ನಟ ಸುದೀಪ್ ನಡೆಸಿಕೊಡುವ ಬಿಗ್ ಬಾಸ್ ರಿಯಾಲಿಟಿ ಶೋ ಬಹುತೇಕ ಕೊನೆಯ ಹಂತ ತಲುಪಿದೆ. ಹೆಚ್ಚಾಗಿ ವಿವಿಧ ರೀತಿಯ ಟಾಸ್ಕ್ ಗೆಲ್ಲಲು ಜಿದ್ದಾಜಿದ್ದಿನಿಂದ ಕೂಡಿರುವ ಶೋ, ಈ ವಾರವಿಡೀ ಭಾವುಕ ಕ್ಷಣಗಳಿಗೆ ಸಾಕ್ಷಿಯಾಯಿತು.
ಕುಟುಂಬ ಸದಸ್ಯರಿಂದ ದೂರವಿದ್ದ ಸ್ಪರ್ಧಿಗಳಿಗೆ 'ಬಿಗ್ ಬಾಸ್' ಸಪ್ರೈಸ್ ಕೊಟ್ಟಿದ್ದಾರೆ. ತಮ್ಮ ಮನೆಯವರನ್ನು ಭೇಟಿಯಾಗುವ ಅವಕಾಶ ಅವರಿಗೆ ಸಿಕ್ಕಿದೆ. ಅದರಂತೆ ಬಹುತೇಕ ಎಲ್ಲಾ ಸ್ಪರ್ಧಿಗಳ ಮನೆಯವರು ಒಬ್ಬರಾದ ಬಳಿಕ ಒಬ್ಬರಂತೆ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಇಂದು ಪ್ರತಾಪ್ ಮತ್ತು ವಿನಯ್ ಮನೆಯವರು ಆಗಮಿಸಿದರು. ಜೊತೆಗೊಂದಿಷ್ಟು ಕುತೂಹಲದ ಸನ್ನಿವೇಶವೂ ನಡೆಯಿತು.
ಬಿಗ್ ಬಾಸ್ ಪ್ರೋಮೋ ನೋಡಿ: 'ಮಡದಿ ಎದುರು ಮಗುವಾದ್ರಾ ವಿನಯ್?' ಮತ್ತು 'ಅಪ್ಪ-ಮಗನ ಸಮಾಗಮಕ್ಕೆ ಸಾಕ್ಷಿಯಾಯ್ತು ದೊಡ್ಮನೆ!' ಎಂಬ ಶೀರ್ಷಿಕೆಯಡಿ ವಾಹಿನಿ ಎರಡು ಪ್ರೋಮೋ ಬಿಡುಗಡೆ ಮಾಡಿದೆ. ಹೀಗಾಗಿ ವೀಕ್ಷಕರು ಇಂದಿನ ಸಂಪೂರ್ಣ ಸಂಚಿಕೆ ನೋಡಲು ಕಾತರರಾಗಿದ್ದಾರೆ.
ಪ್ರತಾಪ್ ಭಾವುಕ ಕ್ಷಣ: ಮನೆಯವರು ಬರುತ್ತಾರೆಂಬ ಕಾತರದಲ್ಲಿದ್ದ ಪ್ರತಾಪ್‌ಗೆ ತಿಂಡಿ ತಿನ್ನಿಸಲು ಮನೆಯ ಕೆಲ ಸದಸ್ಯರು ಮುಂದಾಗುತ್ತಾರೆ. ಆದರೆ ಪ್ರತಾಪ್ ಏನೂ ತಿನ್ನದೇ ಖಾಲಿ ಹೊಟ್ಟೆಯಲ್ಲೇ ಮನೆಯವರಿಗಾಗಿ ಚಡಪಡಿಸುತ್ತಿರುತ್ತಾರೆ. ಆ ಸಂದರ್ಭದಲ್ಲಿ 'ಪ್ರತಾಪ್' ಎನ್ನುವ ಮನೆಯವರ ಧ್ವನಿ ಕೇಳಿಸುತ್ತದೆ. ಅಪ್ಪ, ಅಮ್ಮ ಎಲ್ಲಿದ್ದಾರೆಂದು ಪ್ರತಾಪ್ ಇಡೀ ಮನೆಯೆಲ್ಲಾ ಹುಡುಕಾಡುತ್ತಾರೆ. ಅಷ್ಟರಲ್ಲಿ ಮನೆಯ ಮುಖ್ಯದ್ವಾರ ತೆರೆದುಕೊಂಡಿತು. ಮನೆಯವರು ಅಲ್ಲಿ ಬಂದಿದ್ದರು. ಮನೆಯ ಒಂದು ಹಂತದ ಬಾಗಿಲು ಲಾಕ್ ಆಗುತ್ತದೆ. ಎರಡೂ ಬದಿಯಲ್ಲಿ ಪ್ರತಾಪ್ ಮತ್ತು ಮನೆಯವರು ಮುಖಾಮುಖಿಯಾಗುತ್ತಾರೆ. ಎರಡೂ ಕಡೆಯಿಂದ ಕಣ್ಣಲ್ಲೇ ಭಾವನೆಗಳು ವ್ಯಕ್ತವಾಗುತ್ತವೆ.
ಇದನ್ನೂ ಓದಿ:ಮಲಯಾಳಂ ಚಿತ್ರರಂಗಕ್ಕೆ 'ದಿಯಾ' ಹೀರೋ ದೀಕ್ಷಿತ್ ಶೆಟ್ಟಿ ಎಂಟ್ರಿ
ಮತ್ತೊಂದು ಪ್ರೋಮೋದಲ್ಲಿ, ವಿನಯ್ ಪತ್ನಿ ಮನೆಗೆ ಬಂದಿದ್ದಾರೆ. ಇವ್ರು ನಿಮಗೆ ತಿಳಿದಿರುವ ಹಾಗೆ ಬಹಳ ಕೋಪಿಷ್ಠ. ಆದರೆ ಇವ್ರು ಮಗು ಮನಸ್ಸಿನವರು ಎಂಬ ಹಿನ್ನೆಲೆ ದನಿ ಪ್ಲೇ ಆಗುತ್ತದೆ. ಪ್ರೀತಿ ತುಂಬಿದ ಕ್ಷಣಗಳು ಪ್ರೋಮೋದಲ್ಲಿವೆ. ವಿಲನ್ ಮುಖದಲ್ಲಿ ಹೀರೋ ಕಳೆ ಎಂದು ಸಹ ಸ್ಪರ್ಧಿಯೋರ್ವರು ಹೇಳುತ್ತಿದ್ದಂತೆ, ವಿಲನ್ ಆಗುವ ಮುಂಚೆ ಹೀರೋ ಆಗಿದ್ದವನು ಎಂದು ವಿನಯ್ ಹೇಳಿದ್ದಾರೆ. ಕೆಲವು ಕ್ಷಣಗಳ ಬಳಿಕ ವಿನಯ್ ಪತ್ನಿ, 'ಸಂಗೀತಾ...' ನಿಮ್ಮ ಬಳಿ ಮಾತನಾಡಬೇಕೆಂದು ಕರೆದೊಯ್ದರು. ಇಂದಿನ ಸಂಚಿಕೆಯಲ್ಲಿ ಏನಾಗಲಿದೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮನೆ ಮಾಡಿದೆ.
ಇದನ್ನೂ ಓದಿ:'chef ಚಿದಂಬರ'ದ ಅನು ಪಾತ್ರದಲ್ಲಿ ರೆಚೆಲ್ ಡೇವಿಡ್; ಶೀಘ್ರ ಬಿಡುಗಡೆಗೆ ಸಿದ್ಧತೆ