ಕರ್ನಾಟಕ

karnataka

ETV Bharat / entertainment

ಮಗನನ್ನು ಎದೆಗಪ್ಪಿಕೊಂಡ ಸುಂದರ ಕ್ಷಣ ಹಂಚಿಕೊಂಡ ಕಾಜಲ್ ಅಗರ್ವಾಲ್ - ಪುತ್ರ ನೀಲ್ ಕಿಚ್ಲು

ದಕ್ಷಿಣ ಚಿತ್ರರಂಗದ ಖ್ಯಾತ ನಟಿ ಕಾಜಲ್ ಅಗರ್ವಾಲ್ ತಾಯ್ತನದ ಅವಧಿಯನ್ನು ಆನಂದಿಸುತ್ತಿದ್ದಾರೆ. ಪುತ್ರ ನೀಲ್ ಕಿಚ್ಲುನೊಂದಿಗಿನ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಕಾಮೆಂಟ್‌ ಮೂಲಕ ಪ್ರತಿಕ್ರಿಯಿಸುತ್ತಿದ್ದಾರೆ.

ಕಾಜಲ್ ಅಗರ್ವಾಲ್
ಕಾಜಲ್ ಅಗರ್ವಾಲ್

By

Published : Jun 13, 2022, 2:17 PM IST

ಹೈದರಾಬಾದ್: ನಟಿ ಕಾಜಲ್ ಅಗರ್ವಾಲ್ ತಾಯ್ತನದ ಖುಷಿಯಲ್ಲಿದ್ದಾರೆ. ಗಂಡು ಮಗುವಿಗೆ ಜನ್ಮ ನೀಡಿರುವ ನಟಿ, ಈಗ ಮಗನೊಂದಿಗೆ ಖುಷಿಯಿಂದ ಕಾಲ ಕಳೆಯುತ್ತಿದ್ದಾರೆ.

ಮೇ 8 ರಂದು ಕಾಜಲ್ ಮೊದಲ ಬಾರಿಗೆ ಮಗನ ಫೋಟೋ ಪ್ರಕಟಿಸಿದ್ದರು. ಇದೀಗ ಮತ್ತೊಮ್ಮೆ 'ನೀಲ್ ಕಿಚ್ಲು, ಲವ್​ ಆಫ್​ ಮೈ ಲೈಫ್​.. ನನ್ನ ಹೃದಯ ಬಡಿತ' ಎಂಬ ಶೀರ್ಷಿಕೆ ನೀಡಿ ಮಗನನ್ನು ಎದೆಯ ಮೇಲೆ ಮಲಗಿಸಿಕೊಂಡ ಸುಂದರ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈಗಲೂ ನೀಲ್ ಮುಖ ಕಾಣಿಸಿದಂತೆ ಕಾಜಲ್ ಫೋಟೋ ಶೇರ್​ ಮಾಡಿದ್ದಾರೆ.

ಮಗನೊಂದಿಗೆ ನಟಿ ಕಾಜಲ್ ಅಗರ್ವಾಲ್

ಕಾಜಲ್ ಕೊನೆಯ ಬಾರಿಗೆ ತೆಲುಗು ಚಿತ್ರ 'ಆಚಾರ್ಯ' (2022) ದಲ್ಲಿ ಕಾಣಿಸಿಕೊಂಡಿದ್ದರು. ಈ ವರ್ಷ ಏಪ್ರಿಲ್‌ನಲ್ಲಿ ಈ ಚಿತ್ರ ಬಿಡುಗಡೆಯಾಗಿತ್ತು. ಈ ಹಿಂದೆ ಈ ಮಾರ್ಚ್‌ನಲ್ಲಿ ತೆರೆಕಂಡ ‘ಹೇ ಸಿನಾಮಿಕಾ’ ನಟಿಸಿದ್ದರು. ಕಾಜಲ್ ಅವರ ಮುಂಬರುವ ಚಿತ್ರಗಳಲ್ಲಿ 'ಕರುನಾಗಪಿಯಂ' (ತಮಿಳು), 'ಘೋಸ್ತಿ' (ತಮಿಳು) ಮತ್ತು 'ಉಮಾ' (ಹಿಂದಿ) ಸೇರಿವೆ.

ಮಗನೊಂದಿಗೆ ನಟಿ ಕಾಜಲ್ ಅಗರ್ವಾಲ್

ಇದನ್ನೂ ಓದಿ:Disha Patani Birthday; ಬಾಲಿವುಡ್​​​ ಸಿನಿ ಜಗತ್ತಿನ ದಂತದ ಗೊಂಬೆಯ ಬೊಂಬಾಟ್​ ಫೋಟೋಗಳು

ABOUT THE AUTHOR

...view details