ಕೋಝಿಕ್ಕೋಡ್: ಕನ್ನಡದ ಸೂಪರ್ ಹಿಟ್ ಚಿತ್ರ ಕಾಂತಾರದಲ್ಲಿನ 'ವರಾಹರೂಪ' ಹಾಡಿನ ಪ್ರಸಾರಕ್ಕೆ ಕೋಝಿಕ್ಕೋಡ್ ಜಿಲ್ಲಾ ಪ್ರಧಾನ ಸೆಷನ್ಸ್ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಮಲಯಾಳಂನ ಹೆಸರಾಂತ ರಾಕ್ ಬ್ಯಾಂಡ್ 'ತೈಕುಡಂ ಬ್ರಿಡ್ಜ್' ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಅನುಮತಿಯಿಲ್ಲದೆ ಹಾಡನ್ನು ಪ್ರದರ್ಶಿಸದಂತೆ ನಿರ್ಮಾಪಕ, ನಿರ್ದೇಶಕ ಮತ್ತು ಸಂಗೀತ ನಿರ್ದೇಶಕರಿಗೆ ಸೂಚಿಸಿದೆ.
ಹಾಡನ್ನು ಪ್ರಸಾರ ಮಾಡದಂತೆ ಅಮೆಜಾನ್ ಪ್ರೈಮ್, ಯುಟ್ಯೂಬ್ ಮತ್ತು ಲಿಂಕ್ ಮ್ಯೂಸಿಕ್ ಕಂಪನಿಗಳಿಗೆ ಸಹ ನ್ಯಾಯಾಲಯ ನಿರ್ದೇಶಿಸಿದೆ.