ಕನ್ನಡ ಕಿರುತೆರೆಯ ಪಾಪ್ಯುಲರ್ ಪ್ರೋಗ್ರಾಮ್ 'ಬಿಗ್ ಬಾಸ್' ಅಪಾರ ಸಂಖ್ಯೆಯ ಕನ್ನಡಿಗರಿಗೆ ಮನರಂಜನೆಯ ರಸದೌತಣ ಉಣಬಡಿಸೋದ್ರಲ್ಲಿ ಯಶಸ್ವಿ ಆಗಿದೆ. ಬಹುತೇಕ ಕೊನೆ ಹಂತ ತಲುಪಿರೋ 'ಬಿಗ್ ಬಾಸ್ ಸೀಸನ್ 10' ಸ್ಪರ್ಧಿಗಳಿಗೆ ಬಿಗ್ ಬಾಸ್ ತಂಡ ಸರ್ಪ್ರೈಸ್ ಕೊಡಲು ಶುರು ಮಾಡಿದೆ.
ಕಳೆದ ವಾರಾಂತ್ಯ ನಿರೂಪಕ ಸುದೀಪ್ ಇಲ್ಲದೇ ನಡೆಯಿತು. ನಟಿ ಶ್ರುತಿ, ನಟಿ ಶುಭಾ ಪೂಂಜಾ, ನಟ ಶೈನ್ ಶೆಟ್ಟಿ ಕಳೆದ ವಾರಾಂತ್ಯದ ಕಾರ್ಯಕ್ರಮ ನಡೆಸಿಕೊಟ್ಟರು. ಹೊಸ ವಾರ ಹೊಸತನದೊಂದಿಗೆ ಶುರುವಾಗಿದೆ. ಹೊಸ ಉತ್ಸಾಹದೊಂದಿಗೆ, ಅಗ್ರೆಸಿವ್ ಆಗದೇ ಸೌಹಾರ್ದಯುತವಾಗಿ ಆಡುವ ಸಂಕಲ್ಪದೊಂದಿಗೆ ಮನೆ ಮಂದಿ ಕಣಕ್ಕಿಳಿದಿದ್ದಾರೆ. ಈ ಸಂದರ್ಭದಲ್ಲಿ 'ಬಿಗ್ ಬಾಸ್' ಮನೆ ಮಂದಿಗೆ ಹೊಸದೊಂದು ಸಿಹಿ ಸರ್ಪೈಸ್ ನೀಡಿದ್ದಾರೆ. ಅದೇನು ಎಂಬುದು ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಜಾಹೀರಾಗಿದೆ. ಕಲರ್ಸ್ ಕನ್ನಡ ಸೋಷಿಯಲ್ ಮೀಡಿಯಾಗಳಲ್ಲಿ 'ಅಮ್ಮ ಬಂದ್ರು..' ಶೀರ್ಷಿಕೆಯಡಿ ಇಂದಿನ ಸಂಚಿಕೆಯ ಪ್ರೋಮೋ ಅನಾವರಣಗೊಳಿಸಿದ್ದು, ಕಂಪ್ಲೀಟ್ ಎಪಿಸೋಡ್ ವೀಕ್ಷಿಸಲು ಪ್ರೇಕ್ಷಕರು ಕಾತರರಾಗಿದ್ದಾರೆ.
ಬಿಗ್ ಬಾಸ್ ಮನೆ ಮಂದಿ ಮನೆಯ ಚಟುವಟಿಕೆಗಳಲ್ಲಿ ನಿರತರಾಗಿರುವಾಗ, ಕುಟುಂಬಸ್ಥರು ಮನೆಯೊಳಗೆ ಬರುವ ಸೂಚನೆ ಸಿಕ್ಕಿದೆ. ಇದನ್ನು ಮೊದಲು ಊಹಿಸಿದ್ದು ಮನೆಯ ಕ್ಯಾಪ್ಟನ್ ನಮ್ರತಾ ಅವರು. 'ಮನೆಯವರು ಬರುತ್ತಿದ್ದಾರೆ' ಎಂದು ಕುಣಿದಾಡಿದ್ದಾರೆ. ನಮ್ರತಾ ಅವರ ತಾಯಿ, ವರ್ತೂರ್ ಅವರ ಅಮ್ಮ ಬಿಗ್ ಬಾಸ್ ಮುಖ್ಯದ್ವಾರದಿಂದ ಬಂದಿರುವುದನ್ನು ಸದ್ಯ ಬಿಡುಗಡೆ ಆಗಿರುವ ಪ್ರೋಮೋದಲ್ಲಿ ಕಾಣಬಹುದು.