ಕನ್ನಡದ 'ಬಿಗ್ ಬಾಸ್' ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಿದೆ. ಶೋ ದಿನಕ್ಕೊಂದು ತಿರುವು ಪಡೆಯುತ್ತಿದೆ. ವಿವಿಧ ಸನ್ನಿವೇಶಗಳಲ್ಲಿ ಸ್ಪರ್ಧಿಗಳ ನಾನಾ ಭಾವನೆಗಳು ವ್ಯಕ್ತವಾಗುತ್ತವೆ. ಅಚ್ಚುಕಟ್ಟಾಗಿ ಆಟ ಆಡುವವರು, ಪ್ರೇಕ್ಷಕರ ಗಮನ ಸೆಳೆಯುವವರು ಕೊನೆ ಹಂತದವರೆಗೂ ತಲುಪುತ್ತಾರೆ. ಬಿಗ್ ಬಾಸ್ ಕೊಡುವ ಟಾಸ್ಕ್ ಸಹ ಸವಾಲಿನದ್ದೇ ಆಗಿರುತ್ತದೆ. ಈ ಸವಾಲುಗಳನ್ನು ಸ್ಪರ್ಧಿಗಳು ಹೇಗೆ ಸ್ವಿಕರಿಸುತ್ತಾರೆಂಬುದೇ 'ಅವರ ಪರೀಕ್ಷೆ'.
ಪ್ರತಿ ವಾರದ ಕೊನೆಯಲ್ಲಿ ಕಿಚ್ಚ ಸುದೀಪ್ನ ನಿರೂಪಣೆಯಲ್ಲಿ ಶೋ ನಡೆಯುತ್ತದೆ. ಈ ಸಂಚಿಕೆಗಳಿಗೆ ಸಪರೇಟ್ ಫ್ಯಾನ್ ಫಾಲೋವಿಂಗ್ಸ್ ಕೂಡ ಇದೆ. ಅದರಂತೆ ಈ ವಾರದ ಶನಿವಾರದ ಕಿಚ್ಚನ ಪಂಚಾಯ್ತಿ ಮುಗಿದಿದ್ದು, ಇಂದು 'ಸೂಪರ್ ಸಂಡೇ ವಿತ್ ಸುದೀಪ' ಪ್ರಸಾರಗೊಳ್ಳಲಿದೆ. ಈ ಸಂಚಿಕೆಯ ಒಂದು ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ.
ಸುದೀಪ್ ಅವರು ಕೇಳುವ Yes or No ಪ್ರಶ್ನೆಗಳ ರೌಂಡ್ನಲ್ಲಿ ತುಕಾಲಿ ಪ್ರತಾಪ್ ಅವರ ಉತ್ತರಗಳು ಕಾಮಿಡಿಯಾಗಿದೆ. ಇದನ್ನು ಕೇಳಿದ ಕಿಚ್ಚ ಸೇರಿದಂತೆ ಮನೆ ಮಂದಿಗೆ ನಗಬೇಕೋ ಅಳಬೇಕೋ ಎಂದೇ ತಿಳಿಯದಾಗಿದೆ. 'ಮನೆಯ ಕೆಲಸದ ವಿಚಾರದಲ್ಲಿ ತುಕಾಲಿ ಅವರ ತೊಡಗಿಸಿಕೊಳ್ಳುವಿಕೆ ಎಲ್ಲರಕ್ಕಿಂತ ಜಾಸ್ತಿ' ಎಂದು ಸುದೀಪ್ ಕೇಳಿದ್ರೆ, ಸ್ಪರ್ಧಿಗಳೆಲ್ಲಾ 'ನೋ' ಬೋರ್ಡ್ ಎತ್ತಿ ಹಿಡಿದರು. ಆದರೆ ತುಕಾಲಿ ಸಂತೋಷ್ ಮಾತ್ರ 'ಯೆಸ್' ಬೋರ್ಡ್ ತೋರಿಸಿದರು.
ಇದನ್ನು ಕಂಡ ತುಕಾಲಿ, 'ಎಲ್ಲರೂ ಸೇರಿ ಪ್ಲಾನ್ ಮಾಡಿ ಉತ್ತರ ಕೊಟ್ಟಿದ್ದಾರೆ ಸುದೀಪ್ ಅಣ್ಣ. ಮನೆಯ ಬಾತ್ರೂಮ್ ಅನ್ನು ನಾನೇ ತೊಳೆಯುವುದು. ನಾನು ತೊಳೆದಿರುವುದು ಅಷ್ಟೇ ಚೆನ್ನಾಗಿ ವರ್ತೂರುಗೆ ಗೊತ್ತಿದೆ' ಎಂದು ಹೇಳಿದ ತುಕಾಲಿ, ವರ್ತೂರು ಬಳಿ 'ಹೌದಲ್ವಾ ಅಣ್ಣ' ಎಂದು ಕೇಳುತ್ತಾರೆ. ಅವರು ಕೂಡ 'ನೋ' ಬೋರ್ಡ್ ಹಿಡಿದಿರುವುದನ್ನು ನೋಡಿ, 'ಅಣ್ಣಾ ನೀನು ಕೂಡ ನೋ ಹಿಡಿದಿದ್ಯಾ?' ಎಂದು ಹೇಳಿದ್ದು ಮಾತ್ರ ಸಖತ್ ಮಜಾವಾಗಿದೆ. ಸುದೀಪ್ ಸೇರಿದಂತೆ ಮನೆ ಮಂದಿಯೆಲ್ಲಾ ಹೊಣ್ಣೆ ಹುಣ್ಣಾಗುವಂತೆ ನಕ್ಕಿದ್ದಾರೆ.
ನಂತರ ಸುದೀಪ್ ಅವರು, 'ತನಿಷಾ ಮತ್ತು ವರ್ತೂರು ಅವರ ಫ್ರೆಂಡ್ಶಿಪ್ ಪಾರ್ಟ್ಟೈಮ್ ಫ್ರೆಂಡ್ಶಿಪ್ ಅಷ್ಟೇ' ಎಂದು ಕೇಳುತ್ತಾರೆ. ಇದಕ್ಕೆ ಕೆಲವರು 'ಯೆಸ್' ಬೋರ್ಡ್ ತೋರಿಸಿದ್ರೆ ಮತ್ತೆ ಕೆಲವರು 'ನೋ' ಎನ್ನುತ್ತಾರೆ. 'ಯೆಸ್' ಬೋರ್ಡ್ ಹಿಡಿದಿದ್ದ ತುಕಾಲಿ ಸಂತೋಷ್ ಅವರಲ್ಲಿ ಸುದೀಪ್ ಯಾಕೆಂದು ಪ್ರಶ್ನಿಸುತ್ತಾರೆ. 'ಪಾರ್ಟ್ಟೈಮ್ಗೆ ಸೂಕ್ತವಾದ ಪದವೇ ಇವರ ಲವ್ಸ್ಟೋರಿ ಅಣ್ಣ' ಎನ್ನುತ್ತಾರೆ ತುಕಾಲಿ. ಇದನ್ನು ಕೇಳಿದ ಸುದೀಪ್ ಅವರಂತೂ ಸುಸ್ತಾಗುವಂತೆ ನಕ್ಕಿದ್ದಾರೆ. ತುಕಾಲಿ ಉತ್ತರಕ್ಕೆ ಸೀರಿಯಸ್ ಆದ ವರ್ತೂರು, 'ಹಂಗೆಲ್ಲಾ ಹೇಳ್ಬೇಡ' ಅಂತಾರೆ.
ಅಂತೂ ಈ ವಾರದ 'ಸೂಪರ್ ಸಂಡೇ ವಿತ್ ಸುದೀಪ' ಸಂಚಿಕೆ ಮಾತ್ರ ಸಖತ್ ಮಜಾವಾಗಿದೆ. ಜೊತೆಗೆ ಸ್ಪರ್ಧಿಗಳ ತಲೆ ಮೇಲೆ ಎಲಿಮಿನೇಷನ್ ತೂಗುಕತ್ತಿ ನೇತಾಡುತ್ತಿದೆ. ಈ ವಾರ ಮನೆಯಿಂದ ಹೊರ ಹೋಗೋರ್ಯಾರು ಎಂದು ತಿಳಿಯಲು ಬಿಗ್ ಬಾಸ್ ಕನ್ನಡ 24 ಗಂಟೆಯ ನೇರಪ್ರಸಾರವನ್ನು ಜಿಯೋಸಿನಿಮಾದಲ್ಲಿ ಉಚಿತವಾಗಿ ನೋಡಬಹುದಾಗಿದೆ. ಪ್ರತಿದಿನದ ಎಪಿಸೋಡ್‌ಗಳು ರಾತ್ರಿ 9.30ಕ್ಕೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದೆ.
ಇದನ್ನೂ ಓದಿ:ಸಂಗೀತಾ ಫೋಟೋ ಇದ್ದ ಮಡಿಕೆ ಒಡೆದ ಕಾರ್ತಿಕ್! ಬಿಗ್ ಬಾಸ್ ಮನೆಮಂದಿಗೆ ಅಚ್ಚರಿ