಮೊದಲ ಅತಿಥಿಯಾಗಿ ನಟಿ ರಮ್ಯಾ ಪಾಲ್ಗೊಳ್ಳಲಿದ್ದಾರೆ.

weekend with ramesh
ವೀಕೆಂಡ್ ವಿತ್ ರಮೇಶ್

By

Published : Mar 22, 2023, 7:05 AM IST

ಕನ್ನಡದ ಜನಪ್ರಿಯ ನಟ ರಮೇಶ್ ಅರವಿಂದ್ ನಡೆಸಿಕೊಡುವ ಪ್ರೇಕ್ಷಕರ ಅಚ್ಚುಮೆಚ್ಚಿನ ಹಾಗೂ ಕಿರುತೆರೆಯ ಅತಿದೊಡ್ಡ ಶೋ 'ವೀಕೆಂಡ್ ವಿತ್ ರಮೇಶ್' ಇದೀಗ ಮತ್ತೆ ಜೀ ಕನ್ನಡ ವಾಹಿನಿಯಲ್ಲಿ ಈ ವಾರಾಂತ್ಯದಿಂದ ಪ್ರಸಾರವಾಗಲಿದೆ. ಸೋಮವಾರ ಮಾಧ್ಯಮಗೋಷ್ಠಿ ನಡೆಸಿದ WWR ತಂಡ, ಮೋಹಕತಾರೆ ರಮ್ಯಾ ಅವರ ಸಾಧನೆಯ ಕಥೆ ಹೇಳಲು ರಮೇಶ್‌ ಅರವಿಂದ್‌ ಅವರು ರೆಡಿಯಾಗಿದ್ದಾರೆ. ಮೊದಲ ಅತಿಥಿಯಾಗಿ ರಮ್ಯಾ ಭಾಗಿಯಾಗಲಿದ್ದಾರೆ ಎಂದು ತಿಳಿಸಿದೆ.

ಅಭಿಮಾನಿಗಳು ಬಹಳ ದಿನದಿಂದ ಕಾಯುತ್ತಿದ್ದ ವೀಕೆಂಡ್ ವಿತ್ ರಮೇಶ್ ಸೀಸನ್ - 5 ಮಾರ್ಚ್ 25 ರಿಂದ ರಾತ್ರಿ 9 ಕ್ಕೆ ಪ್ರತೀ ಶನಿವಾರ ಮತ್ತು ಭಾನುವಾರ ಪ್ರಸಾರವಾಗಲಿದೆ. ಕಾರ್ಯಕ್ರಮದಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ ಎಂಬುದನ್ನೂ ತಂಡ ಬಹಿರಂಗಪಡಿಸಿತು. ಹೊಸ ಸೀಸನ್‌ನಲ್ಲಿ ಕಾಣಿಸಿಕೊಳ್ಳಲಿರುವ ಸಾಧಕರಲ್ಲಿ ನಟರಾದ ಧ್ರುವ ಸರ್ಜಾ, ನಟಿ ರಚಿತಾ ರಾಮ್, ಮಾಲಾಶ್ರೀ ಮತ್ತು ಹೃದ್ರೋಗ ತಜ್ಞ ಡಾ. ಮಂಜುನಾಥ್ ಸೇರಿದ್ದಾರೆ.

ಇದನ್ನೂ ಓದಿ :ಕಪ್ಪು ಬಿಳುಪಿನ ಚಿತ್ರದಲ್ಲಿ ಕಲರ್​ಫುಲ್ ನೋಟ ಬೀರಿದ 'ಶಾಕುಂತಲೆ' ಸಮಂತಾ

ಜೀ ಚಾನೆಲ್ ಮುಖ್ಯಸ್ಥ ರಾಘವೇಂದ್ರ ಹುಣಸೂರು ಮಾತನಾಡಿ, ''ಈ ಬಾರಿಯ ಕಾರ್ಯಕ್ರಮಕ್ಕೆ ರಮ್ಯಾ ಮೊದಲ ಅತಿಥಿಯಾಗಿ ಆಗಮಿಸಲಿದ್ದು, ನಂತರ ನಟ ಪ್ರಭುದೇವ ಪಾಲ್ಗೊಳ್ಳುವರು. ನಾವು ಈಗಾಗಲೇ ಪ್ರಭುದೇವ ಅವರೊಂದಿಗೆ ಸಂಚಿಕೆಯನ್ನು ಚಿತ್ರೀಕರಿಸಿದ್ದೇವೆ. ಮಂಗಳವಾರ ರಮ್ಯಾ ಅವರ ಸಂಚಿಕೆಯ ಚಿತ್ರೀಕರಣ ನಡೆಯಲಿದೆ. ಜಗ್ಗಿ ವಾಸುದೇವ್, ಕೆಲ ರಾಜಕಾರಣಿಗಳೂ ಸೇರಿದಂತೆ ಅನೇಕ ಸೆಲಿಬ್ರಿಟಿಗಳೊಂದಿಗೆ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲು ಮಾತುಕತೆ ನಡೆಸುತ್ತಿದ್ದೇವೆ. ಸದ್ಯಕ್ಕೆ, ಅನೇಕ ರಾಜಕಾರಣಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಮ್ಮನ್ನು ಸಂಪರ್ಕಿಸಿದ್ದಾರೆ. ಆದರೆ, ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ" ಎಂದರು.

ಇದನ್ನೂ ಓದಿ :ಹಿಂದೂ ವಿರೋಧಿ‌ ಪೋಸ್ಟ್ ಆರೋಪ: ನಟ ಚೇತನ್ ಪರ ವಕೀಲರು ಹೇಳಿದ್ದೇನು?

ಪ್ರತಿ ಬಾರಿ ಒಂದಿಲ್ಲೊಂದು ವಿಶೇಷತೆಯನ್ನು ಹೊತ್ತು ತರುವ ಮೂಲಕ ಅಭಿಮಾನಿಗಳ ಮನ ಗೆದ್ದ ವೀಕೆಂಡ್ ವಿತ್ ರಮೇಶ್​ನಲ್ಲಿ ಈಗಾಗಲೇ ಪುನೀತ್ ರಾಜ್‌ಕುಮಾರ್, ಉಪೇಂದ್ರ, ದರ್ಶನ್, ರಕ್ಷಿತ್ ಶೆಟ್ಟಿ, ಗಣೇಶ್, ಅಂಬರೀಶ್, ಸುಧಾ ಮೂರ್ತಿ, ಸಿದ್ದರಾಮಯ್ಯ, ವೀರೇಂದ್ರ ಹೆಗ್ಗಡೆ, ರಾಹುಲ್ ದ್ರಾವಿಡ್, ದೇವಿ ಶೆಟ್ಟಿ ಸೇರಿದಂತೆ ವಿವಿಧ ಕ್ಷೇತ್ರಗಳ 84 ಮಂದಿ ಸಾಧಕರು ಈ ಹಿಂದಿನ ಸೀಸನ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ :ದೃಶ್ಯ 2 ಸಿನಿಮಾ ಬಳಿಕ ಮತ್ತೊಂದು ಕೌಟುಂಬಿಕ ಚಿತ್ರದಲ್ಲಿ ಕ್ರೇಜಿಸ್ಟಾರ್

ಈ ಸೀಸನ್‌ನಲ್ಲಿ '100 ನೇ ಸೆಲೆಬ್ರಿಟಿ' ಸಹ ಕಾಣಿಸಿಕೊಳ್ಳಲಿದ್ದು, ಭಾರಿ ಕುತೂಹಲ ಮೂಡಿಸಿದೆ. 'ಕೆಂಪು ಕುರ್ಚಿ'ಗೆ ಸಂಪೂರ್ಣ ನ್ಯಾಯವನ್ನು ನೀಡುವ ಮೂಲಕ ಸೆಲಿಬ್ರಿಟಿಗಳ ಸಾಧನೆಯನ್ನು ಪ್ರೇಕ್ಷಕರ ಮುಂದೆ ತೆರೆದಿಡಲಾಗುವುದು ಎಂದು ತಂಡ ಹೇಳಿದೆ.

ಇದನ್ನೂ ಓದಿ :ಜನಪ್ರಿಯ ಭಾರತೀಯ ಸೆಲೆಬ್ರಿಟಿಗಳು: ರಾಮ್ ಚರಣ್ ನಂಬರ್​ 1, ಎರಡನೇ ಸ್ಥಾನದಲ್ಲಿ ದೀಪಿಕಾ

ABOUT THE AUTHOR

...view details