ಕರ್ನಾಟಕ

karnataka

ETV Bharat / entertainment

ವಾಮನ ಸಿನಿಮಾಗೆ ನಾಯಕಿ ಫಿಕ್ಸ್ : ಧನ್ವೀರ್​​ಗೆ ಜೊತೆಯಾದ ತುಳುನಾಡ ಬೆಡಗಿ - ರಚನಾ ರೈ ಲೇಟೆಸ್ಟ್​​ ನ್ಯೂಸ್​​

ಶಂಕರ್ ರಾಮನ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ವಾಮನ ಸಿನಿಮಾಗೆ ತುಳುನಾಡ ಕುವರಿ ರಚನಾ ರೈ ಎಂಟ್ರಿ ಕೊಟ್ಟಿದ್ದಾರೆ. ಈ ಹಿಂದೆ ತುಳು ಸಿನಿಮಾವೊಂದರಲ್ಲಿ ನಟಿಸಿದ್ದ ರಚನಾಗೆ ಇದು ಮೊದಲ ಕನ್ನಡ ಸಿನಿಮಾವಾಗಿದೆ..

Rachana rai,Dhanveer Gowda
ರಚನಾ ರೈ, ಧನ್ವೀರ್ ಗೌಡ

By

Published : Apr 29, 2022, 2:22 PM IST

ಬಜಾರ್ ಹಾಗೂ ಬೈ ಟು ಲವ್ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆ ಹುಟ್ಟಿಸಿರುವ ನಟ‌ ಧನ್ವೀರ್ ಗೌಡ. ಸದ್ಯ 'ವಾಮನ' ಎಂಬ ಸಿನಿಮಾ ಮಾಡುತ್ತಿರುವ ಧನ್ವೀರ್ ಗೌಡ ಸೈಲೆಂಟ್ ಚಿತ್ರೀಕರಣ ಮಾಡುತ್ತಿದ್ದಾರೆ. ಇದೀಗ ವಾಮನ ಚಿತ್ರತಂಡದ ಅಂಗಳದಿಂದ ಮೆಗಾ ಅಪ್ಡೇಟ್‌ವೊಂದು ಸಿಕ್ಕಿದೆ. ಧನ್ವೀರ್‌ಗೆ ನಾಯಕಿ ಯಾರು ಎಂಬ ಅಭಿಮಾನಿಗಳ ಕುತೂಹಲದ ಪ್ರಶ್ನೆಗೀಗ ಚಿತ್ರತಂಡ ಉತ್ತರ ನೀಡಿದೆ.

‘ವಾಮನ’ ಜೊತೆಯಾದ ರಚನಾ ರೈ

ಶಂಕರ್ ರಾಮನ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ವಾಮನ ಸಿನಿಮಾಗೆ ತುಳುನಾಡ ಕುವರಿ ರಚನಾ ರೈ ಎಂಟ್ರಿ ಕೊಟ್ಟಿದ್ದಾರೆ. ಈ ಹಿಂದೆ ತುಳು ಸಿನಿಮಾವೊಂದರಲ್ಲಿ ನಟಿಸಿದ್ದ ರಚನಾಗೆ ಇದು ಮೊದಲ ಕನ್ನಡ ಸಿನಿಮಾವಾಗಿದೆ. ತಮ್ಮ ಪಾತ್ರದ ಬಗ್ಗೆ ಹೆಚ್ಚೇನೂ ಗುಟ್ಟುಬಿಟ್ಟು ಕೊಡದ ರಚನಾ, ಬಬ್ಲಿ ಪಾತ್ರದ ಮೂಲಕ ಅಭಿಮಾನಿಗಳನ್ನು ರಂಜಿಸುವುದಾಗಿ ಹೇಳಿಕೊಂಡಿದ್ದಾರೆ.

ರಚನಾ ರೈ

ಸಕಲಕಲಾವಲ್ಲಭೆ : ಬ್ಯಾಡ್ಮಿಂಟನ್ ಪ್ಲೇಯರ್ ಆಗಿರುವ ಈ ತುಳುನಾಡ ಚೆಲುವೆ, ಮಾಡೆಲ್, ಡ್ಯಾನ್ಸರ್ ಹಾಗೇ ಬರಹಗಾರ್ತಿ ಕೂಡ. ಓ‌ ಮೈ ಡಾಗ್ ಎಂಬ ಪುಸ್ತಕ ಬರೆದಿರುವ ರಚನಾ ಸಕಲಕಲಾವಲ್ಲಭೆ. ಸದ್ಯ ವಾಮನ ಸಿನಿಮಾದಲ್ಲಿ ಧನ್ವೀರ್​​ಗೆ ನಾಯಕಿಯಾಗಿ ನಟಿಸುತ್ತಿರುವ ರಚನಾ ರೈ, ಈಗಾಗಲೇ ಸೆಕೆಂಡ್ ಶೆಡ್ಯೂಲ್ಡ್ ಶೂಟಿಂಗ್ ಕಂಪ್ಲೀಟ್ ಮಾಡಿದ್ದಾರೆ.

ನಟಿ ರಚನಾ ರೈ

‌ಈಕ್ವಿನಾಕ್ಸ್ ಗ್ಲೋಬಲ್ ಎಂಟರ್‌ಟೈನ್‌ಮೆಂಟ್‌ನಡಿ ಮೂಡಿ ಬರುತ್ತಿರುವ ಮಾಸ್​ ಆ್ಯಕ್ಷನ್ ಎಂಟರ್​ಟೇನರ್ ವಾಮನ ಸಿನಿಮಾಗೆ ಚೇತನ್ ಕುಮಾರ್ ಬಂಡವಾಳ ಹೂಡಿದ್ದಾರೆ. ಕನ್ನಡ ಮತ್ತು ತೆಲುಗು ಚಿತ್ರಗಳಿಗೆ ಸಂಭಾಷಣಾಗಾರನಾಗಿ ಕಾರ್ಯ ನಿರ್ವಹಿಸಿದ್ದ ಶಂಕರ್ ರಾಮನ್ ಈಗ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ.

ತುಳುನಾಡ ಕುವರಿ ರಚನಾ ರೈ

ಇದನ್ನೂ ಓದಿ:ಸಂಕ್ರಾಂತಿಯಂದೇ ಧನ್ವೀರ್ ಅಭಿನಯದ ಹೊಸ ಸಿನಿಮಾ ಶೀರ್ಷಿಕೆ ಘೋಷಣೆ

ABOUT THE AUTHOR

...view details