ಸ್ಯಾಂಡಲ್ವುಡ್ ಸಿಂಡ್ರೆಲಾ ಎಂದೇ ಕರೆಯಲಾಗುವ ನಟಿ ರಾಧಿಕಾ ಪಂಡಿತ್ ಈ ವರ್ಷ ಸರಳವಾಗಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಮಾರ್ಚ್ 7 ರಂದು 39ನೇ ವರ್ಷದ ಬರ್ತ್‌ಡೇ ಸಂಭ್ರಮದಲ್ಲಿದ್ದ 'ಮಿಸಸ್ ರಾಮಾಚಾರಿ' ಇದೀಗ ಜನ್ಮದಿನದಂದು ಕಳೆದ ಕ್ಷಣಗಳ ಕುರಿತಾದ ಫೋಟೋಗಳನ್ನು ಇನ್ಸ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ ಅವರು ಬರ್ತ್‌ಡೇ ಆಚರಿಸಿದ್ದೆಲ್ಲಿ ಎಂಬುದನ್ನು ಬಹಿರಂಗಪಡಿಸಿಲ್ಲ.
ಬಿಳಿ ಬಣ್ಣದ ಔಟ್ಫಿಟ್ನಲ್ಲಿ ಕಾಣಿಸಿಕೊಂಡ ರಾಧಿಕಾ ಪಂಡಿತ್, ಪತಿ ಯಶ್ ಹಾಗೂ ಮಗಳು ಐರಾ ಹಾಗೂ ಮಗ ಯಥರ್ವ್ ಜೊತೆ ಕೇಕ್ ಕಟ್ ಮಾಡಿದ್ದಾರೆ. ಫ್ಯಾಮಿಲಿ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಟಿಗೆ ಐರಾ ಕೇಕ್ ಕಟ್ ಮಾಡಲು ಸಹಾಯ ಮಾಡುವುದನ್ನು ಫೋಟೋದಲ್ಲಿ ನೋಡಬಹುದು. ಹಾಗೆಯೇ ರಾಧಿಕಾ ಪಂಡಿತ್ ಅವರ ತಾಯಿ ಮತ್ತು ತಂದೆ ಕೂಡ ಬರ್ತ್‌ಡೇ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ. ಎಲ್ಲರೂ ಬರ್ತ್‌ಡೇ ಆಚರಣೆಯ ಖುಷಿಯಲ್ಲಿರುವುದು ಚಿತ್ರದಲ್ಲಿದೆ.
ಇದನ್ನೂ ಓದಿ:ಕೆಜಿಎಫ್ ಚಾಪ್ಟರ್-2 ಗೆ ನೀವೆಲ್ಲರೂ ಪಿಲ್ಲರ್ಗಳು: ತಾರಾಬಳಗಕ್ಕೆ ಅಭಿನಂದಿಸಿದ ರಾಧಿಕಾ ಪಂಡಿತ್
ರಾಧಿಕಾ ಹಂಚಿಕೊಂಡ ಫೋಟೋಗಳಲ್ಲಿ ಮೊದಲು ಪತಿ ಮತ್ತು ಮಕ್ಕಳೊಂದಿಗೆ ಕೇಕ್ ಕತ್ತರಿಸಿದ್ದಾರೆ. ಮತ್ತೊಂದು ಫೋಟೋದಲ್ಲಿ ಮುದ್ದಿನ ಮಡದಿಯ ಜೊತೆ ರಾಕಿ ಬಾಯ್ ಯಶ್ ಸಂತಸದಿಂದ ಕುಳಿತು ಕೇಕ್ ಸವಿಯುತ್ತಿದ್ದಾರೆ. ಇನ್ನೊಂದು ಫೋಟೋದಲ್ಲಿ ಅಪ್ಪ, ಅಮ್ಮನ ಜೊತೆ ಇದ್ದಾರೆ. ಇನ್ನು ಫೋಟೋಗಳನ್ನು ಶೇರ್ ಮಾಡಿ ಕ್ಯಾಪ್ಶನ್ ಕೊಟ್ಟ ರಾಧಿಕಾ ಪಂಡಿತ್, ಚಳಿ, ಕೇಕ್ ಮತ್ತು ಮುದ್ದಾಟ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಜನ್ಮದಿನವನ್ನು ಅದ್ಭುತವಾಗಿ ಕಳೆದಿದ್ದಕ್ಕೆ ಹಾಗೂ ಶುಭ ಕೋರಿದ್ದಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.