ಬೆಂಗಳೂರು: ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಖ್ಯಾತಿಯ ಹಾಸ್ಯ ನಟಿ ನಯನಾ ವಿರುದ್ಧ ಜೀವ ಬೆದರಿಕೆ ಹಾಗೂ ನಿಂದನೆ ಆರೋಪದಡಿ ಆರ್.ಆರ್. ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿ ಗ್ಯಾಂಗ್ ರಿಯಾಲಿಟಿ ಶೋನಲ್ಲಿ ಎರಡನೇ ಸ್ಥಾನ ಪಡೆದಿದ್ದ ನಯನಾ ಆ್ಯಂಡ್ ಟೀಮ್ ವಿರುದ್ಧ ಕಾಮಿಡಿಯನ್ ಸೋಮಶೇಖರ್ ಎಂಬುವರು ದೂರು ನೀಡಿದ್ದಾರೆ. ನಯನಾ ತಂಡದಲ್ಲಿ ಸೋಮಶೇಖರ್ ಸದಸ್ಯನಾಗಿದ್ದರು. ದ್ವಿತೀಯ ಸ್ಥಾನದಿಂದ ಬಂದಿದ್ದ ನಗದು ಹಣ ಬಹುಮಾನ ಹಂಚಿಕೆ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿದೆ ಎಂದು ಹೇಳಲಾಗ್ತಿದೆ.