ನಟ ಸುದೀಪ್ ನಿರೂಪಣೆಯ 'ಬಿಗ್ ಬಾಸ್ ಸೀಸನ್ 10' ಬಹುತೇಕ ಫಿನಾಲೆ ತಲುಪಿದೆ. ಇಂದು ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಅವರು ದೊಡ್ಮನೆ ಒಳಗೆ ಆಗಮಿಸಿ, ಸ್ಪರ್ಧಿಗಳ ಭವಿಷ್ಯ ನುಡಿದಿದ್ದಾರೆ. ಪ್ರತಾಪ್ ಅವರ ಕೌಟುಂಬಿಕ ಭವಿಷ್ಯ ಕಠಿಣವಾಗಿದ್ದು, ಪ್ರತಾಪ್ ಕಣ್ಣೀರಿಟ್ಟಿದ್ದಾರೆ. 'ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಹೇಳಿದ ಭವಿಷ್ಯ ಕೇಳಿ ದಂಗಾದ್ರಾ ಸ್ಪರ್ಧಿಗಳು?' ಶೀರ್ಷಿಕೆಯಡಿ ಇಂದಿನ ಸಂಚಿಕೆಯ ಪ್ರೋಮೋ ಅನಾವರಣಗೊಂಡಿದ್ದು, ಪ್ರೇಕ್ಷಕರು ಕುತೂಹಲರಾಗಿದ್ದಾರೆ.
ಬಿಗ್ ಬಾಸ್ ಕಾರ್ಯಕ್ರಮಕ್ಕೆ ಆಗಮಿಸಿದ ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಅವರು ದೇವರ ಪೂಜೆ ಮಾಡಿ, ಸ್ಪರ್ಧಿಗಳಿಗೆ ಆಶೀರ್ವಾದ ನೀಡಿದ್ದಾರೆ. ಜೊತೆಗೆ, ಮನೆಮಂದಿಯ ಭವಿಷ್ಯ ಸಹ ನುಡಿದಿದ್ದಾರೆ. ವರ್ತೂರು ಸಂತೋಷ್ ಬಳಿ ನೀವು ಟ್ಯಾಟೂ ಒಂದನ್ನು ಹಾಕಿಸಿಕೊಂಡಿದ್ದೀರ. ಅಂದಿನಿಂದ ಕಷ್ಟಗಳು ಎದುರಾಗಿವೆ ಎಂದು ಗುರೂಜಿ ತಿಳಿಸಿದಾಗ ವರ್ತೂರ್ ಕೂಡ ಹೌದು ಎಂದು ಒಪ್ಪಿಕೊಂಡಿದ್ದಾರೆ. ನಿಮ್ಮ ಜೀವನದಲ್ಲಿ ಹೊಸ ಬೆಳಕು, ಹೊಸ ವ್ಯಕ್ತಿಯ ಆಗಮನವಾಗುತ್ತದೆ ಎಂದು ನಮ್ರತಾ ಅವರಲ್ಲಿ ತಿಳಿಸಿದ್ದಾರೆ.
ಬಳಿಕ ಪ್ರತಾಪ್ ಭವಿಷ್ಯ ನುಡಿದಿದ್ದು, ಪ್ರೇಕ್ಷಕರು ಮರುಗಿದ್ದಾರೆ. ಈ ವಿಚಾರ ಹೇಳಲು ನನಗೆ ಸಂಕಟವಾಗುತ್ತಿದೆ. ನೀನು ಕುಟುಂಬದಿಂದ ದೂರಾನೇ ಇರಬೇಕಾಗುತ್ತೆ. ಕುಟುಂಬದ ಜೀವನ ಯಾಕೋ ಅಷ್ಟು ಸರಿ ಇಲ್ಲ. ದೂರ ಇದ್ದು ಧೂಪವಾಗ್ತಿಯೋ, ಹತ್ತಿರ ಇದ್ದು ಹೇಸಿಗೆಯಾಗ್ತಿಯೋ ನಿನಗೆ ಬಿಟ್ಟದ್ದು ಎಂದು ಗುರುಗಳು ತಿಳಿಸಿದ್ದಾರೆ.