ಕರ್ನಾಟಕ

karnataka

ETV Bharat / entertainment

ಬಿಗ್​ ಬಾಸ್​: ನಾಮಿನೇಷನ್​ ತೂಗುಗತ್ತಿ ಯಾರ ತಲೆ ಮೇಲೆ? - ಈಟಿವಿ ಭಾರತ ಕನ್ನಡ

BBK10: ಬಿಗ್​ ಬಾಸ್​ ಸೀಸನ್​ 10ರ ಈ ವಾರದ ಮೊದಲ ದಿನದ ಪ್ರೋಮೋ ಅನಾವರಣಗೊಂಡಿದೆ.

Kannada Bigg boss season 10 promo
ಬಿಗ್​ ಬಾಸ್​: ನಾಮಿನೇಷನ್​ ತೂಗುಗತ್ತಿ ಯಾರ ತಲೆ ಮೇಲೆ?

By ETV Bharat Karnataka Team

Published : Dec 11, 2023, 7:28 PM IST

ಕನ್ನಡದ ಖ್ಯಾತ ನಟ ಕಿಚ್ಚ ಸುದೀಪ್​ ನಡೆಸಿಕೊಡುವ ರಿಯಾಲಿಟಿ ಶೋ 'ಬಿಗ್​ ಬಾಸ್​'. ಕಳೆದ ವಾರದ ಜಗಳಗಳು, ಮನಸ್ತಾಪಗಳು ಅಂತ್ಯಗೊಂಡು ಸ್ಪರ್ಧಿಗಳು ಹೊಸ ವಾರಕ್ಕೆ ಕಾಲಿರಿಸಿದ್ದಾರೆ. ವಾರಾಂತ್ಯದ ಎಪಿಸೋಡ್​ನಲ್ಲಿ ಕಿಚ್ಚ ಎಲ್ಲರಿಗೂ ಕ್ಲಾಸ್​ ತೆಗೆದುಕೊಂಡ ನಂತರ ಎಲ್ಲ ಕೋಪ-ತಾಪಗಳು ಮುಗಿದು ಮನೆ ಮಂದಿ ಹೊಸ ಹುಮ್ಮಸ್ಸಿನಲ್ಲಿದ್ದಾರೆ. ಹೊಸ ವಾರದ ಮೊದಲ ದಿನ ಭಾವಪೂರ್ಣವಾಗಿರುವುದರ ಜೊತೆಗೆ ಸ್ಪರ್ಧಿಗಳ ತಲೆಯಲ್ಲಿ ನಾಮಿನೇಷನ್​ ತೂಗುಗತ್ತಿ ತೂಗಲಾರಂಭಿಸಿದೆ.

ಇದೆಲ್ಲವೂ ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿದೆ. ಹೊಸ ವಾರದ ಮೊದಲ ದಿನ ಭಾವಪೂರ್ಣವಾಗಿತ್ತು. ಮನೆಯ ಸದಸ್ಯರೆಲ್ಲರೂ ಈ ಭಾವದ ಮಳೆಯಲ್ಲಿ ಭರಪೂರ ನೆನೆದಿದ್ದಾರೆ. ಇಂಥದ್ದೊಂದು ಎಮೋಷನಲ್‌ ಓಪನ್‌ಅಪ್‌ ಆಗುವ ಅವಕಾಶವನ್ನು ಕಲ್ಪಿಸಿದ್ದು ಬಿಗ್‌ ಬಾಸ್‌. ಮನೆಯ ಪ್ರತಿ ಸದಸ್ಯರನ್ನು ಕನ್​ಪೆಷನ್​ ರೂಮಿಗೆ ಕರೆದು ಅವರ ಮನದಾಳದ ಮಾತುಗಳಿಗೆ ಕಿವಿಯಾಗಿದ್ದಾರೆ. ಮನಸ್ಸಿನ ಮಾತುಗಳನ್ನು ಹಂಚಿಕೊಂಡು ಹಗುರಾಗಿದ್ದ ಮನೆ ಮಂದಿಗೆ ಮರುಕ್ಷಣವೇ ನಾಮಿನೇಷನ್​ ಅನ್ನೋ ಶಾಕ್​ ಸಿಕ್ಕಿದೆ.

ಒಂದು ಕೋಣೆಯಲ್ಲಿ ಎಲ್ಲಾ ಸದಸ್ಯರ ಫೋಟೋಗಳಿವೆ. ಒಬ್ಬೊಬ್ಬ ಸದಸ್ಯನೂ ಒಂಟಿಯಾಗಿ ಕೋಣೆಯೊಳಗೆ ಹೋಗಿ ನಾಮಿನೇಟ್ ಮಾಡಲು ಇಚ್ಛಿಸುವ ಸದಸ್ಯರ ಫೋಟೋವನ್ನು ಗೋಡೆಗೆ ಸಿಕ್ಕಿಸಬೇಕು. ತುಕಾಲಿ ಸಂತೋಷ್‌ ಅವರು, ಸಂಗೀತಾ ಅವರನ್ನು ನಾಮಿನೇಟ್‌ ಮಾಡಿದ್ದಾರೆ. 'ಜಗಳವಾಡಲಿಕ್ಕೆ, ಮನೆಯಲ್ಲಿ ಇಷ್ಟೆಲ್ಲಾ ಅವಾಂತರ ನಡೆಯಲು ಸಂಗೀತಾನೇ ಕಾರಣ. ಹಾಗಾಗಿ ಅವರನ್ನು ನಾಮಿನೇಟ್ ಮಾಡ್ತೀನಿ' ಎಂದು ಕಾರಣಗಳನ್ನು ನೀಡಿದ್ದಾರೆ. ಹಾಗೆಯೇ 'ಪ್ರತಾಪ್‌ ಅವರು ಮೇಲ್ನೋಟಕ್ಕೆ ಚೆನ್ನಾಗಿ ನೋಡಿದರೂ ಒಳಗೊಳಗೇ ತಮ್ಮ ಬಗ್ಗೆ ಅನುಮಾನವಿದೆ. ನನ್ನ ಮೇಲೆ ಅವರಿಗೆ ತುಂಬ ಕೋಪವಿದೆ' ಎಂದೂ ಅವರನ್ನು ಕೂಡ ನಾಮಿನೇಟ್​ ಮಾಡಿದ್ದಾರೆ.

ಮೈಕಲ್ ಅವರನ್ನು ನಾಮಿನೇಟ್ ಮಾಡಿರುವ ಡ್ರೋನ್​ ಪ್ರತಾಪ್​, 'ಮೈಕಲ್ ಅವರು ಆಟ ಎಂದು ಬಂದಾಗ ಹದ್ದು ಮೀರುತ್ತಾರೆ' ಎಂದು ಕಾರಣ ಕೊಟ್ಟಿದ್ದಾರೆ. ತನಿಷಾ ಅವರನ್ನು ನಾಮಿನೇಟ್ ಮಾಡಿರುವ ವರ್ತೂರು ಸಂತೋಷ್​, 'ಎದುರಾಳಿ ತಂಡದ ಸದಸ್ಯರಿಗೆ ರೆಸ್ಪೆಕ್ಟ್ ಕೊಡದೇ ಮಾತಾಡುತ್ತಾರೆ' ಎಂದು ಹೇಳಿದ್ದಾರೆ. ವಿನಯ್ ಅವರನ್ನು ನಾಮಿನೇಟ್ ಮಾಡಿರುವ ಸಂಗೀತಾ, 'ಪ್ರತಿಸಲ ನನ್ನನ್ನೇ ಟಾರ್ಗೇಟ್ ಮಾಡುತ್ತಾರೆ. ರೇಗಿಕೊಂಡು, ಟಾಂಟ್ ಕೊಟ್ಟುಕೊಂಡೇ ಮಾತಾಡುತ್ತಾರೆ' ಎಂಬ ಕಾರಣ ನೀಡಿದ್ದಾರೆ. ಕಾರ್ತಿಕ್, ಸಿರಿ ಅವರನ್ನು ನಾಮಿನೇಟ್ ಮಾಡಿದ್ದರೆ, ಸಿರಿ, ಪವಿ ಅವರನ್ನು ನಾಮಿನೇಟ್ ಮಾಡಿದ್ದಾರೆ.

ಒಟ್ಟಾರೆ ಸಂಗೀತಾ ಶೃಂಗೇರಿ, ಡ್ರೋನ್​ ಪ್ರತಾಪ್‌, ಸಿರಿ, ಪವಿ, ಮೈಕಲ್, ವಿನಯ್, ತನಿಷಾ ಈ ವಾರ ನಾಮಿನೇಷನ್ ಪಟ್ಟಿಯಲ್ಲಿದ್ದಾರೆ. ಮನೆ ಮಂದಿಗೆ ನಾಮಿನೇಷನ್​ನಿಂದ ಪಾರಾಗಲು ಬಿಗ್​ ಬಾಸ್​ ಯಾವ ರೀತಿಯ ಟಾಸ್ಕ್​ ನೀಡಬಹುದು? ಯಾರು ಈ ಬಾರಿ ಮನೆಯಿಂದ ಔಟ್​? ಎಂದೆಲ್ಲಾ ತಿಳಿದುಕೊಳ್ಳಲು ಬಿಗ್‌ ಬಾಸ್ ಕನ್ನಡ 24 ಗಂಟೆಯ ನೇರಪ್ರಸಾರವನ್ನು ಜಿಯೋ ಸಿನಿಮಾದಲ್ಲಿ ಉಚಿತವಾಗಿ ನೋಡಬಹುದಾಗಿದೆ. ಪ್ರತಿದಿನದ ಎಪಿಸೋಡ್‌ಗಳು ರಾತ್ರಿ 9.30ಕ್ಕೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದೆ.

ಇದನ್ನೂ ಓದಿ:'ನಮ್ರತಾ ಮೇಲೆ ನನಗಿರುವ ಆಕರ್ಷಣೆ ನಿಜ': ಬಿಗ್​ ಬಾಸ್​ ಮನೆಯಿಂದ ಹೊರಬಿದ್ದ ಸ್ನೇಹಿತ್​ ಮನದಾಳ

ABOUT THE AUTHOR

...view details