ಕನ್ನಡ ಚಿತ್ರರಂಗದಲ್ಲಿ ಹಾಸ್ಯ ನಟರು ಹೀರೋ ಆಗೋದು ಬ್ಲಾಕ್ ಅಂಡ್ ವೈಟ್ ಕಾಲದಿಂದಲೂ ಇದ್ದೇ ಇದೆ. ದ್ವಾರಕೀಶ್, ನರಸಿಂಹರಾಜ್, ಸಾಧು ಕೋಕಿಲ, ಟೆನ್ನಿಸ್ ಕೃಷ್ಣ ಹಾಗು ಇತ್ತೀಚೆಗೆ ಚಿಕ್ಕಣ್ಣ, ಶಿವರಾಜ್ ಕೆ.ಆರ್.ಪೇಟೆ ಸೇರಿದಂತೆ ಅನೇಕ ಹಾಸ್ಯ ನಟರು ನಾಯಕ ನಟರಾಗಿದ್ದಾರೆ. ಆದರೆ, ಕೆಲ ಹಾಸ್ಯ ನಟರು ಮಾತ್ರವೇ ಸಕ್ಸಸ್ ಕಂಡಿದ್ದಾರೆ. ಇದೀಗ ಕಾಮಿಡಿ ಕಿಲಾಡಿ ರಿಯಾಲಿಟಿ ಶೋ ಖ್ಯಾತಿಯ ಅಪ್ಪಣ್ಣ ರಾಮದುರ್ಗ ಹೀರೋ ಆಗಿ ಮಿಂಚಲು ಸಿದ್ಧರಾಗಿದ್ದಾರೆ.
ತಮ್ಮ ಪಂಚಿಂಗ್ ಡೈಲಾಗ್ನಿಂದಲೇ ಕನ್ನಡ ಸಿನಿಮಾ ಪ್ರೇಕ್ಷಕರ ಮನಸು ಕದ್ದಿರುವ ಅಪ್ಪಣ್ಣ, ಈಗಾಗಲೇ 18 ಸಿನಿಮಾಗಳಲ್ಲಿ ಹಾಸ್ಯ ನಟನಾಗಿ ಬಣ್ಣ ಹಚ್ಚಿದ್ದಾರೆ. ಇದೀಗ ಇವರು ಆ್ಯಪಲ್ ಕಟ್ ಸಿನಿಮಾದಲ್ಲಿ ಎರಡನೇ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ:ನಟಿ ಸುಹಾಸಿನಿ ನೋಡಿ ನಾನು ವಿಷ್ಣುವರ್ಧನ್ ಆಗ್ತೀನಿ ಎಂದ ಡಾಲಿ ಧನಂಜಯ್
ಅಪ್ಪಣ್ಣ ನೋಡುವುದಕ್ಕೆ ಸ್ವಲ್ಪ ದಪ್ಪ ಇದ್ರು. ಆದ್ರೆ ಹೊಸ ಸಿನಿಮಾಕ್ಕಾಗಿ ಕಂಪ್ಲೀಟ್ ಬದಲಾಗಿದ್ದಾರೆ. ಡಯಟ್ ಜೊತೆಗೆ ವರ್ಕ್ಔಟ್ ಮಾಡುತ್ತಾ 20 ಕೆಜಿ ತೂಕ ಇಳಿಸಿಕೊಂಡು ಸ್ಲಿಮ್ ಆಗಿದ್ದಾರೆ. ತೂಕ ಇಳಿಸಿಕೊಳ್ಳುತ್ತಿದ್ದಂತೆ ಅಪ್ಪಣ್ಣ ಅವ್ರ ಸ್ಟೈಲ್ ಕೂಡ ಬದಲಾಗಿದೆ.
ಅಪ್ಪಣ್ಣ ತೂಕ ಇಳಿಸಿದ್ದೇಗೆ?: ಅಪ್ಪಣ್ಣ ಹೇಳುವ ಹಾಗೆ, 20 ಕೆಜಿ ತೂಕ ಇಳಿಸಿಕೊಳ್ಳುವುದು ಸುಲಭದ ಮಾತಲ್ಲ. ಅದಕ್ಕೆ ಸಾಕಷ್ಟು ಶ್ರದ್ಧೆ ಬೇಕು. ಪ್ರತಿ ದಿನ 4 ಗಂಟೆಗೆ ಎದ್ದು 10 ಕಿಲೋ ಮೀಟರ್ ಓಡ್ತಾ ಇದ್ರಂತೆ. ವಾರದಲ್ಲಿ ಮೂರು ದಿನ ಸ್ವಿಮಿಂಗ್ ಮಾಡುವುದು, ಜಿಮ್ನಲ್ಲಿ ಎರಡು ತಾಸು ವರ್ಕ್ ಔಟ್ ಮಾಡ್ತಾ ನಾಲ್ಕು ತಿಂಗಳಲ್ಲಿ 20 ಕೆಜಿ ತೂಕ ಇಳಿಸಿದ್ದಾರೆ.
ಇದನ್ನೂ ಓದಿ:ಸೆ.17ರ ಸಂಜೆ 5 ಗಂಟೆಗೆ ಕಬ್ಜ ಟೀಸರ್ ರಿಲೀಸ್.. ಚಿತ್ರಕ್ಕೆ ಬೆಂಬಲ ಕೊಡಿ ಎಂದ ಕಿಚ್ಚ ಸುದೀಪ್
ಸುದೀಪ್ ನಟನೆಯ ಪೈಲ್ವಾನ್ ಸಿನಿಮಾದಲ್ಲಿ ಮಸ್ತ್ ಕಾಮಿಡಿ ಮಾಡಿದ್ದ ಅಪ್ಪಣ್ಣ, ತ್ರಿವಿಕ್ರಮ, ಮುಗಿಲ್ ಪೇಟೆ, ಡಿಯರ್ ಸತ್ಯ ಸೇರಿದಂತೆ 18ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಹಾಸ್ಯದ ಹೊನಲು ಹರಿಸಿದ್ದಾರೆ. ಆ್ಯಪಲ್ ಕಟ್ ಸಿನಿಮಾದಲ್ಲಿ ಇಬ್ಬರು ಹೀರೋಗಳಿದ್ದಾರೆ. ಅದರಲ್ಲಿ ಹಾಸ್ಯ ನಟ ಅಪ್ಪಣ್ಣ ಕೂಡಾ ಒಬ್ಬರು.
ಕನ್ನಡದ ಹೆಸರಾಂತ ಖ್ಯಾತ ನಿರ್ದೇಶಕ ರಾಜ್ ಕಿಶೋರ್ ಅವರ ಮಗಳು ಸಿಂಧು ಗೌಡ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಇದು ಮರ್ಡರ್ ಮಿಸ್ಟರಿ ಕಥೆ ಆಧಾರಿತ ಸಿನಿಮಾ ಆಗಿದೆ. ಜೋಗಿ ಪ್ರೇಮ್ ಸಿನಿಮಾದ ಫಸ್ಟ್ ಲುಕ್ ಅನಾವರಣ ಮಾಡಿದ್ದಾರೆ.
ಇದನ್ನೂ ಓದಿ:ಪತ್ರಕರ್ತರೊಂದಿಗೆ ತಾಪ್ಸಿ ಪನ್ನು ವಾಗ್ವಾದ: ಯಾಕೆ ಯಾವಾಗಲೂ ಕೋಪದಿಂದ ಕೂಗಾಡ್ತಾರೆ ಎಂದ ಕಾಮನ್ ಮ್ಯಾನ್