ಕರ್ನಾಟಕ

karnataka

ETV Bharat / entertainment

'ನೋಡಿ ಸ್ವಾಮಿ ಇವನು ಇರೋದೆ ಹೀಗೆ' ಸಿನಿಮಾಗೆ ಕ್ರೇಜಿಸ್ಟಾರ್ ಸಾಥ್ - ನಟ ರಿಷಿ ಅಭಿನಯದ ನೋಡಿ ಸ್ವಾಮಿ ಇವನು ಇರೋದೆ ಹೀಗೆ ಸಿನಿಮಾ

ನೋಡಿ ಸ್ವಾಮಿ ಇವನು ಇರೋದೆ ಹೀಗೆ ಚಿತ್ರದ ಟ್ರೈಲರ್​​ರನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಬಿಡುಗಡೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Nodi Swamy Ivanu Irode Heege Movie Trailer launch
'ನೋಡಿ ಸ್ವಾಮಿ ಇವನು ಇರೋದೆ ಹೀಗೆ' ಸಿನಿಮಾಗೆ ಕ್ರೇಜಿಸ್ಟಾರ್ ಸಾಥ್

By

Published : Jul 20, 2022, 10:51 AM IST

ಆಪರೇಷನ್ ಅಲಮೇಲಮ್ಮ, ಕವಲು ದಾರಿ ಹೀಗೆ ವಿಭಿನ್ನ ಸಿನಿಮಾಗಳ ಮೂಲಕ ಸ್ಯಾಂಡಲ್‌ವುಡ್​​ನಲ್ಲಿ ಭರವಸೆ ಮೂಡಿಸಿರುವ ನಟ ರಿಷಿ. ಇದೀಗ ಕ್ಯಾಚಿ ಟೈಟಲ್ ಹೊಂದಿರುವ 'ನೋಡಿ ಸ್ವಾಮಿ ಇವನು ಇರೋದೆ ಹೀಗೆ' ಎಂಬ ಸಿನಿಮಾದ ಜಪ ಮಾಡುತ್ತಿರುವ ನಟನಿಗೆ ಕ್ರೇಜಿಸ್ಟಾರ್ ರವಿಚಂದ್ರನ್ ಬೆಂಬಲ ಸಿಕ್ಕಿದೆ.

ಕವಲುದಾರಿಯ ನಂತರ ವಿಭಿನ್ನ ಪಾತ್ರ ಹಾಗೂ ಕಥೆ ಮೂಲಕ ಎದುರು ನೋಡುವ ರಿಷಿ, ಸಿನಿಮಾ ಆಯ್ಕೆ ವಿಚಾರದಲ್ಲೂ ಚ್ಯುಸಿ. ಹೀಗೆ ಅಳೆದು ತೂಗಿ ಆಯ್ಕೆ ಮಾಡಿಕೊಂಡ ಸಿನಿಮಾಗಳಲ್ಲೊಂದು ನೋಡಿ ಸ್ವಾಮಿ ಇವನು ಇರೋದೆ ಹೀಗೆ. ಚಿತ್ರದ ಟ್ರೈಲರ್​​ರನ್ನು ಹಿರಿಯ ನಟ ರವಿಚಂದ್ರನ್ ಬಿಡುಗಡೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

'ನೋಡಿ ಸ್ವಾಮಿ ಇವನು ಇರೋದೆ ಹೀಗೆ' ಸಿನಿಮಾದ ಪೋಸ್ಟರ್​​

ಫಸ್ಟ್ ಲುಕ್ ಮೂಲಕ ಕುತೂಹಲ ಮೂಡಿಸಿದ್ದ ಈ ಚಿತ್ರ ಪ್ರಯೋಗಾತ್ಮಕ ಸಬ್ಜೆಕ್ಟ್ ಒಳಗೊಂಡಿದೆ. ಡಿಪ್ರೆಷನ್ ಮತ್ತು ಆತ್ಮಹತ್ಯೆ ಕುರಿತ ಕಥಾಹಂದರ ಚಿತ್ರದಲ್ಲಿದೆ.

ಕಥೆ ಸೀರಿಯಸ್ ಆಗಿ ಸಾಗುತ್ತಿದ್ದರೂ ನೋಡುಗರಿಗೆ ನಾಯಕನ ಕಷ್ಟ ಕಂಡಾಗ ನಗು ತರಿಸುತ್ತದೆ ಎನ್ನುತ್ತಾರೆ ರಿಷಿ. ಯುವಜನತೆಯ ಸಮಸ್ಯೆಗಳ ಕುರಿತು ಸಿನಿಮಾ ಬೆಳಕು ಚೆಲ್ಲಲಿದೆ ಎನ್ನುವುದು ಚಿತ್ರತಂಡದ ಮಾತು. ಚಿತ್ರದಲ್ಲಿ ಧನ್ಯ ಬಾಲಕೃಷ್ಣ, ಗ್ರೀಷ್ಮಾ ಶ್ರೀಧರ್, ಅಪೂರ್ವ ಎಸ್.ಭಾರಧ್ವಜ್, ಭಾವನಿ ಪ್ರಕಾಶ್, ನಾಗಭೂಷಣ, ಮಹದೇವ್ ಪ್ರಸಾಧ್ ಒಳಗೊಂಡ ತಾರಾ ಬಳಗವಿದೆ.

ಇಸ್ಲಾಹುದ್ದೀನ್ ಎನ್.ಎಸ್ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಅಮ್ರೇಜ್ ಸೂರ್ಯವಂಶಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ವಿಷ್ಣು ಪ್ರಸಾದ್​​ ಪಿ. ದುಲೀಪ್ ಕುಮಾರ್ ಎಂ.ಎಸ್ ಕ್ಯಾಮೆರಾ ವರ್ಕ್, ಪ್ರಸನ್ನ ಸಿವರಾಮನ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಕಾಮಿಡಿ ಕಚಗುಳಿ ಇಡುವ ಚಿತ್ರ ಓಟಿಟಿ ಪ್ಲಾಟ್‌ಫಾರಂ (ZEE 5)ನಲ್ಲಿ ಜುಲೈ 22ರಂದು ಬಿಡುಗಡೆಯಾಗುತ್ತಿದೆ.

ಇದನ್ನೂ ಓದಿ:ನಟ ರಿಷಿ ಹುಟ್ಟುಹಬ್ಬದಂದು ಹೊಸ ಸಿನಿಮಾದ ಟೈಟಲ್ ರಿಲೀಸ್

ABOUT THE AUTHOR

...view details