ಹೈದರಾಬಾದ್:ಸಾಹಸಮಯ ಆಧಾರಿತ ರಿಯಾಲಿಟಿ ಶೋ ಖತ್ರೋನ್ ಕೆ ಕಿಲಾಡಿ ಯಶಸ್ವಿಯಾದ ನಂತರ, ಚಲನಚಿತ್ರ ನಿರ್ಮಾಪಕ ರೋಹಿತ್ ಶೆಟ್ಟಿ ಪವರ್ ಪ್ಯಾಕ್ಡ್ ಶೋನ ಮತ್ತೊಂದು ಸೀಸನ್‌ಗೆ ವಾಪಸ್ ಆಗಿದ್ದಾರೆ. ಇದು 13ನೇ ಸೀಸನ್ ಆಗಿದ್ದು, ಹಲವು ಊಹಾಪೋಹಗಳ ನಂತರ ಶೋ ತನ್ನ ಚಿತ್ರೀಕರಣದ ದಿನಾಂಕವನ್ನು ಪ್ರಕಟಿಸಿದೆ. ಹೌದು, ಎಲ್ಲವೂ ಅಂದುಕೊಂಡಂತೆ ಆದರೆ, ಮೇ ತಿಂಗಳಲ್ಲಿ ಚಿತ್ರೀಕರಣ ಆರಂಭವಾಗಲಿದೆ.
ಖತ್ರೋನ್ ಕೆ ಕಿಲಾಡಿಯ 13ನೇ ಸೀಸನ್‌ಗೆ ಚಿತ್ರನಿರ್ಮಾಪಕ ರೋಹಿತ್ ಶೆಟ್ಟಿ ಮತ್ತೆ ಮರಳಿದ್ದಾರೆ. ಈ ಕಾರ್ಯಕ್ರಮಕ್ಕಾಗಿ ಅನೇಕ ಸೆಲೆಬ್ರಿಟಿಗಳನ್ನು ಆಯ್ಕೆ ಮಾಡುವ ಭರ್ಜರಿ ಚರ್ಚೆಗೆ ಗ್ರಾಸವಾಗಿದೆ. ಖತ್ರೋನ್ ಕೆ ಖಿಲಾಡಿಯ ಮುಂದಿನ ಸೀಸನ್ ಬಗ್ಗೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಕೆಕೆಕೆ-13 ಕಾರ್ಯಕ್ರಮದಲ್ಲಿನ ಸ್ಪರ್ಧಿಗಳ ಪಟ್ಟಿ: ಮೂಲಗಳ ಪ್ರಕಾರ, ಬಿಗ್ ಬಾಸ್-16ರ ಸ್ಪರ್ಧಿಗಳಾದ ಶಾಲಿನ್ ಭಾನೋಟ್ ಮತ್ತು ಶಿವ ಠಾಕರೆ ಅವರನ್ನು ಕಾರ್ಯಕ್ರಮಕ್ಕಾಗಿ ಸಂಪರ್ಕಿಸಲಾಗಿದೆ. ಪ್ರಮುಖವಾಗಿ ಕೇಳಿ ಬರುತ್ತಿರುವ ಇತರರ ಹೆಸರುಗಳು ಇಲ್ಲಿವೆ. ಉರ್ಫಿ ಜಾವೇದ್, ಸೌಂದರ್ಯ ಶರ್ಮಾ, ಮುನವ್ವರ್ ಫರುಕಿ, ಪ್ರಿಯಾಂಕಾ ಚಹರ್ ಚೌಧರಿ, ದಿಶಾ ಪರ್ಮಾರ್, ನಕುಲ್ ಮೆಹ್ತಾ, ಅರ್ಚನಾ ಗೌತಮ್, ಅವನೀತ್ ಕೌರ್ ಮತ್ತು ಟಿನ್ಸೆಲ್ ಸೇರಿದಂತೆ ಇತರ ಪ್ರಸಿದ್ಧ ವ್ಯಕ್ತಿಗಳು ಹೆಸರುಗಳು ಮುನ್ನೆಲೆಗೆ ಬಂದಿವೆ.
ಮೇ ತಿಂಗಳಲ್ಲಿ ಚಿತ್ರೀಕರಣ ಸಾಧ್ಯತೆ:ಅಂತಿಮವಾಗಿ ಆಯ್ಕೆಯಾದ ಸ್ಪರ್ಧಿಗಳು ಮೇ ತಿಂಗಳಲ್ಲಿ ನಡೆಯಲಿರುವ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಜುಲೈನಲ್ಲಿ ರಾತ್ರಿ 9.30ಕ್ಕೆ ಕಲರ್ಸ್ ಟಿವಿಯಲ್ಲಿ ಈ ಕಾರ್ಯಕ್ರಮ ಪ್ರಸಾರವಾಗಲಿದೆ. ಆದ್ರೆ ಸ್ಪರ್ಧಿಗಳು ಅಥವಾ ಭಾಗವಹಿಸುವವರ ಅಂತಿಮ ಪಟ್ಟಿಗೆ ಸಂಬಂಧಿಸಿದಂತೆ ಈವರೆಗೆ ಯಾವುದನ್ನೂ ಅಧಿಕೃತಗೊಳಿಸಿಲ್ಲ. ಸ್ಪರ್ಧಿಗಳು ಆಫರ್ ಸ್ವೀಕರಿಸುವ ಅಥವಾ ತಿರಸ್ಕರಿಸುವ ಬಗ್ಗೆ ಚಾನೆಲ್ನವರು, ತಯಾರಕರು ಯಾವುದೇ ಮಾಹಿತಿಯನ್ನು ತಿಳಿಸಿಲ್ಲ.
ಕೆಕೆಕೆ-13ರ ಚೊಚ್ಚಲ ಸ್ಪರ್ಧಿ ಶಾಲಿನ್: ಕಾರ್ಯಕ್ರಮದ ವಿವರಗಳನ್ನು ಸದ್ಯಕ್ಕೆ ಗುಟ್ಟಾಗಿ ಇಡಲಾಗಿದೆ. ಸಿಂಗಂ ಖ್ಯಾತಿಯ ಚಲನಚಿತ್ರ ನಿರ್ದೇಶಕ ರೋಹಿತ್ ಶೆಟ್ಟಿ ಅವರು ಕೆಕೆಕೆ-13 ಕಾರ್ಯಕ್ರಮಕ್ಕಾಗಿ ಶಾಲಿನ್ ಭಾನೋಟ್ ಅವರನ್ನು ಸಂಪರ್ಕಿಸುತ್ತಿದ್ದಾರೆ ಎನ್ನುವುದು ಮಾತ್ರ ಸುದ್ದಿಯಾಗಿದೆ. ಚಿತ್ರನಿರ್ಮಾಪಕ ಬಿಗ್ ಬಾಸ್ ಮನೆಗೆ ಹೋಗಿದ್ದರು. ಶಾಲಿನ್ಗೆ ಕೆಕೆಕೆ-13ಗಾಗಿ ಕೆಲವು ಸವಾಲುಗಳನ್ನು ನೀಡಿದ್ದರು. ಶಾಲಿನ್ ಆ ಟಾಸ್ಕ್ ಅನ್ನು ಗೆದ್ದಾರೆ, ನಂತರ ಅವರನ್ನು ರೋಹಿತ್ ಶೆಟ್ಟಿ ಅವರು ಖತ್ರೋನ್ ಕೆ ಕಿಲಾಡಿಯ ಸೀಸನ್ 13ರ ಚೊಚ್ಚಲ ವ್ಯಕ್ತಿಯಾಗಿ ಪರಿಚಯಿಸಿದ್ದಾರೆ.
ಈಗಾಗಲೇ ಬಿಡುಗಡೆಯಾಗಿದೆ ಟೀಸರ್:ಕೆಕೆಕೆಯ ಸೀಸನ್ 13ರ ಪ್ರಸಾರ ಮಾಡುವ ಬಗ್ಗೆ ಚಾನಲ್ನಲ್ಲಿ ಈಗಾಗಲೇ ಟೀಸರ್ ಬಿಡುಗಡೆ ಮಾಡಲಾಗಿದೆ. ಸಾಹಸಮಯವಾದ ರಿಯಾಲಿಟಿ ಶೋನ ಮೊದಲ ಸ್ಪರ್ಧಿಯಾಗಿ ಭಾನೋಟ್ ಅವರನ್ನು ಪರಿಚಯಿಸಲಾಗಿದೆ. ಕಾರ್ಯಕ್ರಮದಿಂದ ಹೊರಡುವ ಮುನ್ನ, ಖತ್ರೋನ್ ಕೆ ಖಿಲಾಡಿ-13ರಲ್ಲಿ ಒಂದಕ್ಕಿಂತ ಹೆಚ್ಚಿನವರು ಬಿಗ್ ಬಾಸ್-16ರ ಸ್ಪರ್ಧಿಗಳು ಭಾಗವಹಿಸಲಿದ್ದಾರೆ ಎಂದು ರೋಹಿತ್ ಶೆಟ್ಟಿ ತಿಳಿಸಿದರು.
ಇದನ್ನೂ ಓದಿ:ಕಬ್ಜ ಟ್ರೇಲರ್ ಅನಾವರಣಗೊಳಿಸಲಿರುವ ಬಿಗ್ ಬಿ ಅಮಿತಾಭ್ ಬಚ್ಚನ್