ಕರ್ನಾಟಕ

karnataka

ETV Bharat / entertainment

ಹಾಲಿವುಡ್​ ಮೂವಿ 'ಜೋಕರ್' ಸಿಕ್ವೆಲ್​ನಲ್ಲಿ ಲೇಡಿ ಗಾಗಾ.. 2024ರಲ್ಲಿ ತೆರೆಗೆ - ವಾರ್ನರ್ ಬ್ರದರ್ಸ್​

ಜೋಕರ್ ಸಿಕ್ವೆಲ್​ನಲ್ಲಿ ಲೇಡಿ ಗಾಗಾ ಅವರು ಹಾರ್ಲೆ ಕ್ವಿನ್ ಪಾತ್ರ ಮಾಡಲಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಪಾತ್ರವು ಸಂಗೀತಮಯವಾಗಿರಲಿದೆ ಎನ್ನಲಾಗಿದೆ. ಜೂನ್ 7 ರಂದು ನಿರ್ದೇಶಕ ಟಾಡ್ ಫಿಲಿಪ್ಸ್ ಇನ್​ಸ್ಟಾದಲ್ಲಿ ಸ್ಕ್ರೀನ್ ಪ್ಲೇ ಕವರ್ ಪೋಸ್ಟ್ ಮಾಡಿದ್ದು, ಫೋಲಿ ಎ ಡ್ಯೂ ಸಬ್ ಟೈಟಲ್ ಬಹಿರಂಗಗೊಳಿಸಿದ್ದಾರೆ.

ಹಾಲಿವುಡ್​ ಮೂವಿ 'ಜೋಕರ್' ಸಿಕ್ವೆಲ್​ನಲ್ಲಿ ಲೇಡಿ ಗಾಗಾ.. 2024ರಲ್ಲಿ ತೆರೆಗೆ
Lady Gaga in Hollywood movie 'Joker' sequel

By

Published : Aug 5, 2022, 1:14 PM IST

ಲಾಸ್ ಎಂಜೆಲೀಸ್ (ಅಮೆರಿಕ): ಶೀಘ್ರದಲ್ಲೇ ತಯಾರಾಗಲಿರುವ ಹಾಲಿವುಡ್ ಚಲನಚಿತ್ರ 'ಜೋಕರ್: ಫೋಲಿ ಎ ಡ್ಯೂ' ನಲ್ಲಿ ತಾವು ಜೋಕ್ವಿನ ಫೀನಿಕ್ಸ್​ ಜೊತೆಯಲ್ಲಿ ನಟಿಸುತ್ತಿರುವುದಾಗಿ ವಿಶ್ವವಿಖ್ಯಾತ ಗಾಯಕಿ ಮತ್ತು ನಟಿ ಲೇಡಿ ಗಾಗಾ ಹೇಳಿದ್ದಾರೆ. ಈ ಚಲನಚಿತ್ರವು 2019ರಲ್ಲಿ ಟಾಡ್ ಫಿಲಿಪ್ಸ್​ ನಿರ್ದೇಶನದಲ್ಲಿ ತಯಾರಾಗಿದ್ದ, ಆ್ಯಂಟಿ - ಹೀರೊ ಕ್ಯಾರೆಕ್ಟರ್​ ಕಥೆ ಹೊಂದಿದ್ದ 'ಜೋಕರ್' ಚಿತ್ರದ ಮುಂದುವರಿದ ಭಾಗ (ಸಿಕ್ವೆಲ್)ವಾಗಿದೆ. ವಾರ್ನರ್ ಬ್ರದರ್ಸ್​ ಬ್ಯಾನರ್​ ಪ್ರಾಜೆಕ್ಟ್​ ಆಗಿರುವ ಇದರಲ್ಲಿ ತಾವು ನಟಿಸುತ್ತಿರುವ ಬಗ್ಗೆ ಲೇಡಿ ಗಾಗಾ ಇನ್​​ಸ್ಟಾನಲ್ಲಿ ಟೀಸರ್ ಹಾಕಿಕೊಂಡಿದ್ದಾರೆ.

ಜೋಕರ್ ಸಿಕ್ವೆಲ್​ನಲ್ಲಿ ಲೇಡಿ ಗಾಗಾ ಅವರು ಹಾರ್ಲೆ ಕ್ವಿನ್ ಪಾತ್ರ ಮಾಡಲಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಪಾತ್ರವು ಸಂಗೀತಮಯವಾಗಿರಲಿದೆ ಎನ್ನಲಾಗಿದೆ. ಜೂನ್ 7 ರಂದು ನಿರ್ದೇಶಕ ಟಾಡ್ ಫಿಲಿಪ್ಸ್ ಇನ್​ಸ್ಟಾನಲ್ಲಿ ಸ್ಕ್ರೀನ್ ಪ್ಲೇ ಕವರ್ ಪೋಸ್ಟ್ ಮಾಡಿದ್ದು, ಫೋಲಿ ಎ ಡ್ಯೂ ಸಬ್ ಟೈಟಲ್ ಬಹಿರಂಗಗೊಳಿಸಿದ್ದಾರೆ.

ಫೋಲಿ ಎ ಡ್ಯೂ ಎಂಬ ಪದಪುಂಜವು ಭ್ರಮಾಧೀನ ಅವಸ್ಥೆಯನ್ನು ಸೂಚಿಸುತ್ತದೆ ಹಾಗೂ ಇದು ಬ್ಯಾಟ್​ಮ್ಯಾನ್ ಹೊರತಾಗಿ ಜೋಕರ್​ನ ಏಕೈಕ ಸಂಗಾತಿಯಾಗಿರಲಿದೆ. ಆದಾಗ್ಯೂ ಲೇಡಿ ಗಾಗಾ ಹಾರ್ಲೆ ಪಾತ್ರ ನಿರ್ವಹಿಸಲಿದ್ದಾರೆ ಎಂಬುದನ್ನು ಟೀಸರ್ ಸ್ಪಷ್ಟಪಡಿಸಿಲ್ಲ.

ಡಾರ್ಕ್ ಅಂಡ್ ಗ್ರಿಟ್ಟಿ ರೀತಿಗೆ ವ್ಯತಿರಿಕ್ತವಾಗಿ ಜೋಕರ್ ಸಿಕ್ವೆಲ್ ಅನ್ನು ಸಂಗೀತಮಯವಾಗಿ ಮಾಡಲಾಗಿದೆ. ಜೋಕರ್ ಆಕಾ ಆರ್ಥರ್ ಫ್ಲೆಕ್ ಪಾತ್ರ ನಿರ್ವಹಿಸಿದ್ದಕ್ಕೆ ಫೀನಿಕ್ಸ್​ ಅವರು ಅತ್ಯತ್ತಮ ನಟ ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿದ್ದರು. ಡಿಸಿ ಕಾಮಿಕ್ಸ್​ ಬ್ಯಾಟ್ ಮ್ಯಾನ್ ಯುನಿವರ್ಸ್​ನ ಅತಿ ಸ್ಮರಣೀಯ ಪಾತ್ರ ಅದಾಗಿತ್ತು. ಸಿಕ್ವೆಲ್​ನ ಯೋಜನಾ ವರದಿಗಳು ಇನ್ನೂ ಬಂದಿಲ್ಲ. ಸ್ಕಾಟ್ ಸಿಲ್ವರ್ ಅವರೊಂದಿಗೆ ಫಿಲಿಪ್ಸ್​ ಸ್ಕ್ರೀನ್ ಪ್ಲೇ ಬರೆಯುತ್ತಿದ್ದಾರೆ.

ಫಿಲಿಪ್ಸ್​ ಅವರ ಒರಿಜಿನಲ್ ಜೋಕರ್ 2019ರಲ್ಲಿ ಬಾಕ್ಸ್​ ಆಫೀಸ್ ಇತಿಹಾಸ ಸೃಷ್ಟಿಸಿತ್ತು. ವಿಶ್ವಾದ್ಯಂತ 1 ಬಿಲಿಯನ್ ಡಾಲರ್ ಆದಾಯ ಗಳಿಸಿ, ಈ ಸಾಧನೆ ಮಾಡಿದ ಏಕೈಕ ಆರ್​ ರೇಟೆಡ್ ಮೂವಿ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿತ್ತು. ಈ ಚಿತ್ರವು ವೆನಿಸ್ ಫಿಲ್ಮ್ ಫೆಸ್ಟಿವಲ್​ನಲ್ಲಿ ಗೋಲ್ಡನ್ ಲಯನ್ ಪ್ರಶಸ್ತಿ ಗೆದ್ದಿತ್ತು. ಅತ್ಯುತ್ತಮ ಚಲನಚಿತ್ರ ಸೇರಿದಂತೆ ಅಲ್ಲದೆ 11 ಅಕಾಡೆಮಿ ಅವಾರ್ಡ್​ ನಾಮಿನೇಶನ್​ಗಳನ್ನು ಈ ಚಿತ್ರ ಪಡೆದುಕೊಂಡಿತ್ತು. ಜೋಕರ್: ಫೋಲಿ ಎ ಡ್ಯೂ ಚಿತ್ರವು 2024ರ ಅಕ್ಟೋಬರ್ 4 ರಂದು ತೆರೆಕಾಣಲಿದೆ.

ABOUT THE AUTHOR

...view details