ಕರ್ನಾಟಕ

karnataka

ETV Bharat / entertainment

ಧಾರಾವಾಹಿ ನಟಿ ರಶ್ಮಿರೇಖಾ ಭುವನೇಶ್ವರದಲ್ಲಿ ಆತ್ಮಹತ್ಯೆ.. ಡೆತ್​​ನೋಟ್​ ಪತ್ತೆ! - ರಶ್ಮಿರೇಖಾ ಓಜಾ ಆತ್ಮಹತ್ಯೆ

ಕೆಮಿತಿ ಕಹಿಬಿ ಕಹಾ ಧಾರಾವಾಹಿ ನಟಿ ಭುವನೇಶ್ವರದ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮನೆಯಲ್ಲಿ ಡೆತ್​ನೋಟ್​ ಪತ್ತೆಯಾಗಿದ್ದು, ಸಾವಿಗೆ ಕಾರಣ ತಿಳಿದು ಬಂದಿಲ್ಲ.

Rashmirekha Ojha
ರಶ್ಮಿರೇಖಾ ಓಜಾ

By

Published : Jun 20, 2022, 7:04 PM IST

ಭುವನೇಶ್ವರ(ಒಡಿಶಾ):ಒಡಿಯಾ ಟಿವಿ ಧಾರಾವಾಹಿ ನಟಿ ರಶ್ಮಿರೇಖಾ ಓಜಾ ಅವರು ಜೂನ್ 18 ರಂದು ನಗರದ ನಯಾಪಲ್ಲಿ ಪೊಲೀಸ್ ವ್ಯಾಪ್ತಿಯ ಗಡಸಾಹಿ ಪ್ರದೇಶದ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ರಾತ್ರಿ 10.30ರ ಸುಮಾರಿಗೆ ನಟಿ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದಾರೆ. ಘಟನೆಯ ಕುರಿತು ಹೆಚ್ಚಿನ ತನಿಖೆ ಆರಂಭಿಸಿದ್ದಾರೆ. ಈ ಸಂಬಂಧ ಅಸಹಜ ಸಾವು ಪ್ರಕರಣ ದಾಖಲಾಗಿದೆ.

ಶವದ ಬಳಿ ಮೇಜಿನ ಮೇಲೆ ಡೆತ್​ ನೋಟ್​ ಪತ್ತೆ ಆಗಿದೆ. ಈ ಟಿಪ್ಪಣಿಯನ್ನು ನಟಿಯೇ ಬರೆದಿದ್ದಾರಾ ಎಂಬ ಬಗ್ಗೆ ಶಂಕೆ ವ್ಯಕ್ತವಾಗಿದೆ. ಡೆತ್​ನೋಟ್​ನಲ್ಲಿ ನನ್ನ ಸಾವಿಗೆ ಯಾರು ಹೊಣೆ ಅಲ್ಲ ಎಂದು ಉಲ್ಲೇಖಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.

ರಶ್ಮಿರೇಖಾ ಓಜಾ

‘ಕೆಮಿತಿ ಕಹಿಬಿ ಕಹಾ’ ಧಾರಾವಾಹಿಯಿಂದ ರಶ್ಮಿರೇಖಾ ಓಜಾ ಜನಪ್ರಿಯರಾದರು. ಅವರು ಮೂಲತಃ ಜಗತ್‌ಸಿಂಗ್‌ಪುರ ಜಿಲ್ಲೆಯ ಸಂಕೇತ್‌ಪಟಾನಾದವರು. 12ನೇ ತರಗತಿಯ ನಂತರ ನಟನೆಯನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದರು.

ಇದನ್ನೂ ಓದಿ:ಅನುಪಮ್​ ಖೇರ್​ರ 525 ನೇ ಸಿನಿಮಾ 'ದಿ ಸಿಗ್ನೇಚರ್'​.. ಟ್ವಿಟ್ಟರ್​ನಲ್ಲಿ ಫಸ್ಟ್​ಲುಕ್​ ಬಿಡುಗಡೆ

ABOUT THE AUTHOR

...view details