ಕರ್ನಾಟಕ

karnataka

ETV Bharat / entertainment

'ಬಾನ ದಾರಿಯಲ್ಲಿ' ಪಯಣಿಸಲು ಅಣಿಯಾದ ಗೋಲ್ಡನ್ ಸ್ಟಾರ್ ಗಣೇಶ್ - ಬಾನ ದಾರಿಯಲ್ಲಿ ಚಿತ್ರದ ಪೋಸ್ಟರ್ ಬಿಡುಗಡೆ

'ಮಳೆಯಲಿ ಜೊತೆಯಲಿ' ಜತೆಯಾದ ಗಣೇಶ್ ಹಾಗೂ ಪ್ರೀತಂ ಗುಬ್ಬಿ ಜೋಡಿ ಈಗ ಬಾನ ದಾರಿಯಲ್ಲಿ ಸಾಗಲಿದ್ದಾರೆ. ಇವರಿಬ್ಬರ ಕಾಂಬಿನೇಶನ್ನಿನಲ್ಲಿ ಬರುತ್ತಿರುವ ಹೊಸ ಚಿತ್ರಕ್ಕೆ 'ಬಾನ ದಾರಿಯಲ್ಲಿ' ಎಂದು ಹೆಸರಿಡಲಾಗಿದೆ.

Baana daariyalli movie poster
ಬಾನ ದಾರಿಯಲ್ಲಿ ಚಿತ್ರದ ಪೋಸ್ಟರ್ ಬಿಡುಗಡೆ

By

Published : Apr 3, 2022, 7:19 AM IST

Updated : Apr 3, 2022, 8:48 AM IST

ಕನ್ನಡ ಚಿತ್ರರಂಗದಲ್ಲಿ 'ಮಳೆಯಲಿ ಜೊತೆಯಲಿ' ಹಾಗೂ ದಿಲ್ ರಂಗೀಲಾ ಸಿನಿಮಾಗಳ ಮೂಲಕ ಹಿಟ್ ಜೋಡಿ ಎಂದು ಕರೆಸಿಕೊಂಡಿರುವ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಿರ್ದೇಶಕ ಪ್ರೀತಂ ಗುಬ್ಬಿ ಈಗ ಹೊಸ ಚಿತ್ರ ಘೋಷಿಸಿದ್ದಾರೆ. ಚಿತ್ರಕ್ಕೆ 'ಬಾನ ದಾರಿಯಲ್ಲಿ' ಎಂದು ಶೀರ್ಷಿಕೆ ಕೊಡಲಾಗಿದೆ. ಪವರ್ ಸ್ಟಾರ್ ಪುನೀತ್ ರಾಜ್​​ಕುಮಾರ್ ಕಂಠಸಿರಿಯಿಂದ ಮೂಡಿಬಂದಿದ್ದ ಜನಪ್ರಿಯ ಹಾಡಿನ ಪದಗಳಾದ 'ಬಾನ ದಾರಿಯಲ್ಲಿ' ಇದೀಗ ಗಣೇಶ್ ಸಿನಿಮಾದ ಟೈಟಲ್ ಆಗಿದೆ.

ನಟ ಗಣೇಶ್ ಹಾಗೂ ನಿರ್ದೇಶಕ ಪ್ರೀತಂ ಗುಬ್ಬಿ

ಯುಗಾದಿ ಹಬ್ಬದ ಪ್ರಯುಕ್ತ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ. ಪ್ರೀತಂ ಗುಬ್ಬಿ ನಿರ್ದೇಶನದಲ್ಲಿ ಗಣೇಶ್ ಈ ಹಿಂದೆ ಮಳೆಯಲಿ ಜೊತೆಯಲಿ, ದಿಲ್ ರಂಗೀಲಾ ಹಾಗೂ 99 ಚಿತ್ರಗಳಲ್ಲಿ ನಟಿಸಿದ್ದರು. ಇದು ನಾಲ್ಕನೇ ಚಿತ್ರವಾಗಿದೆ.


ವಿ.ಹರಿಕೃಷ್ಣ ಸಂಗೀತ ನಿರ್ದೇಶನ, ಪ್ರೀತಾ ಜಯರಾಂ ಛಾಯಾಗ್ರಹಣ ಹಾಗೂ ದೀಪು ಎಸ್.ಕುಮಾರ್ ಸಂಕಲನ ಚಿತ್ರಕ್ಕಿದೆ. ನಾಯಕಿ ಸೇರಿದಂತೆ ಉಳಿದ ತಾರಾಬಳಗದ ಆಯ್ಕೆ ನಡೆಯುತ್ತಿದೆ. ಮೇ ತಿಂಗಳಿನಲ್ಲಿ ಚಿತ್ರೀಕರಣ ಆರಂಭವಾಗಲಿದೆ.

ಇದನ್ನೂ ಓದಿ:ವಿಕ್ರಾಂತ್ ರೋಣ' ಟೀಸರ್​ ರಿಲೀಸ್​: ಸಿನಿಮಾ ಬಿಡುಗಡೆ ದಿನಾಂಕ ಬಹಿರಂಗ

Last Updated : Apr 3, 2022, 8:48 AM IST

ABOUT THE AUTHOR

...view details