ಕರ್ನಾಟಕ

karnataka

ETV Bharat / entertainment

ಸ್ಕೂಟರ್‌ನಲ್ಲಿ ಮುಂಬೈ ಸಿಟಿ ಸುತ್ತಿದ ವಿರುಷ್ಕಾ, ವಿಡಿಯೋ ನೋಡಿ - Virat Kohli scooter ride

ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮುಂಬೈ ನಗರದಲ್ಲಿ ಸ್ಕೂಟರ್‌ನಲ್ಲಿ ಸುತ್ತಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Anushka Sharma  Virat Kohli
ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾ

By

Published : Aug 21, 2022, 8:16 AM IST

ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅತ್ಯಂತ ಪ್ರೀತಿಯ ಸೆಲೆಬ್ರಿಟಿ ಜೋಡಿಗಳಲ್ಲೊಂದು. ಎಲ್ಲೇ ಹೋದರೂ ಈ ದಂಪತಿ ಕೈಕೈ ಹಿಡಿದು ಓಡಾಡುವುದು ಸಾಮಾನ್ಯ. ವಿರುಷ್ಕಾ ಜೋಡಿಯ ಪ್ರತಿಯೊಂದು ಸಣ್ಣ ವಿಷಯವೂ ಆಗಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ. ಅವರ ಫೋಟೋ, ವಿಡಿಯೋಗಳನ್ನು ನೋಡಲು ಅಭಿಮಾನಿಗಳು ಸಹ ತುಂಬಾ ಉತ್ಸುಕರಾಗಿರುತ್ತಾರೆ. ಇದೀಗ ಅಂತಹದೇ ವಿಡಿಯೋವೊಂದು ವೈರಲ್​ ಆಗಿದ್ದು, ಸ್ಕೂಟರ್‌ ಮೇಲೆ ಮುಂಬೈ ನಗರವನ್ನು ಬಿಂದಾಸ್​ ಆಗಿ ರೌಂಡ್​ ಹಾಕಿದ್ದಾರೆ.

ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ಜೊತೆಗೆ ಶನಿವಾರ ಜಾಹೀರಾತುವೊಂದರ ಶೂಟಿಂಗ್‌ಗೆ ಸ್ಕೂಟರ್‌ನಲ್ಲಿ ತೆರಳಿರುವುದು ಅವರ ಅಭಿಮಾನಿಗಳಿಗೆ ಸಾಕಷ್ಟು ಖುಷಿ ತಂದಿದೆ. ಕೋಟಿಗಟ್ಟಲೆ ಬೆಲೆ ಬಾಳುವ ಕಾರುಗಳಿದ್ದರೂ ಸಹ ಈ ಸ್ಟಾರ್ ದಂಪತಿ ಸ್ಕೂಟರ್‌ನಲ್ಲಿ ನಗರ ಸುತ್ತಿರೋದು ನಿಜಕ್ಕೂ ಆಶ್ಚರ್ಯ ಮೂಡಿಸಿದೆ. ಜೊತೆಗೆ ಈ ಜೋಡಿಯ ಸರಳತೆಗೆ ಫ್ಯಾನ್ಸ್​ ಫಿದಾ ಆಗಿದ್ದು, 'ಮುದ್ದಾದ ಜೋಡಿ','ಅತ್ಯುತ್ತಮ ದಂಪತಿ', 'ನೆಚ್ಚಿನ ಜೋಡಿ', 'ಪವರ್ ಜೋಡಿ' ಎಂದೆಲ್ಲಾ ಕಾಮೆಂಟ್ಸ್ ಮಾಡಿದ್ದಾರೆ.

ಇದನ್ನೂ ಓದಿ:ಮುಂಬೈ ಏರ್​ಪೋರ್ಟ್​​ನಲ್ಲಿ ಸಿಂಪಲ್​​ ಆಗಿ ಕಾಣಿಸಿಕೊಂಡ ವಿರುಷ್ಕಾ..

ಈ ವೇಳೆ ಅನುಷ್ಕಾ ಕಪ್ಪು ಬಣ್ಣದ ಬಟ್ಟೆಯನ್ನು ಧರಿಸಿದ್ದರೆ, ವಿರಾಟ್ ಕಪ್ಪು ಬಣ್ಣದ ಪ್ಯಾಂಟ್‌ನೊಂದಿಗೆ ಕಡು ಹಸಿರು ಶರ್ಟ್ ಧರಿಸಿದ್ದರು. ಅಷ್ಟೇ ಅಲ್ಲದೇ, ತಮ್ಮ ಸವಾರಿಯ ಸಮಯದಲ್ಲಿ ಇಬ್ಬರೂ ಸಹ ರಸ್ತೆ ಸುರಕ್ಷತಾ ನಿಯಮಗಳನ್ನು ಅನುಸರಿಸಿ, ಹೆಲ್ಮೆಟ್ ಹಾಕಿದ್ದರು. ವಿರಾಟ್ ಸ್ಕೂಟರ್ ಓಡಿಸಿದರೆ, ಅನುಷ್ಕಾ ಹಿಂಭಾಗದಲ್ಲಿ ಕುಳಿತಿದ್ದರು.

ಇದನ್ನೂ ಓದಿ:ವಿಮಾನ ನಿಲ್ದಾಣದಲ್ಲಿ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ; ಸರಳತೆಗೆ ಸಾಕ್ಷಿಯಾದ ಸೆಲೆಬ್ರಿಟಿ ಜೋಡಿ

ABOUT THE AUTHOR

...view details