ಮುಂದೆ ಸಾಗಬೇಕಾದರೆ ವೈಯುಕ್ತಿಕ ಮತ್ತು ವೃತ್ತಿ ಬದುಕನ್ನು ಪ್ರತ್ಯೇಕವಾಗಿ ಇಟ್ಟುಕೊಳ್ಳಬೇಕು ಎನ್ನುತ್ತಾರೆ. ಇದು ಬಾಲಿವುಡ್ ತಾರೆಯರಿಗೂ ಅನ್ವಯಿಸುತ್ತದೆ ಮತ್ತು ಅವರು ಅದನ್ನು ಚೆನ್ನಾಗಿ ಅನುಸರಿಸುತ್ತಾರೆ. ಮಾಹಿತಿಯ ಪ್ರಕಾರ, ನಟ ರಣಬೀರ್ ಕಪೂರ್ ಮತ್ತು ನಟಿ ದೀಪಿಕಾ ಪಡುಕೋಣೆ ಮತ್ತೊಮ್ಮೆ ತೆರೆ ಹಂಚಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ.
ಮತ್ತೆ ತೆರೆ ಹಂಚಿಕೊಳ್ಳಲಿರುವ ದೀಪಿಕಾ - ರಣಬೀರ್ ಕಪೂರ್ - ದೀಪಿಕಾ ಪಡುಕೋಣೆ ಲೇಟೆಸ್ಟ್ ನ್ಯೂಸ್
ನಟ ರಣಬೀರ್ ಕಪೂರ್ ಮತ್ತು ನಟಿ ದೀಪಿಕಾ ಪಡುಕೋಣೆ ಮತ್ತೊಮ್ಮೆ ತೆರೆಯನ್ನು ಹಂಚಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ.
ಇಬ್ಬರ ಜೋಡಿ ತೆರೆಗೆ ಬಂದಾಗಲೆಲ್ಲಾ ಅಭಿಮಾನಿಗಳು ಅವರನ್ನು ತುಂಬಾ ಇಷ್ಟಪಟ್ಟಿದ್ದಾರೆ ಮತ್ತು ಈ ಜೋಡಿ ಮತ್ತೊಮ್ಮೆ ಒಟ್ಟಿಗೆ ತೆರೆ ಹಂಚಿಕೊಳ್ಳಲು ಸಿದ್ಧರಾಗಿದ್ದಾರೆ. 'ತಮಾಶಾ' ಸಿನಿಮಾ ನಂತರ ದೀಪಿಕಾ ಮತ್ತು ರಣಬೀರ್ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಮಾಹಿತಿಯ ಪ್ರಕಾರ, ಇಬ್ಬರೂ ಬ್ರ್ಯಾಂಡ್ ಎಂಡಾರ್ಸ್‌ಮೆಂಟ್ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಅಂದರೆ ಜಾಹೀರಾತಿನಲ್ಲಿ ಅವರನ್ನು ಒಟ್ಟಿಗೆ ಕಾಣಬಹುದು. ಇದನ್ನು ಪುನಿತ್ ಮಲ್ಹೋತ್ರಾ ನಿರ್ದೇಶಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಆಲಿಯಾಗಿಂತ ಉತ್ತಮ ಸಂಗಾತಿ ಪಡೆಯಲು ಸಾಧ್ಯವಿಲ್ಲ: ರಣಬೀರ್ ಕಪೂರ್