ಕರ್ನಾಟಕ

karnataka

ETV Bharat / entertainment

ನೂರು ಕೋಟಿ ವೆಚ್ಚದಲ್ಲಿ ವೆಬ್ ಸೀರಿಸ್ ನಿರ್ಮಾಣ ಮಾಡುವ ಯೋಜನೆಯಲ್ಲಿ ನಿರ್ದೇಶಕ ಕೆ.ಎಸ್ ರಾಮ್ ಜಿ - Gagan Enterprises

ಗಗನ್ ಎಂಟರ್ ಪ್ರೈಸಸ್​ ವಿಶ್ವದ 22ಕ್ಕೂ ಅಧಿಕ ಹೆಸರಾಂತ ಕಂಪನಿಗಳ ಜೊತೆ ಸಹಭಾಗಿತ್ವ ಹೊಂದಿರುವ ಬನಿಜಯ್ ಏಷ್ಯಾ ಕಂಪನಿ ಜೊತೆ ಕೈ ಜೋಡಿಸಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ 'ರಾಣಿ' ಧಾರಾವಾಹಿ ನಿರ್ಮಾಣವಾಗುತ್ತಿದೆ.

director-ks-ram-g-is-planning-to-produce-a-web-series-at-a-cost-of-one-hundred-crores
ನೂರು ಕೋಟಿ ವೆಚ್ಚದಲ್ಲಿ ವೆಬ್ ಸೀರಿಸ್ ನಿರ್ಮಾಣ ಮಾಡುವ ಯೋಜನೆಯಲ್ಲಿ ನಿರ್ದೇಶಕ ಕೆ.ಎಸ್ ರಾಮ್ ಜಿ

By

Published : Apr 8, 2023, 8:48 PM IST

ಕನ್ನಡ ಕಿರುತೆರೆ ಲೋಕದಲ್ಲಿ ಗಗನ್ ಎಂಟರ್ ಪ್ರೈಸಸ್​​ನ ಮೂಲಕ ಕೆ.ಎಸ್ ರಾಮ್ ಜಿ ಅವರು ಕಿರುತೆರೆಯಲ್ಲಿ ಸಾಕಷ್ಟು ವಿಶಿಷ್ಟ ಹಾಗೂ ವಿಭಿನ್ನ ಧಾರಾವಾಹಿಗಳನ್ನು ನಿರ್ಮಿಸಿ, ನಿರ್ದೇಶಿಸಿ ಕನ್ನಡಿಗರ ಮನ ಮಾತಗಿದ್ದಾರೆ. 'ರಾಮಾಚಾರಿ', 'ನಾಗಿಣಿ 2', 'ಪುಟ್ಟ ಗೌರಿ ಮದುವೆ', ಹಾಗೂ 'ಗೀತಾ', ಮುಂತಾದ ಜನಪ್ರಿಯ ಧಾರಾವಾಹಿಗಳು ಕೆ.ಎಸ್ ರಾಮ್ ಜಿ ಅವರ ಸಾರಥ್ಯದಲ್ಲಿ ಬಂದಿದೆ ಹಾಗೂ ಮುಂದಿನ ದಿನಗಳಲ್ಲು ಒಳ್ಳೆಯ ಧಾರವಾಹಿಗಳು ಬರಲಿವೆ.

ಈಗ ಗಗನ್ ಎಂಟರ್ ಪ್ರೈಸಸ್​ನ ಮತ್ತೊಂದು ಹೆಮ್ಮೆ ವಿಚಾರವೆಂದರೆ, ಈಗಾಗಲೇ ವಿಶ್ವದಾದ್ಯಂತ ಸುಮಾರು 22ಕ್ಕೂ ಅಧಿಕ ಹೆಸರಾಂತ ಕಂಪನಿಗಳ ಜೊತೆ ಸಹಭಾಗಿತ್ವ ಹೊಂದಿರುವ ಬನಿಜಯ್ ಏಷ್ಯಾ ಕಂಪನಿ, ಈಗ ರಾಮ್ ಜಿ ಅವರ ಗಗನ್ ಎಂಟರ್ ಪ್ರೈಸಸ್ ಜೊತೆ ಕೈ ಜೋಡಿಸಿದ್ದು. ಸ್ಟಾರ್ ಸುವರ್ಣ ವಾಹಿನಿಯಲ್ಲಿ 'ರಾಣಿ' ಧಾರಾವಾಹಿ ನಿರ್ಮಾಣವಾಗುತ್ತಿದೆ. ಈ ಬಗ್ಗೆ ಮಾತನಾಡಿದ ನಿರ್ದೇಶಕ ಕೆ.ಎಸ್​ ರಾಮ್​ ಜಿ, ‘‘ಈಗಾಗಲೇ ಗಗನ್ ಎಂಟರ್ ಪ್ರೈಸಸ್ ಮೂಲಕ ಸಾಕಷ್ಟು ಜನಪ್ರಿಯ ಧಾರಾವಾಹಿಗಳು ಜನರ ಮನ ಗೆಲ್ಲುತ್ತಿದೆ‌. ಈಗಾಗಲೇ 700 ಕ್ಕೂ ಅಧಿಕ ಸಿಬ್ಬಂದಿಗಳು ನಮ್ಮ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ತನಕ ಸ್ವಮೇಕ್ ಧಾರಾವಾಹಿಗಳೆ ಸಂಸ್ಥೆಯಿಂದ ಹೊರಬರುತ್ತಿದೆ’’ ಎಂದರು.

ನೂರು ಕೋಟಿ ವೆಚ್ಚದಲ್ಲಿ ವೆಬ್ ಸೀರಿಸ್ ನಿರ್ಮಾಣ ಮಾಡುವ ಯೋಜನೆಯಲ್ಲಿ ನಿರ್ದೇಶಕ ಕೆ.ಎಸ್ ರಾಮ್ ಜಿ

ಇದನ್ನೂ ಓದಿ:41ನೇ ವಸಂತಕ್ಕೆ ಕಾಲಿಟ್ಟ 'ಸ್ಟೈಲಿಶ್​ ಪುಷ್ಪರಾಜ್​'; ನಟ ಅಲ್ಲು ಅರ್ಜುನ್​ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರ

‘‘ಈಗ ಪ್ರಪಂಚದ 120 ದೇಶಗಳಲ್ಲಿ ವಿವಿಧ ಜನಪ್ರಿಯ ಕಾರ್ಯಕ್ರಮಗಳನ್ನು ನಿರ್ಮಿಸುತ್ತಿರುವ ಬನಿಜಯ್ ಏಷ್ಯಾ ಕಂಪನಿ ನಮ್ಮ ಸಂಸ್ಥೆ ಜೊತೆ ಕೈಜೋಡಿಸಿದೆ. ನಮ್ಮೆರೆಡು ಸಂಸ್ಥೆಗಳ ಸಹಭಾಗಿತ್ವದ ಮೊದಲ ಹೆಜ್ಜೆಯಾಗಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ 'ರಾಣಿ' ಧಾರಾವಾಹಿ ನಿರ್ಮಾಣವಾಗುತ್ತಿದೆ. ನಾನೇ ಈ ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದೇನೆ. ಮುಂದಿನ ದಿನಗಳಲ್ಲಿ ನೂರು ಕೋಟಿಗೂ ಅಧಿಕ ವೆಚ್ಚದಲ್ಲಿ ವೆಬ್ ಸೀರೀಸ್ ಮಾಡುವ ಯೋಜನೆ ಇದೆ’’ ಎಂದು ನಿರ್ದೇಶಕ ಕೆ.ಎಸ್ ರಾಮ್ ಜಿ ಹೇಳಿದರು.

ನೂರು ಕೋಟಿ ವೆಚ್ಚದಲ್ಲಿ ವೆಬ್ ಸೀರಿಸ್ ನಿರ್ಮಾಣ ಮಾಡುವ ಯೋಜನೆಯಲ್ಲಿ ನಿರ್ದೇಶಕ ಕೆ.ಎಸ್ ರಾಮ್ ಜಿ

ಇದನ್ನೂ ಓದಿ:'ಸಹೋದರ ಕೋಮಲ್ ಕಾಮಿಡಿಗೆ ನಾನು ಅಭಿಮಾನಿ': ನಟ ಜಗ್ಗೇಶ್​

ಇನ್ನು ಗಗನ್ ಎಂಟರ್ ಪ್ರೈಸಸ್ ಜೊತೆ ಸಹಭಾಗಿತ್ವ ಹೊಂದಿರುವುದು ನಮಗೆ ಖುಷಿ ತಂದಿದೆ. ರಾಮ್ ಜಿ ಅವರು ಹೇಳಿದಂತೆ ಮೊದಲ ಹೆಜ್ಜೆಯಾಗಿ "ರಾಣಿ" ಧಾರಾವಾಹಿ ಅದ್ಧೂರಿಯಾಗಿ ನಿರ್ಮಾಣವಾಗುತ್ತಿದೆ‌. ಮುಂದೆ ಸಾಕಷ್ಟು ಜನಪ್ರಿಯ ಧಾರಾವಾಹಿಗಳು, ವೆಬ್ ಸೀರಿಸ್ ಹಾಗೂ ವೀಕೆಂಡ್ ಶೋಗಳನ್ನ ನಿರ್ಮಿಸುವ ಯೋಜನೆ ಇದೆ ಎಂದು ಬನಿಜಯ್ ಏಷ್ಯಾ ಕಂಪನಿಯ ಬ್ಯುಸಿನೆಸ್ ಹೆಡ್ ರಾಜೇಶ್ ಚಡ್ಡಾ ಮತ್ತು ಸೌತ್ ಅಸೋಸಿಯೇಟೆಡ್​ ಪ್ರೆಸಿಡೆಂಟ್ ಜಗದೀಶ್ ಪಾಟೀಲ್ ಅವರು ತಿಳಿಸಿದರು. ಇದೇ ಸಂದರ್ಭದಲ್ಲಿ ರಾಣಿ ಧಾರಾವಾಹಿಯಲ್ಲಿ ಅಭಿನಯಿಸುತ್ತಿರುವ ಕಲಾವಿದರು ಹಾಗೂ ತಂತ್ರಜ್ಞರು ಉಪಸ್ಥಿತರಿದ್ದರು. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಏಪ್ರಿಲ್ 3 ರಿಂದ ಸಂಜೆ 6.30ಕ್ಕೆ ಪ್ರಸಾರವಾಗಲಿದೆ.‌

ಇದನ್ನೂ ಓದಿ:'ಮಾನಾಡು' ಸಿನಿಮಾದ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಡಲಿದ್ದಾರಾ ಮಾಸ್​ ಮಹಾರಾಜ?

ABOUT THE AUTHOR

...view details