ಕರ್ನಾಟಕ

karnataka

ETV Bharat / entertainment

ಕಾರ್ತಿಕ್​ ಸರ್​ 'ರಾಜಕೀಯ' ಪಾಠದಿಂದ ನಗೆಬುಗ್ಗೆ ಕರಗಿ ಏಳುತ್ತಿದೆ ಅಸಮಾಧಾನದ ಹೊಗೆ! - ಈಟಿವಿ ಭಾರತ ಕನ್ನಡ

BBK10: 'ಬಿಗ್​ ಬಾಸ್​' ಪ್ರಾಥಮಿಕ ಶಾಲೆಯಲ್ಲಿ ಸ್ಪರ್ಧಿಗಳ ನಡುವೆ ನಿಧಾನವಾಗಿ ಅಸಮಾಧಾನದ ಹೊಗೆಯಾಡುತ್ತಿದೆ.

Kannada Bigg boss season 10 todays promo
ಕಾರ್ತಿಕ್​ ಸರ್​ 'ರಾಜಕೀಯ' ಪಾಠದಿಂದ ನಗೆಬುಗ್ಗಿ ಕರಗಿ ಏಳುತ್ತಿದೆ ಅಸಮಾಧಾನದ ಹೊಗೆ!

By ETV Bharat Karnataka Team

Published : Dec 14, 2023, 4:20 PM IST

'ಬಿಗ್​ ಬಾಸ್'​ ಮನೆ ಸದಸ್ಯರು ವಿದ್ಯಾರ್ಥಿಗಳಾಗಿದ್ದಾರೆ. ಈ ವಾರದ ಟಾಸ್ಕ್​ಗಾಗಿ ಶಾಲಾ ಸಮವಸ್ತ್ರ ತೊಟ್ಟು ಮಕ್ಕಳಂತೆ ತುಂಟಾಟ, ತರ್ಲೆ ಮಾಡುತ್ತಿದ್ದಾರೆ. ಕಳೆದ ವಾರ ಕೋಪದಲ್ಲಿದ್ದ ಮನೆ ಬಹಳ ಶಾಂತವಾಗಿದೆ. ಎಲ್ಲಾ ಮನಸ್ತಾಪಗಳು ದೂರವಾಗಿ ಮನೆ ಮಂದಿಯೆಲ್ಲಾ ಜೊತೆಯಾಗಿ ಎಂಜಾಯ್​ ಮಾಡುತ್ತಿದ್ದಾರೆ. ಆದರೆ, ಕಾರ್ತಿಕ್​ ಸರ್​ ಅವರ ರಾಜಕೀಯ ಪಾಠ, ಸ್ಪರ್ಧಿಗಳ ನಡುವೆ ಮತ್ತೆ ಮೊದಲಿನಂತೆ ಅಸಮಾಧಾನದ ಹೊಗೆ ಬುಗಿಲೇಳುವಂತೆ ಮಾಡಿದೆ.

ಹೌದು, ಬಿಗ್​ ಬಾಸ್​ ಮನೆಯಲ್ಲಿ ಕಾರ್ತಿಕ್​ ರಾಜಕೀಯ ಮಾಡುತ್ತಿದ್ದಾರೆ. ಅಲ್ಲಲ್ಲ, ರಾಜಕೀಯ ಶಾಸ್ತ್ರದ ಪಾಠ ಮಾಡುತ್ತಿದ್ದಾರೆ. ಆದರೆ, ಇದೇ ಪಾಠ ಮನೆ ಮಂದಿಯ ನಡುವೆ ಮತ್ತೆ ಮನಸ್ತಾಪ ಮೂಡುವಂತೆ ಮಾಡುತ್ತಿದೆ. ಇದರ ಒಂದು ನಿದರ್ಶನ ಇದೀಗ ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಸೆರೆಯಾಗಿದೆ.

ಈ ವಾರದ ಬಿಗ್‌ ಬಾಸ್‌ ಪ್ರಾಥಮಿಕ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಈಗ ಹೈಯರ್​ ಎಜುಕೇಷನ್‌ಗೆ ಕಾಲಿಟ್ಟಂತಿದೆ. ಚೇಷ್ಟೆಗಳು ಮುಗಿದು ಗಂಭೀರ ಚರ್ಚೆಗಳು ತರಗತಿಯಲ್ಲಿ ನಡೆಯುತ್ತಿದೆ. ಚರ್ಚೆಗೆ ಬುನಾದಿ ಹಾಕಿಕೊಟ್ಟವರು ಇಂದಿನ ಬಿಗ್‌ ಬಾಸ್ ವಿದ್ಯಾಲಯದಲ್ಲಿ ಪಾಠ ಮಾಡುತ್ತಿರುವ ಕಾರ್ತಿಕ್‌. ಕಾರ್ತಿಕ್ ಅವರು ರಾಜಕೀಯದ ಬಗ್ಗೆ ವಿದ್ಯಾರ್ಥಿಗಳಿಗೆ ಪಾಠ ಮಾಡ್ತಿದ್ದಾರೆ. ಅದರಲ್ಲಿಯೂ ಉತ್ತಮ ನಾಯಕತ್ವ ಹೇಗಿರಬೇಕು? ಎಂಬುದರ ಕುರಿತು ಅವರು ಚರ್ಚೆ ಹುಟ್ಟುಹಾಕಿದ್ದಾರೆ. ಅದರಲ್ಲಿ ವಿದ್ಯಾರ್ಥಿಗಳೂ ಪಾಲ್ಗೊಳ್ಳುತ್ತಿದ್ದಾರೆ.

'ಬಿಗ್‌ ಬಾಸ್‌ ಮನೆಯಲ್ಲಿ ರಾಜಕೀಯ ನಡೆಯುತ್ತಿದೆ' ಎಂದು ಹೇಳುವುದರ ಮೂಲಕ ಕಾರ್ತಿಕ್ ಮನೆಯೊಳಗಿನ ಪಾಲಿಟಿಕ್ಸ್ ಬಗ್ಗೆಯೇ ಮಾತಾಡಲು ಪ್ರಾರಂಭಿಸಿದ್ದಾರೆ. 'ಮನೆಯೊಳಗೆ ಯಾರಿಗೆ ಕೋಪ ನಿಯಂತ್ರಣ ಕೌಶಲಗಳನ್ನು ಕಲಿತುಕೊಳ್ಳುವ ಅಗತ್ಯವಿದೆ?' ಎಂಬ ಪ್ರಶ್ನೆಗೆ ಸಂಗೀತಾ ತಾನಾಗೇ, 'ನನ್ನ ಹೆಸ್ರೇ ಬರ್ದುಬಿಡಿ' ಎಂದು ಹೇಳಿದ್ದಾರೆ.

ಅದಕ್ಕೆ ನಕ್ಕ ಕಾರ್ತಿಕ್, 'ಏನಪ್ಪಾ ಇವತ್ತು ಸಂಗೀತಾ ಎಲ್ಲನೂ ಅವರಾಗೇ ಒಪ್ಕೋತಿದಾರೆ?' ಎಂದು ನಕ್ಕಿದ್ದಾರೆ. ಮನೆಯೊಳಗೆ ಯಾರು ಕೆಟ್ಟ ರಾಜಕೀಯ ಮಾಡ್ತಾರೆ ಎಂದು ಕೇಳಿದ್ದಕ್ಕೆ ಸಂಗೀತಾ, 'ವಿನಯ್' ಎಂದು ಹೇಳಿದ್ದಾರೆ. 'ಅದಕ್ಕೊಂದು ಉದಾಹರಣೆ ಕೊಡಿ' ಎಂದು ಕೇಳಿದ್ದಾರೆ ಕಾರ್ತಿಕ್. ಇದು ಸಂಗೀತಾಗೆ ನೋವುಂಟು ಮಾಡಿದೆ.

ಟಾಸ್ಕ್‌ ಮುಗಿದ ಮೇಲೆ ಬೆಡ್‌ರೂಮ್‌ನಲ್ಲಿ ಡ್ರೋನ್​ ಪ್ರತಾಪ್​ ಜೊತೆಗೆ ಮಾತನಾಡುತ್ತಾ, 'ಕಾರ್ತಿಕ್ ಯಾಕೆ ಹಿಂಗಾಡ್ತಿದ್ದಾರೆ? ಅವರಿಗೆ ಬಕೆಟ್ ಹಿಡಿತಿದಾರೆ ಅನಿಸ್ತಿಲ್ವಾ ನಿಂಗೆ?' ಎಂದು ಕೇಳಿದ್ದಾರೆ. ಒಟ್ಟಾರೆ ಬಿಗ್‌ ಬಾಸ್ ಮನೆಯೊಳಗಿನ ಶಾಲೆ ಆಟದ ಹಂತ ದಾಟಿ ಅಸಮಾಧಾನದ ಹೊಗೆ ನಿಧಾನಕ್ಕೆ ಏಳುತ್ತಿದೆ. ಅದು ಯಾವಾಗ ಕಿಡಿಯಾಗಿ ಹೊಮ್ಮುತ್ತದೆ? ಯಾರನ್ನೆಲ್ಲ ಸುಡುತ್ತದೆ? ಕಾದು ನೋಡಿ ತಿಳಿಯಬೇಕಷ್ಟೆ.

ಬಿಗ್‌ ಬಾಸ್ ಕನ್ನಡ 24 ಗಂಟೆಯ ನೇರಪ್ರಸಾರವನ್ನು ಜಿಯೋ ಸಿನಿಮಾದಲ್ಲಿ ಉಚಿತವಾಗಿ ನೋಡಬಹುದಾಗಿದೆ. ಪ್ರತಿದಿನದ ಎಪಿಸೋಡ್‌ಗಳು ರಾತ್ರಿ 9.30ಕ್ಕೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದೆ.

ಇದನ್ನೂ ಓದಿ:ಬಿಗ್‌ ಬಾಸ್‌ ಶಾಲೆಯಲ್ಲಿ ವಿದ್ಯಾರ್ಥಿಗಳ ಡ್ಯಾನ್ಸ್; ಟೀಚರ್ಸ್ ಸುಸ್ತೋ ಸುಸ್ತು!

ABOUT THE AUTHOR

...view details