ಕರ್ನಾಟಕ

karnataka

ETV Bharat / entertainment

ಭಾ.ಮಾ‌ ಹರೀಶ್​​ಗೆ ಒಲಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸ್ಥಾನ - ಭಾ ಮಾ‌ ಹರೀಶ್​​ಗೆ ಒಲಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸ್ಥಾನ

ಸಾ.ರಾ.ಗೋವಿಂದು​​ ವಿರುದ್ಧ 400 ಮತಗಳಿಂದ ಭರ್ಜರಿ ಗೆಲುವು ಸಾಧಿಸುವ ಮೂಲಕ ಚಿತ್ರ ನಿರ್ಮಾಪಕ ಭಾ.ಮಾ.ಹರೀಶ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸ್ಥಾನದ ಚುಕ್ಕಾಣಿ ಹಿಡಿದಿದ್ದಾರೆ‌.

Bhama Harish elected president of Karnataka Film Chamber of Commerce
ಭಾ.ಮಾ‌ ಹರೀಶ್​​ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸ್ಥಾನದ ಚುಕ್ಕಾಣಿ

By

Published : May 29, 2022, 6:55 AM IST

ಕನ್ನಡ ಚಿತ್ರರಂಗದ ಕೇಂದ್ರ ಸ್ಥಾನವಾಗಿರುವ 'ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ'ಯ 64ನೇ ವರ್ಷದ ವಾರ್ಷಿಕ ಚುನಾವಣೆ ನಡೆದಿದ್ದು, ನಿರ್ಮಾಪಕ ಭಾ.ಮಾ.ಹರೀಶ್​​ಗೆ ಮೊದಲ ಬಾರಿಗೆ ಅಧ್ಯಕ್ಷ ಸ್ಥಾನ ಒಲಿದಿದೆ. ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ನಿರ್ಮಾಪಕ ಭಾ.ಮಾ.ಹರೀಶ್ ಹಾಗೂ ಸಾ.ರಾ.ಗೋವಿಂದು ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು.

ಇದನ್ನೂ ಓದಿ:ಈ ಬಾರಿ ಭಾ.ಮಾ ಹರೀಶ್ ಫಿಲ್ಮ್ ಚೇಂಬರ್ ಅಧ್ಯಕ್ಷರಾಗಬೇಕು: ನಟಿ ಜಯಮಾಲ

762 ಮತಗಳನ್ನು ಪಡೆಯುವ ಮೂಲಕ‌ ಭಾ.ಮಾ.ಹರೀಶ್ ಜಯಭೇರಿ ಭಾರಿಸಿದ್ದಾರೆ. ಸಾ.ರಾ.ಗೋವಿಂದು 378 ಮತಗಳನ್ನು ಪಡೆದಿದ್ದಾರೆ. ನಿರ್ಮಾಪಕರ ವಲಯದಿಂದ ಉಪಾಧ್ಯಕ್ಷರಾಗಿ ಜೈ ಜಗದೀಶ್ ಗೆಲುವು ಸಾಧಿಸಿದ್ದು, ಗೌರವ ಕಾರ್ಯದರ್ಶಿ ಸ್ಥಾನಕ್ಕೆ ನಟ, ನಿರ್ಮಾಪಕ ಸುಂದರ್ ರಾಜ್ ಆಯ್ಕೆಯಾಗಿದ್ದಾರೆ.

ಭಾ.ಮಾ‌.ಹರೀಶ್​​ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸ್ಥಾನದ ಚುಕ್ಕಾಣಿ

ವಿತರಕರ ವಲಯದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಶಿಲ್ಪ ಶ್ರೀನಿವಾಸ್ ಹಾಗೂ ಗೌರವ ಕಾರ್ಯದರ್ಶಿಯಾಗಿ ಪಾರ್ಥ ಸಾರಥಿ ಆಯ್ಕೆ ಆಗಿದ್ದಾರೆ‌. ಖಜಾಂಚಿಯಾಗಿ ದುನಿಯಾ ಸಿನಿಮಾ ನಿರ್ಮಾಪಕ ಟಿ.ಪಿ.ಸಿದ್ಧರಾಜು ಆಯ್ಕೆಯಾಗಿದ್ದಾರೆ. ಸೋಮವಾರ ನೂತನ ಅಧ್ಯಕ್ಷರಾಗಿ ಭಾ.ಮಾ‌ ಹರೀಶ್ ಅಧಿಕಾರ ಸ್ವೀಕರಿಸಲಿದ್ದಾರೆ

ಇದನ್ನೂ ಓದಿ:ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ.. ಯಾರಾಗ್ತಾರೆ ಅಧ್ಯಕ್ಷ?

ABOUT THE AUTHOR

...view details