'ಪುಷ್ಪಾ' ಸಿನಿಮಾ ಹವಾ ಇದೀಗ ರಾಜ್ಯ, ದೇಶಗಳ ಗಡಿ ದಾಟಿದೆ. ಮಹಿಳಾ ಕ್ರಿಕೆಟಿಗರೂ ಈ ಸಿನಿಮಾ ಶೈಲಿಯನ್ನು ಅನುಕರಿಸುತ್ತಿದ್ದಾರೆ. ಐಪಿಎಲ್ನಲ್ಲಿ ರವೀಂದ್ರ ಜಡೇಜಾ ಹಾಗು ಒಬೆಡ್ ಮೆಕಾಯ್ ವಿಕೆಟ್ ಪಡೆದಾಗ ಪುಷ್ಪಾ ಶೈಲಿಯನ್ನು ಪ್ರದರ್ಶಿಸಿ ಸಂಭ್ರಮಿಸಿದ್ದರು. ಇದೀಗ ದುಬೈನಲ್ಲಿ ನಡೆಯುತ್ತಿರುವ ದಿ ಫೇರ್ಬ್ರೇಕ್ ಇನ್ವಿಟೇಶನಲ್ ಟೂರ್ನಮಂಟ್ನಲ್ಲೂ ಆಟಗಾರ್ತಿಯೊಬ್ಬರು ಇದೇ ಕಾರಣಕ್ಕೆ ಗಮನ ಸೆಳೆದಿದ್ದಾರೆ.
ಟಾರ್ನಡೋಸ್ ವಿಮೆನ್ ಮತ್ತು ಸಫೈರ್ ವಿಮೆನ್ ನಡುವೆ ಮೇ 5ರಂದು ಕ್ರಿಕೆಟ್ ಪಂದ್ಯ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ನೇಪಾಳಿ ಆಟಗಾರ್ತಿ ಸೀತಾ ರಾಣಾ ಮಗರ್ ಅವರು ಎದುರಾಳಿಯ ವಿಕೆಟ್ ಪಡೆದ ಖುಷಿಯಲ್ಲಿ, ತನ್ನ ಗಲ್ಲದ ಕೆಳಗೆ ಕೈ ಸರಿಸಿ, ತೆಲುಗಿನ ಸೂಪರ್ ಹಿಟ್ 'ಪುಷ್ಪಾ' ಸಿನಿಮಾದಲ್ಲಿ ನಟ ಅಲ್ಲೂ ಅರ್ಜುನ್ ಖದರ್ ತೋರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಐಸಿಸಿ ಕೂಡಾ ವಿಡಿಯೋ ಪೋಸ್ಟ್ ಮಾಡಿದೆ.