ನಟ ಪ್ರಭಾಸ್ ಅವರ ಮುಂಬರುವ ಬಿಗ್ ಬಜೆಟ್ 3ಡಿ ಚಿತ್ರ ಆದಿಪುರುಷ್ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಓಂ ರಾವುತ್ ನಿರ್ದೇಶನದ ಈ ಚಿತ್ರ ಜನವರಿ 12, 2023(ಸಂಕ್ರಾಂತಿ) ರಂದು ಬಿಡುಗಡೆಯಾಗಬೇಕಿತ್ತು. ಆದರೆ ಜೂನ್ 16, 2023 ರಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಈ ಬಗ್ಗೆ ನಿರ್ದೇಶಕ ಓಂ ರಾವುತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
'ಆದಿಪುರುಷ್ ಕೇವಲ ಒಂದು ಚಲನಚಿತ್ರವಲ್ಲ. ಅದು ಪ್ರಭು ಶ್ರೀರಾಮನ ಮೇಲಿನ ನಮ್ಮ ಭಕ್ತಿ, ನಮ್ಮ ಸಂಸ್ಕೃತಿ ಮತ್ತು ಇತಿಹಾಸದ ಮೇಲಿನ ಬದ್ಧತೆಯನ್ನು ಪ್ರತಿನಿಧಿಸುತ್ತದೆ. ವೀಕ್ಷಕರಿಗೆ ಸಂಪೂರ್ಣ ದೃಶ್ಯ ಅನುಭವವನ್ನು ನೀಡಲು, ನಾವು ಚಿತ್ರದಲ್ಲಿ ಕೆಲಸ ಮಾಡುವ ತಂಡಗಳಿಗೆ ಹೆಚ್ಚಿನ ಸಮಯ ನೀಡಬೇಕಾಗಿದೆ. ಆದಿಪುರುಷ್ ಜೂನ್ 16, 2023 ರಂದು ಬಿಡುಗಡೆಯಾಗಲಿದೆ. ಭಾರತವು ಹೆಮ್ಮೆಪಡುವಂತಹ ಚಲನಚಿತ್ರವನ್ನು ಮಾಡಲು ನಾವು ಬದ್ಧರಾಗಿದ್ದೇವೆ. ನಿಮ್ಮ ಬೆಂಬಲ, ಪ್ರೀತಿ ಮತ್ತು ಆಶೀರ್ವಾದವೇ ನಮ್ಮನ್ನು ಮುಂದುವರಿಸಿಕೊಂಡು ಹೋಗುತ್ತಿದೆ' ಎಂದು ತಿಳಿಸಿದ್ಧಾರೆ.