ಕರ್ನಾಟಕ

karnataka

ETV Bharat / entertainment

ಡಿಯರ್ ಕಣ್ಮಣಿಯಾಗಿ ದೊಡ್ಡಪರದೆ ಮೇಲೆ ಮಿಂಚಲು ಗೀತಾ ಸಿದ್ಧ - ಡಿಯರ್ ಕಣ್ಮಣಿ

ಗೀತಾ ಧಾರಾವಾಹಿಯ ನಟಿ ಭವ್ಯಾಗೌಡ ಡಿಯರ್ ಕಣ್ಮಣಿ ಸಿನಿಮಾದಲ್ಲಿ ಮುಖ್ಯವಾದ ಪಾತ್ರವೊಂದಕ್ಕೆ ಬಣ್ಣಹಚ್ಚಲಿದ್ದಾರೆ.

ನಟಿ ಭವ್ಯಾಗೌಡ
ನಟಿ ಭವ್ಯಾಗೌಡ

By

Published : Mar 29, 2021, 10:20 AM IST

Updated : Aug 17, 2022, 12:05 PM IST

ಕಿರಿಕ್ ಮಾಡಿದ್ರೆ ಹೊಡಿಯೋಕೂ ಸೈ, ಪ್ರೀತಿ ಮಾಡೋರಿಗೆ ಜೀವ ಕೊಡೋಕೂ ಸೈ ಎನ್ನುವ ಮುದ್ದು ಹುಡುಗಿ "ಗೀತಾ" ಇದೀಗ ದೊಡ್ಡ ಪರದೆ ಮೇಲೆ ಮಿಂಚಲು ಸಜ್ಜಾಗಿದ್ದಾರೆ.

ಹೌದು, "ಗೀತಾ" ಧಾರಾವಾಹಿಯ ನಟಿ ಭವ್ಯಾಗೌಡ "ಡಿಯರ್ ಕಣ್ಮಣಿ' ಸಿನಿಮಾದಲ್ಲಿ ಮುಖ್ಯವಾದ ಪಾತ್ರವೊಂದಕ್ಕೆ ಬಣ್ಣಹಚ್ಚಲಿದ್ದಾರೆ. ಈಗಾಗಲೇ ಈ ಸಿನಿಮಾದಲ್ಲಿ ಬಿಗ್‍ಬಾಸ್ ಖ್ಯಾತಿಯ ಕಿಶನ್, ರೇಖಾದಾಸ್ ಅವರ ಮಗಳು ಸಾತ್ವಿಕಾ ಹಾಗೂ ಕ್ರಿಕೆಟಿಗ ಪ್ರವೀಣ್ ನಟಿಸುವ ಬಗ್ಗೆ ಸಿನಿಮಾ ತಂಡ ಘೋಷಿಸಿತ್ತು. ಈಗ ಇನ್ನೊಂದು ಮುಖ್ಯ ಪಾತ್ರದಲ್ಲಿ ಭವ್ಯಾ ಗೌಡ ನಟಿಸುವ ಬಗ್ಗೆ ಮಾಹಿತಿ ಹಂಚಿಕೊಂಡಿದೆ.

ನಟಿ ಭವ್ಯಾಗೌಡ

ಇನ್ನು ಇದೊಂದು ತ್ರಿಕೋನ ಪ್ರೇಮ ಕಥೆ ಅಲ್ಲ, ಈ ಸಿನಿಮಾದಲ್ಲಿ ನಾಲ್ವರು ನಟರಿದ್ದಾರೆ. ಕಿರುತೆರೆಗಿಂತ ಭವ್ಯಾ ಇಲ್ಲಿ ಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದ ಕಥೆ ಕೂಡ ಅಷ್ಟೇ ಭಿನ್ನವಾಗಿದೆ. ಸಿನಿಮಾದಲ್ಲಿ ನಾಲ್ವರು ನಟರಿಗೂ ಸಮಾನ ಪ್ರಮಾಣದ ಆದ್ಯತೆ ನೀಡಲಾಗಿದೆ ಎಂದು ನಿರ್ದೇಶಕಿ ಹಾಗೂ ನಿರ್ಮಾಪಕಿ ವಿಸ್ಮಯಾ ಗೌಡ ಹೇಳಿದ್ದಾರೆ.

ನಟಿ ಭವ್ಯಾಗೌಡ

ಈ ಕುರಿತು ಅಭಿಪ್ರಾಯ ಹಂಚಿಕೊಂಡ ಭವ್ಯಾ ಗೌಡ, ನಾನು ಗಗನಸಖಿ ಆಗಬೇಕು ಎಂದು ಕನಸು ಕಂಡಿದ್ದೆ. ಅದಕ್ಕಾಗಿ ಅರ್ಜಿಯನ್ನೂ ಹಾಕಿದ್ದೆ. ಅಷ್ಟರಲ್ಲಿ ಧಾರಾವಾಹಿಯಲ್ಲಿ ನಟಿಸಲು ಅವಕಾಶ ಬಂದಿತು. ನಟನೆಯನ್ನೇ ವೃತ್ತಿ ಮಾಡಿಕೊಳ್ಳಬೇಕು ಎಂದು ಅಂದುಕೊಂಡೆ. ಆದರೆ ತೆಲುಗು, ತಮಿಳು ಧಾರಾವಾಹಿಗಳಲ್ಲಿ ನಟಿಸಲು ಅಮ್ಮ ಒಪ್ಪಲಿಲ್ಲ. 'ಗೀತಾ' ಧಾರಾವಾಹಿ ನನಗೆ ಕನ್ನಡದ ಮನೆಮಗಳು ಎನಿಸಿಕೊಳ್ಳುವ ಅವಕಾಶ ಮಾಡಿಕೊಟ್ಟಿತು. ಆ ಧಾರಾವಾಹಿಯಿಂದ ನನ್ನ ಅದೃಷ್ಟ ಬದಲಾಯಿತು ಎಂದರು.

ನಟಿ ಭವ್ಯಾಗೌಡ

"ಡಿಯರ್ ಕಣ್ಮಣಿ"ಯ ಭಾಗವಾಗಿರುವ ಬಗ್ಗೆ ನನಗೆ ಖುಷಿಯಿದೆ. ಇಂತಹ ಪಾತ್ರ ಸಿಕ್ಕಾಗ ಎರಡು ಕಡೆ ಕೆಲಸ ಮಾಡಿದರೂ ಸಾರ್ಥಕತೆ ಸಿಗುತ್ತದೆ. ಗೀತಾ ತಂಡ ಕೂಡ ನನಗೆ ಬೆಂಬಲ ನೀಡುತ್ತಿದೆ. ಈ ಸಿನಿಮಾ ನನ್ನ ವೃತ್ತಿ ಬದುಕಿಗೆ ಬ್ರೇಕ್ ಕೊಡಲಿದೆ. ಇಲ್ಲಿವರೆಗೂ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕಿಲ್ಲ ಅಂತೇನಿಲ್ಲ. ಆದರೆ ನನಗೆ ಇಷ್ಟವಾಗುವ ಪಾತ್ರ ಸಿಕ್ಕಿರಲ್ಲ. ಇಲ್ಲಿ ಗಟ್ಟಿಯಾದ ಒಂದು ಪಾತ್ರ ಇದೆ. ಚಾಲೆಂಜಿಂಗ್ ಆಗಿದೆ. ಇದರಲ್ಲಿರುವ ಪಾತ್ರ ಇಷ್ಟ ಆಯಿತು. ನಿಜ ಹೇಳಬೇಕು ಅಂದ್ರೆ ನನಗೆ ಈ ಸಿನಿಮಾದ ನಿರ್ದೇಶಕಿ ಹಾಗೂ ನಿರ್ಮಾಪಕಿ ವಿಸ್ಮಯಾ ಅವರು ತುಂಬಾ ಇಷ್ಟ ಆದರು. ಮಹಿಳಾ ನಿರ್ದೇಶಕಿ ಜೊತೆ ಕೆಲಸ ಮಾಡುವ ಖುಷಿಯೇ ಬೇರೆ. ಜೊತೆಗೆ 'ಗೀತಾ' ಧಾರಾವಾಹಿಯ ಕೆಲಸಕ್ಕೆ ಯಾವುದೇ ತೊಂದರೆಯಾಗದಂತೆ ಅವರು ಡೇಟ್ ಹೊಂದಿಸುವುದಾಗಿ ಹೇಳಿದ್ದು, ತುಂಬಾ ಖುಷಿಯಾಯಿತು. ತುಂಬಾ ಪ್ರೀತಿಯಿಂದ ಈ ಸಿನಿಮಾ ಒಪ್ಪಿಕೊಂಡು ಮಾಡುತ್ತಿದ್ದೇನೆ ಎಂದರು.

Last Updated : Aug 17, 2022, 12:05 PM IST

ABOUT THE AUTHOR

...view details