ಕರ್ನಾಟಕ

karnataka

ETV Bharat / entertainment

ಬಿಗ್​​ ಬಾಸ್​ ಮನೆಗೆ ಹಳೇ ಸ್ಪರ್ಧಿಗಳ ಎಂಟ್ರಿ! - kannada Bigg Boss

ಬಿಗ್​​ ಬಾಸ್​ ಮನೆಯೊಳಗೆ ಹಳೇ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ.

kannada Bigg Boss
ಕನ್ನಡ ಬಿಗ್​​ ಬಾಸ್​

By ETV Bharat Karnataka Team

Published : Jan 16, 2024, 2:07 PM IST

ಫಿನಾಲೆ ಹೊಸ್ತಿಲಲ್ಲಿರೋ ಜನಪ್ರಿಯ ಕನ್ನಡ ಕಿರುತೆರೆ ಕಾರ್ಯಕ್ರಮ 'ಬಿಗ್‌ ಬಾಸ್' ಶೋ ಮನೆಮಂದಿಗೆ ಒಂದು ಸರ್ಪೈಸ್ ನೀಡಿದ್ದಾರೆ. ಆ ಸರ್ಪೈಸ್ ಹೇಗಿದೆ ಎಂಬುದು ಜಿಯೋಸಿನಿಮಾ ಬಿಡುಗಡೆ ಮಾಡಿರುವ ಇಂದಿನ ಪ್ರೋಮೋದಲ್ಲಿ ಜಾಹೀರಾಗಿದೆ. 'ಹಳೇ ಗೆಳೆಯರ ಭೇಟಿಯಿಂದ ಯಾರಿಗೆ ಲಾಭ? ಯಾರಿಗೆ ನಷ್ಟ?' ಶೀರ್ಷಿಕೆಯಡಿ ಪ್ರೋಮೋ ಅನಾವರಣಗೊಂಡಿದ್ದು, ಸಂಪೂರ್ಣ ಸಂಚಿಕೆ ವೀಕ್ಷಿಸುವ ಪ್ರೇಕ್ಷಕರ ಕುತೂಹಲ ಹೆಚ್ಚಳಗೊಂಡಿದೆ.

ಬೆಚ್ಚಿ ಬಿದ್ದ ತುಕಾಲಿ ಸಂತೋಷ್: ನಿಮಗಾಗಿ ಒಂದು ಸರ್ಪೈಸ್ ಕಾದಿದೆ. ಗಾರ್ಡನ್ ಏರಿಯಾಗೆ ಹೋಗಿ ಎಂದು 'ಬಿಗ್‌ ಬಾಸ್' ಮನೆ ಮಂದಿಗೆ ಆದೇಶಿಸಿದ್ದಾರೆ. ಗಾರ್ಡನ್​ ಏರಿಯಾದಲ್ಲಿ ಒಂದು ಟೇಬಲ್ ಮೇಲೆ ಬಲೂನ್, ಕೇಕ್ ಜೊತೆಗೆ ಎರಡು ಬಾಕ್ಸ್‌ಗಳನ್ನು ಇರಿಸಲಾಗಿದೆ. ತುಕಾಲಿ ಸಂತೋಷ್ ಅವರು ಒಂದು ಬಾಕ್ಸ್ ಅನ್ನು ಎತ್ತಿದ್ದೇ ಬೆಚ್ಚಿ ಹಿಂದಕ್ಕೆ ಜಿಗಿದಿದ್ದಾರೆ. ಉಳಿದವರು ಭಯದಿಂದ ಕಿರುಚಿದ್ದಾರೆ. ಯಾಕೆಂದರೆ ಆ ಬಾಕ್ಸ್ ಒಳಗಿದ್ದಿದ್ದು ಒಂದು ತಲೆ.

ಬಿಗ್‌ ಬಾಸ್ ಹಳೇ ಸ್ಪರ್ಧಿ ಇಶಾನಿ ಎಂಟ್ರಿ:ಇದೇನು? ಬಿಗ್‌ ಬಾಸ್ ಮನೆಯೊಳಗೆ ಕ್ರೈಂ ಸೀನ್ ಎಂದು ಕಣ್ಣುಜ್ಜಿಕೊಂಡು ನೋಡಿದ್ರೆ ತಲೆ ಅಲುಗಾಡುತ್ತಿದೆ. ಕಣ್ಣುಗಳು ತೆರೆಯುತ್ತಿವೆ. ಮುಖದಲ್ಲಿ ನಗುವಿದೆ. ಅದು ಮತ್ಯಾರೂ ಅಲ್ಲ, ಬಿಗ್‌ ಬಾಸ್ ಹಳೇ ಸ್ಪರ್ಧಿ ಇಶಾನಿ. ಟೇಬಲ್ ಕೆಳಗೆ ಅವಿತಿಟ್ಟುಕೊಂಡು ತಲೆಯನ್ನಷ್ಟೇ ಟೇಬಲ್​​ನಿಂದ ಹೊರಗೆ ಹಾಕಿ ಸಖತ್ ಶಾಕ್ ಕೊಟ್ಟಿದ್ದಾರೆ ತನಿಶಾ. ಅವರ ಜೊತೆಗೆ ರಕ್ಷಿತ್, ಸ್ನೇಹಿತ್ ಮತ್ತು ನೀತು ಕೂಡ ಬಿಗ್‌ ಬಾಸ್ ಮನೆಯೊಳಗೆ ರೀ ಎಂಟ್ರಿ ಕೊಟ್ಟಿದ್ದಾರೆ.

ಫಿನಾಲೆ ಹಂತ ತಲುಪಿರೋ ಸ್ಪರ್ಧಿಗಳಿಗೆ ಕಿವಿಮಾತು:ಎಲ್ಲಾ ಸ್ಪರ್ಧಿಗಳ ಜೊತೆಗೂ ಮಾತಾಡುತ್ತಾ ಅವರಿಗೆ ಕಿವಿಮಾತು ಹೇಳುತ್ತಿದ್ದಾರೆ. ನೀತು, ಪ್ರತಾಪ್‌ಗೆ 'ನಿನಗೆ ಸಪೋರ್ಟ್ ಅಂತ ನಿಂತಿದ್ದೇ ಸಂಗೀತಾ. ಅದೇ ಬ್ರೇಕ್ ಆಗಿಬಿಟ್ಟರೆ ಏನು ಕಥೆ?' ಎಂದು ಪ್ರಶ್ನಿಸಿದ್ದಾರೆ. ನಮ್ರತಾ, 'ನಾನು ಮನೆಯೊಳಗೆ ಕಾರ್ತಿಕ್ ಜೊತೆಗೆ ನಡೆದುಕೊಳ್ಳುತ್ತಿರುವುದನ್ನು ನೋಡಿ ಸ್ನೇಹಿತ್ ಉರ್ಕೊಂಡಿದಾರಾ?' ಎಂದು ಕೇಳುತ್ತಿದ್ದ ಹಾಗೆಯೇ ಸ್ನೇಹಿತ್, ಕಿಚನ್‌ನಲ್ಲಿ ಪ್ರತ್ಯಕ್ಷರಾಗಿ 'ಹಲೋ ನಮ್ರತಾ' ಎಂದು ನಮ್ರತಾರಿಗೆ ನಮಸ್ತೆ ಹೇಳಿದ್ದಾರೆ.

ಇದನ್ನೂ ಓದಿ:ಪ್ರಜ್ವಲ್‌ ಅಭಿನಯದ 'ಚೀತಾ' ಶೂಟಿಂಗ್​; ಅದ್ಧೂರಿ ಮಾರ್ಕೆಟ್ ಸೆಟ್ ನಿರ್ಮಾಣ

ಯಾರಿಗೆ ಅನುಕೂಲ, ಯಾರಿಗೆ ಅನಾನುಕೂಲ?:ಒಟ್ಟಾರೆ ಹಳೇ ಸ್ಪರ್ಧಿಗಳ ಎಂಟ್ರಿ ಮನೆಯೊಳಗೆ ಸಖತ್ ಪಾಸಿಟಿವ್​ ವೈಬ್ರೇಷನ್ ಕ್ರಿಯೇಟ್ ಮಾಡಿದೆ. ಇದರಿಂದ ಯಾರಿಗೆ ಅನುಕೂಲ, ಯಾರಿಗೆ ಅನಾನುಕೂಲ ಎಂಬುದು ಈ ವಾರಾಂತ್ಯದ ಹೊತ್ತಿಗೆ ತಿಳಿಯಲಿದೆ. ಬಿಗ್‌ ಬಾಸ್ ಕನ್ನಡ 24 ಗಂಟೆಯ ನೇರಪ್ರಸಾರವನ್ನು ಮತ್ತು ಎಪಿಸೋಡ್‌ಗಳನ್ನು ಜಿಯೋ ಸಿನಿಮಾದಲ್ಲಿ ಉಚಿತವಾಗಿ ನೋಡಿ. ಪ್ರತಿದಿನದ ಎಪಿಸೋಡ್‌ಗಳನ್ನು ಕಲರ್ಸ್ ಕನ್ನಡದಲ್ಲಿ ರಾತ್ರಿ 9.30ಕ್ಕೆ ವೀಕ್ಷಿಸಿ.

ಇದನ್ನೂ ಓದಿ:ಫಿಲ್ಮ್‌ಫೇರ್ ಪ್ರಶಸ್ತಿ 2024: ನಾಮನಿರ್ದೇಶನಗಳ ಪಟ್ಟಿ; 19 ವಿಭಾಗಗಳಲ್ಲಿ 'ಅನಿಮಲ್'​ಗೆ ಸ್ಥಾನ

ABOUT THE AUTHOR

...view details