ಕನ್ನಡದ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್ ಸೀಸನ್ 10 ಈಗಾಗಲೇ ವಾರ ಪೂರೈಸಿದ್ದು, ಎರಡನೇ ವಾರ ನಡೆಯುತ್ತಿದೆ. ಸ್ಪರ್ಧಿಗಳ ಪ್ರೀತಿ-ಸ್ನೇಹ-ವಿಶ್ವಾಸಕ್ಕೆ ಪರೀಕ್ಷೆ ಎದುರಾದಂತಿದೆ. ಟಾಸ್ಕ್‌ಗೆ ಸಂಬಂಧಿಸಿದಂತೆ ನಡೆದ ಚರ್ಚೆಯಲ್ಲಿ ಕಾರ್ತಿಕ್ ಕೋಪದಿಂದ ಆರ್ಭಟಿಸಿದ್ದು ನೋಡಿ ನಮ್ರತಾ ನಡುಗಿಹೋಗಿದ್ದರಂತೆ. ಕಾರ್ತಿಕ್‌ಗೆ ತಾನು ಪ್ರತಾಪ್ ಪರವಾಗಿ ನಿಂತು ತಪ್ಪುಮಾಡಿದೆ ಅನಿಸಿದೆ. ತಾವು ಕೋಪದಿಂದ ಕೂಗಾಡಿದ್ದಕ್ಕೆ ಅವರು ನಮ್ರತಾ ಅವರ ಬಳಿ ಕ್ಷಮೆಯನ್ನೂ ಕೇಳಿದ್ದಾರೆ.
ಮನೆಯೊಳಗೆ ವಿನಯ್ ಮತ್ತು ಸಂಗೀತಾ ಜಗಳ ದಿನಕ್ಕೊಂದು, ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಮನೆಯ ಸದಸ್ಯರೆಲ್ಲರೂ ಯಾರ ಪರವಾಗಿ ಮಾತಾಡುವುದು, ಯಾರ ತಪ್ಪನ್ನು ಹೇಳುವುದು ಎಂದು ತಿಳಿಯದೇ ಗೊಂದಲಗೊಂಡಂತಿದ್ದಾರೆ. ಈ ನಡುವೆ ಕಾರ್ತಿಕ್-ನಮ್ರತಾ-ಸಂಗೀತಾ ನಡುವೆ ನಡೆದ ಮಾತುಕತೆ ಈ ಕಥೆಯ ಮತ್ತೊಂದು ಮಗ್ಗುಲನ್ನು ಕಾಣಿಸುವಂತಿದೆ. ಈ ವಿಡಿಯೋ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡದ 'Deep ಆಗಿ ನೋಡಿ' ಸೆಗ್ಮೆಂಟ್‌ನಲ್ಲಿ ದಾಖಲಾಗಿದೆ.
ಮೂವರ ನಡುವಿನ ಮಾತುಕತೆ: ಕಾರ್ತಿಕ್: ಸಾರಿ, ಇಫ್ ಐ ವಾಸ್ ಟೂ ರೂಢ್… ನಮ್ರತಾ: ನಂಗ್ ನಿಜವಾಗ್ಲೂ ಭಯ ಆಯ್ತು.. ನೀವು ಆ ಥರ ಮಾತಾಡ್ತೀರಾ? ನೀವು ಹಾಗೆ ಇದೀರಾ? ಕಾರ್ತಿಕ್: ಇಲ್ಲ, ಹಾಗೇನಿಲ್ಲ. ನಂಗ್ ಕೋಪ ಬಂತು ಆಕ್ಚುಲಿ. ರೂಢ್ ಆಗಿರಬೇಕು ಅನ್ನೋದಲ್ಲ. ವಿನಯ್ ಬೇರೆ ಎಲ್ಲರಿಗೂ ಹೇಳ್ತಾ ಇದ್ದ. ಯಾರೂ ಮಾತಾಡ್ತಿರ್ಲಿಲ್ಲ. ಆಗ ಇವ್ನು ಮಧ್ಯ ಬಂದ. ಜೋರಾಗೇ ಮಾತಾಡ್ತಿದ್ದ. ಐ ವಾಸ್ ಟೇಕಿಂಗ್ ಸ್ಟ್ಯಾಂಡ್ ಫಾರ್ ಪ್ರತಾಪ್ ಅಷ್ಟೆ. ಬಟ್ ಕೊನೆಗೂ ನಾನು ಸಪೋರ್ಟ್ ಮಾಡಿದ್ದು ತಪ್ಪು ಅಂತ ಪ್ರತಾಪ್ ಪ್ರೂವ್ ಮಾಡಿಬಿಟ್ಟ.
ನಮ್ರತಾ: ನೋ.. ಇಟ್ಸ್ ಓಕೆ. ಬಟ್ ನಂಗೆ ನಿಜವಾಗ್ಲೂ ಭಯ ಆಯ್ತು. ಅಕ್ಷರಶಃ ನಡುಗಲು ಶುರು ಮಾಡಿದ್ದೆ. ನಂಗೆ ಅಭ್ಯಾಸ ಇಲ್ಲ ಅದು.. ಕಾರ್ತಿಕ್: ಸಾರಿ. ಟೀಮ್ ಕೋ ಆರ್ಡಿನೇಷನ್ ಬೇಕು. ಅದು ಇಂಪಾರ್ಟೆಂಟ್. ಎಲ್ರೂ ಬ್ರೇಕ್‌ಡೌನ್ ಆಗ್ತಿದಾರೆ. ನಮ್ರತಾ: ಅದನ್ನೇ ನಾನು ಹೇಳೋಕೆ ಬಂದೆ. ಇನ್ ಸೆಕ್ಯೂರಿಟಿ… ಅಷ್ಟರಲ್ಲಿ ಅಲ್ಲಿಗೆ ಸಂಗೀತಾ ಬರುತ್ತಾರೆ.
ಸಂಗೀತಾ: ಆಂ… ನಮ್ರತಾ: ಆರ್ ಯು ಓಕೆ? ಸಂಗೀತಾ: ನಿಮ್ ಜೊತೆಗೆ ಜಗಳ ಮಾಡ್ಬೇಕು ಅಂತಿರ್ಲಿಲ್ಲ ನಂಗೆ… ನಮ್ರತಾ: ಅಲ್ಲಾ, ನಾನು ಪ್ರತಾಪ್‌ಗೆ ಟಾಸ್ಕ್ ಏನು ಅಂತ ಎಕ್ಸ್‌ಪ್ಲೇನ್ ಮಾಡ್ತಿದ್ದೆ. ಅಷ್ಟರಲ್ಲಿ ನೀವು ಬಂದ್ರಲ್ಲಾ. ‘ಥ್ರೆಟನಿಂಗ್’ ಅಂದ್ರಿ, ಅದು ತಪ್ಪು ಶಬ್ದ. ಅದನ್ನು ಬಳಸಬೇಡಿ ಅಷ್ಟೇ ನಾನು ಹೇಳಿದ್ದು… ಕಾರ್ತಿಕ್: ಆ ಶಬ್ದ ಬಳಸಬಾರದಿತ್ತು. ಇಟ್ಸ್ ಓಕೆ. ನಮ್ರತಾ: ನಂಗೆ ನಿಮ್ಮ ವಿರುದ್ಧವಾಗಲಿ, ಪ್ರತಾಪ್ ವಿರುದ್ಧವಾಗಲಿ ಏನೂ ಇಲ್ಲ… ಸಂಗೀತಾ: ಹೌದು, ನಾನು ಆ ಶಬ್ದವನ್ನು ಬಳಸಬಾರದಿತ್ತು.