ಹೈದರಾಬಾದ್: ಸಮಂತಾ ಅವರ ಮುಂಬರುವ ಥ್ರಿಲ್ಲರ್ 'ಯಶೋದಾ' ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ. ಈ ಸಿನಿಮಾ ಈಗಾಗಲೇ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಕೆರಳಿಸಿದೆ. ಚಿತ್ರದ ಫಸ್ಟ್ ಲುಕ್ನಲ್ಲಿ ಕಂಡು ಬರುವಂತೆ ಆಕೆ ಹೊಸ ಪ್ರಪಂಚವನ್ನು ನೋಡಲು ಕಾತುರಳಾಗಿರುವಂತೆ ಹಾಗೂ ಆಕೆ ವಾಸ್ತವವಾಗಿ ಜಟಿಲದಲ್ಲಿ ಸಿಕ್ಕಿಬಿದ್ದಿರುವುದರ ಬಗ್ಗೆ ತೋರಿಸಲಾಗಿದೆ.
ಆಕೆ ಐಷಾರಾಮಿ ಕೋಣೆಯಲ್ಲಿ ಒಬ್ಬಳೇ ಇದ್ದು, ಅಲ್ಲಿ ಅವಳ ಎಲ್ಲ ಅಗತ್ಯಗಳನ್ನು ಪೂರೈಸಲಾಗಿದೆ. ಆದರೆ ಹೊರ ಜಗತ್ತಿನ ಯಾವ ಸಂಪರ್ಕವೂ ಆಕೆಗೆ ಇಲ್ಲ ಎಂಬುದನ್ನು ಈ ದೃಶ್ಯದಲ್ಲಿ ತೋರಿಸಲಾಗಿದ್ದು, ಇದರಲ್ಲಿ ಒಂದೇ ಒಂದು ಮಾತಿಲ್ಲದಿದ್ದರೂ ಭಾರೀ ಸದ್ದು ಮಾಡುತ್ತಿದೆ.