ಕರ್ನಾಟಕ

karnataka

ETV Bharat / entertainment

ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2: ಭರಪೂರ ಮನರಂಜನೆಗೆ ವೇದಿಕೆ ರೆಡಿ - ಈಟಿವಿ ಭಾರತ​ ಕರ್ನಾಟಕ

ಅಮ್ಮ ಮತ್ತು ಮಕ್ಕಳ ರಿಯಾಲಿಟಿ ಶೋ ನನ್ನಮ್ಮ ಸೂಪರ್ ಸ್ಟಾರ್ ಮೊದಲ ಆವೃತ್ತಿ ಹಿಟ್​ ಆಗಿತ್ತು. ಈ ಹಿನ್ನಲೆಯಲ್ಲಿ ಎರಡನೇ ಆವೃತ್ತಿ ಮತ್ತೆ ಆರಂಭಿಸಲಾಗಿದೆ, ಹಬ್ಬದ ವಾರದಲ್ಲಿ ವಿಶೇಷ ಸಂಚಿಕೆ ಬರಲಿದ್ದು ಭರಪೂರ ಮನರಂಜನೆ ಸಿಗಲಿದೆ.

nannamma-super-star-season-two
ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2

By

Published : Oct 19, 2022, 9:53 PM IST

ಕಲರ್ಸ್ ಕನ್ನಡ ವಾಹಿನಿಯ ರಿಯಾಲಿಟಿ ಶೋ 'ನನ್ನಮ್ಮ ಸೂಪರ್ ಸ್ಟಾರ್' ಪ್ರೇಕ್ಷಕರನ್ನು ರಂಜಿಸಿತ್ತು. ಮೊದಲ ಸೀಸನ್ ಮೆಗಾ ಹಿಟ್ ಆದ ಬಳಿಕ ಸೀಸನ್ 2 ಮೂಲಕ ಮತ್ತೊಮ್ಮೆ ಕಿರುತೆರೆ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಲು ತಂಡ ಸಜ್ಜಾಗಿದ್ದು, ಈಗಾಗಲೇ 'ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2' ಗ್ರ್ಯಾಂಡ್ ಓಪನಿಂಗ್ ಕೂಡ ಆಗಿದೆ. ಮೊದಲ ಸೀಸನ್​ನಲ್ಲಿ ಸೆಲೆಬ್ರೆಟಿ ತಾಯಿ ಮಕ್ಕಳಿಂದ ಕೂಡಿದ್ದ ಈ ಶೋ ಈ ಬಾರಿ ಸೆಲೆಬ್ರೆಟಿಗಳ ಜೊತೆ ಸಾಮಾನ್ಯ ಜನರನ್ನೂ ಒಳಗೊಂಡಿದೆ.

ಅಕ್ಟೋಬರ್ 15ರಂದು ಸೀಸನ್ 2 ಗ್ರ್ಯಾಂಡ್ ಓಪನಿಂಗ್ ಆಗಿದ್ದು, ಎರಡು ಎಪಿಸೋಡ್​ಗಳು ಪ್ರಸಾರವಾಗಿವೆ. ದೀಪಾವಳಿ ಸ್ಪೆಷಲ್ ಎಪಿಸೋಡ್ ಚಿತ್ರೀಕರಣದಲ್ಲಿ ತಂಡ ಬ್ಯುಸಿಯಾಗಿದ್ದು, ಹಬ್ಬದ ಸಡಗರ ಹೆಚ್ಚಿಸಲು ಅಮ್ಮ ಮಕ್ಕಳ 12 ಹೊಸ ಜೋಡಿಗಳು ರೆಡಿಯಾಗಿದ್ದಾರೆ. ಈ ಬಾರಿ ನಿರಂಜನ್ ದೇಶಪಾಂಡೆ ಕಾರ್ಯಕ್ರಮ ನಿರೂಪಣೆ ಮಾಡಲಿದ್ದು, ಇವರ ಜೊತೆಗೆ ಮೊದಲ ಸೀಸನ್ ವಿನ್ನರ್ ವಂಶಿಕಾ ನಿರೂಪಕಿಯಾಗಿ ರಂಜಿಸಲಿದ್ದಾರೆ. ಹಿಂದಿನಂತೆ ಹೊಸ ಸೀಸನ್​ನಲ್ಲಿಯೂ ನಟಿ ತಾರಾ, ಅನು ಪ್ರಭಾಕರ್ ಹಾಗೂ ಸೃಜನ್ ಲೋಕೇಶ್ ತೀರ್ಪುಗಾರರಾಗಿ ಇರಲಿದ್ದಾರೆ.

ಈ ಬಗ್ಗೆ ಮಾತನಾಡಿದ ಕಲರ್ಸ್ ಕನ್ನಡದ ಪ್ರೋಗ್ರಾಮ್ ಹೆಡ್ ಪ್ರಕಾಶ್, ನನ್ನಮ್ಮ ಸೂಪರ್ ಸ್ಟಾರ್ ಮಕ್ಕಳ ಇನೋಸೆನ್ಸ್ ಇಟ್ಟುಕೊಂಡು ಮನರಂಜನೆ ನೀಡುವ ಕಾರ್ಯಕ್ರಮ. ಬುದ್ಧಿವಂತಿಕೆ, ಪ್ರತಿಭೆಗಿಂತ ಮಕ್ಕಳ ಮುಗ್ಧತೆಯೇ ಈ ಕಾರ್ಯಕ್ರಮದ ಕೇಂದ್ರ ಬಿಂದು. ಮೊದಲ ಸೀಸನ್ ದೊಡ್ಡ ಮಟ್ಟದಲ್ಲಿ ಹಿಟ್ ಆದ ಕಾರಣದಿಂದ ಸೀಸನ್ 2 ಆರಂಭವಾಗಿದೆ. ಈ ಕಾರ್ಯಕ್ರಮ ಕೂಡ ಸಕ್ಸಸ್ ಆಗಲಿದೆ ಎಂದರು.

ನಟಿ ತಾರಾ ಮಾತನಾಡಿ, ಮೊದಲ ಸೀಸನ್ ಬಹಳ ದೊಡ್ಡ ಹೆಸರು ಮಾಡಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಕೂಡ ಜನಪ್ರಿಯತೆ ಗಳಿಸಿಕೊಂಡಿದ್ದರು. ಹೊಸತನದಿಂದ ಕೂಡಿದ ಶೋ ಇದಾಗಿತ್ತು. ಮೊದಲ ಸೀಸನ್ ಯಶಸ್ಸೇ ಸೀಸನ್ 2 ಆರಂಭ ಮಾಡಲು ಕಾರಣ. ಈ ಬಾರಿ ಇಡೀ ಕರ್ನಾಟಕವನ್ನು ಸುತ್ತಿ ಅಲ್ಲಿರುವ ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಸಾಮಾನ್ಯ ಜನರಿಗೂ ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದರು.

ಲೋಕೇಶ್ ಪ್ರೊಡಕ್ಷನ್ ಬ್ಯಾನರ್‌ನಡಿ ಈ ಕಾರ್ಯಕ್ರಮ ನಿರ್ಮಾಣವಾಗುತ್ತಿದೆ. ನಟ ಸೃಜನ್ ಲೋಕೇಶ್ ಪ್ರತಿಕ್ರಿಯಿಸಿ, ಕಲರ್ಸ್ ಕನ್ನಡದ ಜೊತೆ ನನ್ನದು ಎಂಟು ವರ್ಷಗಳ ಜರ್ನಿ. ಅಲ್ಲಿಂದ ಇಲ್ಲಿಯವರೆಗೂ ನನಗೆ ಸಪೋರ್ಟ್ ಮಾಡಿಕೊಂಡು ಬಂದಿದ್ದಾರೆ. ನಾನು ಪ್ರೊಡಕ್ಷನ್ ಮಾಡಿರಬಹುದು ಆದರೆ, ಒಂದು ತಂಡವಾಗಿ ನಾವು ಗೆದ್ದಿದ್ದೇವೆ. ನನ್ನಮ್ಮ ಸೂಪರ್ ಸ್ಟಾರ್, ರಾಜಾ ರಾಣಿ, ಗಿಚ್ಚಿ ಗಿಲಿ ಗಿಲಿ ಶೋ ಇದೆಲ್ಲದರ ಗೆಲುವಿಗೆ ಡೈರೆಕ್ಷನ್ ತಂಡ ಕಾರಣ. ನಿರ್ದೇಶಕ ಪ್ರಕಾಶ್ ಹಾಗೂ ವಿಜಯ್ ಕ್ರಿಯೆಟಿವಿಟಿ ಎಲ್ಲಾ ಕಾರ್ಯಕ್ರಮಗಳನ್ನು ಇಷ್ಟರ ಮಟ್ಟಿಗೆ ಗೆಲ್ಲಿಸಿದೆ. ಸ್ಪರ್ಧಿಗಳು ಕೂಡ ಅಷ್ಟೇ ಲವಲವಿಕೆಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎಂದರು.

ಇದನ್ನೂ ಓದಿ:ಮತ್ತೊಂದು ಯಶಸ್ಸಿಗೆ ಸ್ಯಾಂಡಲ್​ವುಡ್​ ಸಿದ್ಧ: ಡಾಲಿಯ ಹೆಡ್ ​ಬುಷ್​ಗೆ ಕಾಂತಾರ ಸಾರಥಿಯಿಂದ ಗುಡ್‌ಲಕ್‌

ABOUT THE AUTHOR

...view details