ಚೆನ್ನೈ:ನಿರ್ದೇಶಕ ವೇಣು ಉಡುಗಲ ನಿರ್ದೇಶನದ 'ವಿರಾಟ ಪರ್ವಂ' ತೆಲುಗು ಚಿತ್ರದ 'ಚಲೋ ಚಲೋ' ಹಾಡನ್ನು ಭಾನುವಾರ ಬಿಡುಗಡೆ ಮಾಡಲಾಗಿದೆ. ಜಿಲುಕರ ಶ್ರೀನಿವಾಸ್ ಅವರ ಸಾಹಿತ್ಯವಿರುವ ಈ ಹಾಡಿಗೆ ಸುರೇಶ್ ಬೊಬ್ಬಿಲಿ ರಾಗ ಸಂಯೋಜಿಸಿದ್ದಾರೆ.
ಈ ಚಿತ್ರದಲ್ಲಿ ರಾಣಾ ದಗ್ಗುಬಾಟಿ ಮತ್ತು ಸಾಯಿ ಪಲ್ಲವಿ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಡ್ಯಾನಿ ಸಾಲೋ ಮತ್ತು ದಿವಾಕರ್ ಮಣಿ ಛಾಯಾಗ್ರಹಣ ಮತ್ತು ಶ್ರೀಕರ್ ಪ್ರಸಾದ್ ಸಂಕಲನವಿದೆ. ರಾಜು ಸುಂದರಂ ಮತ್ತು ಪ್ರೇಮ್ ರಕ್ಷಿತ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಜೂ.17 ರಂದು ಈ ಚಿತ್ರ ವಿಶ್ವಾದ್ಯಂತ ತೆರೆಗೆ ಬರಲಿದೆ.
ಇದನ್ನೂ ಓದಿ:ವಿರಾಟ ಪರ್ವಂ’ನಲ್ಲಿ ನಕ್ಸಲ್ ಪಾತ್ರ ನಿರ್ವಹಿಸಿದ ಪ್ರಿಯಾಮಣಿ
ಪ್ರತಿ ಸಿನಿಮಾದಲ್ಲಿಯೂ ಒಂದಕ್ಕಿಂತ ಒಂದು ಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಸಾಯಿ ಪಲ್ಲವಿ 'ವಿರಾಟ ಪರ್ವಂ' ಚಿತ್ರದಲ್ಲಿ ನಕ್ಸಲೈಟ್ ಅವತಾರ ತಾಳಿದ್ದಾರೆ. ನಕ್ಸಲ್ ಗುಂಪಿನ ನಾಯಕನ ಪಾತ್ರದಲ್ಲಿ ರಾಣಾ ದಗ್ಗುಬಾಟಿ ನಟಿಸಿದ್ದಾರೆ. ನಕ್ಸಲ್ ಕಮಾಂಡರ್ ಮೇಲೆ ಪ್ರೀತಿ ಚಿಗುರಿದ ಬಳಿಕ ಸಾಮಾನ್ಯ ಹಳ್ಳಿ ಹುಡುಗಿಯೊಬ್ಬಳು ತಾನೂ ಕೂಡ ನಕ್ಸಲೈಟ್ ಆಗುತ್ತಾಳೆ ಎಂಬ ಒನ್ ಲೈನ್ ಸ್ಟೋರಿಯನ್ನು ಟ್ರೇಲರ್ನಲ್ಲಿ ಬಿಟ್ಟು ಕೊಡಲಾಗಿದೆ.
1990ರ ಸಮಯದಲ್ಲಿ ತೆಲಂಗಾಣದಲ್ಲಿ ನಡೆದ ಕೆಲವು ಸತ್ಯ ಘಟನೆಗಳನ್ನು ಆಧರಿಸಿ ವಿರಾಟ ಪರ್ವಂ ಸಿನಿಮಾ ಸಿದ್ಧವಾಗಿದೆ. ರಾಣಾ ದಗ್ಗುಬಾಟಿ ಅವರ ಹೋಮ್ ಬ್ಯಾನರ್ ಮೂಲಕವೇ ಈ ಸಿನಿಮಾ ನಿರ್ಮಾಣ ಆಗಿದೆ. ಪ್ರಿಯಾಮಣಿ, ನಂದಿತಾ ದಾಸ್, ಈಶ್ವರಿ ರಾವ್ ಮುಂತಾದ ಪ್ರತಿಭಾವಂತ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ.