ಡಾ. ರಾಜ್ಕುಮಾರ್ ಮನೆಯನ್ನ ಕನ್ನಡ ಚಿತ್ರರಂಗದಲ್ಲಿ, ದೊಡ್ಮನೆ ಎಂದೇ ಕರೆಯಲಾಗುತ್ತದೆ. ಈ ದೊಡ್ಮನೆಯ ಕಿರೀಟದಂತೆ ಇದ್ದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಗಲಿ ಏಳು ತಿಂಗಳು ಕಳೆಯುತ್ತಿವೆ. ಈಗ ದೊಡ್ಮನೆಯಲ್ಲಿ ಶಿವರಾಜ್ ಕುಮಾರ್ ಬಳಿಕ, ರಾಘವೇಂದ್ರ ರಾಜ್ ಕುಮಾರ್ ಕಿರಿಯ ಪುತ್ರ ಯುವರಾಜ್ ಕುಮಾರ್ ಅವರನ್ನು, ಪವರ್ ಸ್ಟಾರ್ ನಂತೆ ಬೆಳೆಸಲು ರಾಜ್ ಅಭಿಮಾನಿಗಳು ಕನಸು ಕಂಡಿದ್ದಾರೆ.
ಈ ಕನಸಿನಂತೆ ಯುವ ರಾಜ್‌ಕುಮಾರ್ ಹೀರೋ ಆಗಲು ಭರ್ಜರಿ ತಾಲೀಮು ನಡೆಸಿದ್ದಾರೆ. ಈಗಾಗಲೇ 'ಯುವ ರಣಧೀರ ಕಂಠೀರವ' ಚಿತ್ರದ ಟೀಸರ್ ಮೂಲಕ, ಕನ್ನಡ ಮಾತ್ರವಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದರು. ಈ ಹಿಂದೆ, ಹೇಳಿದಂತೆ ಕನ್ನಡ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ 'ಹೊಂಬಾಳೆ ಫಿಲ್ಮ್ಸ್' ಸಂಸ್ಥೆಯ ಮೂಲಕ, ದೊಡ್ಮನೆ ಕುಡಿ ಯುವರಾಜ್ ಕುಮಾರ್ ಅವರನ್ನ ಲಾಂಚ್ ಮಾಡಲಾಗುತ್ತಿದೆ.
ದೊಡ್ಮನೆ 'ಯುವರಾಜ'ನ ಚೊಚ್ಚಲ ಚಿತ್ರದ ಫಸ್ಟ್ ಲುಕ್ ಔಟ್ ರಾಜಕುಮಾರ, ಯುವರತ್ನ ಸಿನಿಮಾಗಳನ್ನ ಮಾಡಿ ಸೈ ಎನಿಸಿಕೊಂಡಿರುವ ನಿರ್ದೇಶಕ ಸಂತೋಷ್ ಆನಂದ್ ರಾಮ್ ಹೊಸ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯಡಿ ಅದ್ದೂರಿಯಾಗಿ ನಿರ್ಮಾಣ ಮಾಡಲಾಗುತ್ತಿದೆ. ಸದ್ಯ ಯುವರಾಜ್ ಕುಮಾರ್ ಫಸ್ಟ್ ಲುಕ್ ಅನ್ನು ಹೊಂಬಾಳೆ ಫಿಲ್ಮ್ಸ್ ಅನಾವರಣ ಮಾಡಿದ್ದು, ಯುವರಾಜ್ ಕುಮಾರ್ ಭವಿಷ್ಯದಲ್ಲಿ ಸ್ಟಾರ್ ಆಗುವ ಸೂಚನೆ ಸಿಗುತ್ತಿದೆ.
ದೊಡ್ಮನೆ 'ಯುವರಾಜ'ನ ಚೊಚ್ಚಲ ಚಿತ್ರದ ಫಸ್ಟ್ ಲುಕ್ ಔಟ್ ರಾಜ್ ಕುಟುಂಬದ ಹೊಸ ಕುಡಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದೆ. ಹಾಗಾಗಿ ಯುವರಾಜ್‌ಕುಮಾರ್ ಫಸ್ಟ್ ಲುಕ್ ಲಾಂಚ್ ಸಾಕಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ. ಯುವರಾಜ್ ರಾಜ್ ಕುಮಾರ್ ಮೊದಲ ಚಿತ್ರದಲ್ಲಿ, ಯಾವ ಪಾತ್ರದಲ್ಲಿ ಹೇಗೆ ಕಾಣಿಸಿಕೊಳ್ಳುತ್ತಾರೆ ಎನ್ನುವ ಬಗ್ಗೆ ಸಾಕಷ್ಟು ಕುತೂಹಲ ಮೂಡಿವೆ.
ಇದನ್ನೂ ಓದಿ:ಚಿಕ್ಕಪ್ಪನ ನೆಚ್ಚಿನ ದೈವ ತಾಣಕ್ಕೆ 'ರಾಜ್' ಕುಟುಂಬದ ಕುಡಿ ಭೇಟಿ