ಸ್ಯಾನ್ ಸಾಲ್ವಡಾರ್‌ನ ಎಲ್ ಸಾಲ್ವಡಾರ್‌ನಲ್ಲಿರುವ ಜೋಸ್ ಅಡಾಲ್ಫೊ ಪಿನೆಡಾ ಅರೆನಾದಲ್ಲಿ ನಡೆದ ಮಿಸ್ ಯುನಿವರ್ಸ್ 2023 ಈವೆಂಟ್ನಲ್ಲಿ ನಿಕರಾಗುವಾದ ಶೆನ್ನಿಸ್ ಪಲಾಸಿಯೊಸ್ ಪ್ರತಿಷ್ಟಿತ ಕಿರೀಟ ಮುಡಿಗೇರಿಸಿಕೊಂಡರು. 72ನೇ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ 84 ರಾಷ್ಟ್ರಗಳ ಸ್ಪರ್ಧಿಗಳು ಭಾಗವಹಿಸಿದ್ದರು. ಈ ಪೈಕಿ ಟಾಪ್ 20ರಲ್ಲಿ ಯಶಸ್ವಿಯಾಗಿ ಸ್ಥಾನ ಪಡೆದ ಭಾರತದ ಪ್ರತಿನಿಧಿ ಶ್ವೇತಾ ಶಾರದಾ ಅವರು ಟಾಪ್ 10 ಲಿಸ್ಟ್ನಿಂದ ಹೊರಬಿದ್ದರು.
ಭಾರತ ಪ್ರತಿನಿಧಿಸಿರುವ 23 ವರ್ಷದ ಶ್ವೇತಾ ಶಾರದಾ ಮೂಲತಃ ಚಂಡೀಗಢದವರು. ಕಳೆದ ಆಗಸ್ಟ್‌ನಲ್ಲಿ ನಡೆದ ಮಿಸ್ ದಿವಾ ಯುನಿವರ್ಸ್ 2023 ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಜೊತೆಗೆ ಮಿಸ್ ಬಾಡಿ ಬ್ಯೂಟಿಫುಲ್, ಮಿಸ್ ಟ್ಯಾಲೆಂಟೆಡ್, ಟಾಪ್ 5 ಮಿಸ್ ಫೋಟೋಜೆನಿಕ್, ಟಾಪ್ 6 ಮಿಸ್ ರ್‍ಯಾಂಪ್ ವಾಕ್ ಟೈಟಲ್ ಕೂಡ ಇವರು ಗೆದ್ದುಕೊಂಡಿದ್ದಾರೆ.
ಶ್ವೇತಾ ಶಾರದಾ ರೂಪದರ್ಶಿ, ನರ್ತಕಿಯಾಗಿ ಕೂಡ ಗುರುತಿಸಿಕೊಂಡಿದ್ದಾರೆ. ಹಿಂದಿಯ ಪಾಪ್ಯುಲರ್ ಶೋಗಳಾದ ಡ್ಯಾನ್ಸ್ ದೀವಾನೆ, ಡ್ಯಾನ್ಸ್ ಪ್ಲಸ್ ಮತ್ತು ಡ್ಯಾನ್ಸ್ ಇಂಡಿಯಾ ಡ್ಯಾನ್ಸ್‌ನಲ್ಲಿ ಭಾಗವಹಿಸಿ ಜನಪ್ರಿಯತೆ ಸಂಪಾದಿಸಿದ್ದಾರೆ.