ನಟ ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್ ಬಾಸ್ ಶೋ ದಿನದಿಂದ ದಿನಕ್ಕೆ ಪ್ರೇಕ್ಷಕರಿಗೆ ಮನರಂಜನೆಯನ್ನು ಹೆಚ್ಚಿಸುತ್ತಿದೆ. ಎರಡನೇ ವಾರ ಮನೆ ಮಂದಿಯ ನಡುವೆ ಮನಸ್ತಾಪದ ಕಿಚ್ಚು ಜೋರಾಗಿಯೇ ಹೊತ್ತಿಕೊಂಡಿದೆ. ವಿನಯ್ ಮತ್ತು ಸಂಗೀತಾರ ನಡುವಿನ ಜಗಳ ತಾರಕಕ್ಕೇರಿದೆ. ಉಳಿದ ಸ್ಪರ್ಧಿಗಳೆಲ್ಲಾ ಯಾರಿಗೆ ಸಪೋರ್ಟ್ ಮಾಡೋದು ಅಂತ ಯೋಚನೆ ಮಾಡೋದ್ರಲ್ಲೇ ಬಾಕಿ ಆಗಿದ್ದಾರೆ.
ನಿನ್ನೆ ಸಂಗೀತಾಗೆ ಎಲ್ರೂ ನನ್ನ ಟಾರ್ಗೆಟ್ ಮಾಡ್ತಿದಾರೆ ಅನಿಸ್ತಿದ್ರೆ, ಈವತ್ತು ವಿನಯ್ ಪಾಳಿ. ಇದುವರೆಗೂ ಸ್ಟ್ರಾಂಗ್ ಆಗಿಯೇ ಇದ್ದ ವಿನಯ್ ಕಣ್ಣುಗಳಲ್ಲಿ ಇಂದು ನೀರು ಉಕ್ಕಿದೆ. ಹಾಗೆಯೇ ಅವರ ಧ್ವನಿಯೂ ಜೋರಾಗಿದೆ. ‘ಅವ್ಳು ನನ್ನಿಂದ ಡಿಪ್ರೆಶನ್‌ಗೆ ಹೋಗ್ತಿದಾಳೆ ಅಂತಾರೆ. ಅವ್ಳು ನೋಡಿದ್ರೆ ನನ್ನಿಂದ ಥ್ರೆಟ್ ಇದೆ ಅಂತಿದಾಳೆ. ಯಾರಿಗ್ ಏನ್ ಮಾಡಿದೀನಿ ಗುರು ನಾನು?’ ಎಂದು ವಿನಯ್, ಕಾರ್ತಿಕ್ ಬಳಿ ಕೂಗಾಡಿದ್ದಾರೆ.
ಅವರ ಮಾತುಗಳನ್ನು ಕೇಳಿದ ಸಂಗೀತಾ ಶೃಂಗೇರಿ ನೇರವಾಗಿ ವಿನಯ್ ಎದುರಿಗೆ ಬಂದು ಕೂತು, ‘ನಿಮ್ಮಿಂದ ನನಗೆ ಡೇಂಜರ್ ಅಂತ ನಂಗೆ ಅನಿಸುತ್ತದೆ’ ಎಂದು ತಣ್ಣಗೆ ಹೇಳಿದ್ದಾರೆ. ವಿನಯ್ ಅವರ ಜೊತೆಗೆ ಮಾತನಾಡದೆ ಕಾರ್ತಿಕ್ ಬಳಿಯೇ ತಿರುಗಿ, ‘ನನ್ನ ವಾಯ್ಸ್ ಕೇಳೋಕೆ ಆಗದಿದ್ರೆ ಕಿವಿ ಮುಚ್ಕೊಳೋಕೆ ಹೇಳು. ಇಲ್ಲಾ ದೂರ ಇರೋದಕ್ಕೆ ಹೇಳು’ ಎಂದು ಹೇಳಿ ಸಂಗೀತಾ ಕಡೆಗೆ ತಿರುಗಿ, ‘ಪ್ಲೀಸ್ ಡಿಲೀಟ್ ಮೀ ಇನ್ ಯುವರ್ ಹೆಡ್’ ಎಂದಿದ್ದಾರೆ.