ಕರ್ನಾಟಕ

karnataka

ETV Bharat / entertainment

ಸುಶಾಂತ್ ಜತೆ ಮಾತನಾಡಲು ನಾನು ನಿರಾಕರಿಸಿದ್ದೆ.. ಆ ಬಗ್ಗೆ ಯೋಚಿಸಿದ್ರೆ ನೋವಾಗುತ್ತೆ: ಅನುರಾಗ್ ಕಶ್ಯಪ್ - ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್

ಸುಶಾಂತ್ ಸಿಂಗ್ ರಜಪೂತ್ ಸಾಯುವ ಮೂರು ವಾರಗಳ ಮೊದಲು ಅವರ ಜೊತೆ ಮಾತನಾಡಲು ನಾನು ನಿರಾಕರಿಸಿದ್ದೆ. ಆ ಬಗ್ಗೆ ಯೋಚಿಸಿದ್ರೆ ತುಂಬಾ ನೋವಾಗುತ್ತದೆ ಎಂದು ನಿರ್ದೇಶಕ ಅನುರಾಗ್ ಕಶ್ಯಪ್ ಹೇಳಿದ್ದಾರೆ.

Anurag Kashyap
ಅನುರಾಗ್ ಕಶ್ಯಪ್

By

Published : Jan 30, 2023, 3:57 PM IST

Updated : Jan 30, 2023, 4:07 PM IST

ಹೈದರಾಬಾದ್: ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಸದ್ಯ ಅನೇಕ ವಾಹಿನಿಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ನೇರ ನುಡಿ ಹೆಸರುವಾಸಿಯಾಗಿರುವ ಅನುರಾಗ್ ಕಶ್ಯಪ್ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಬಗ್ಗೆ ಮಾತನಾಡಿದ್ದಾರೆ.

ಸುಶಾಂತ್ ಜತೆ ಮಾತನಾಡಲು ನಿರಾಕರಿಸಿದ್ದೆ: 2020ರಲ್ಲಿ ಜೂನ್ 14ರಂದು ಸುಶಾಂತ್ ಸಿಂಗ್ ರಜಪೂತ್ ಶವವಾಗಿ ಪತ್ತೆಯಾಗಿದ್ದರು. ಸುಶಾಂತ್ ಸಿಂಗ್ ಪ್ರಕರಣ ಇನ್ನೂ ತನಿಖೆ ಹಂತದಲ್ಲಿದೆ. ಈ ನಡುವೆ ಅನುರಾಗ್ ಕಶ್ಯಪ್, ಸುಶಾಂತ್ ನಿಧನಕ್ಕೂ ಸ್ಲಲ್ಪ ದಿನಗಳ ಮುಂಚೆ ಅವರ ಜೊತೆ ಮಾತನಾಡಲು ನಿರಾಕರಿಸಿದ್ದ ಸತ್ಯವನ್ನು ಬಹಿರಂಗಪಡಿಸಿದರು.

ಸುಶಾಂತ್ ಬಗ್ಗೆ ಅಸಮಾಧಾನ: ಸುಶಾಂತ್ ಸಿಂಗ್ ರಜಪೂತ್ ಅವರನ್ನು ಸಿನಿಮಾಗೆ ಕಾಸ್ಟ್ ಮಾಡುವ ವಿಚಾರವಾಗಿ 2020ರಲ್ಲಿ ವ್ಯಕ್ತಿಯೊಬ್ಬರ ಜೊತೆ ನಿರ್ದೇಶಕ ಅನುರಾಗ್ ಕಶ್ಯಪ್ ಮಾತುಕತೆ ನಡೆಸಿದ್ದರು. ಆದರೆ, ಅದೇ ವರ್ಷ ದೊಡ್ಡ ಸಿನಿಮಾಗಳಿಗೆ ಸುಶಾಂತ್ ಸಿಂಗ್, ನಿರ್ದೇಶಕ ಅನುರಾಗ್ ಕಶ್ಯಪ್ ಅವರ ಸಿನಿಮಾದಿಂದ ಹಿಂದೆ ಸರಿದಿದ್ದರು. ಹಾಗಾಗಿ ಸುಶಾಂತ್ ಬಗ್ಗೆ ಅಸಮಾಧಾನಗೊಂಡಿದ್ದೆ ಎಂದು ಅನುರಾಗ್ ಕಶ್ಯಪ್ ಹೇಳಿದ್ದಾರೆ.

ಈ ಬಗ್ಗೆ ನಿರ್ದೇಶಕ ಅನುರಾಗ್ ಕಶ್ಯಪ್ ಇತ್ತೀಚಿನ ಸಂದರ್ಶನದಲ್ಲಿ ಬಹಿರಂಗ ಪಡಿಸಿದ್ದಾರೆ. ಸುಶಾಂತ್ ಸಿಂಗ್ ಪರವಾಗಿ ವ್ಯಕ್ತಿಯೊಬ್ಬರು ತನ್ನನ್ನು ಸಂಪರ್ಕಿಸಿದ್ದರು. ಆದರೆ, ತಾನು ನಿರಾಕರಿಸಿದ್ದೆ ಎಂದು ಅನುರಾಗ್ ಹೇಳಿದರು. ಆ ಬಗ್ಗೆ ಯೋಚಿಸಿದ್ರೆ ತುಂಬಾ ನೋವಾಗುತ್ತದೆ ಎಂದು ಅನುರಾಗ್ ಕಶ್ಯಪ್ ಹೇಳಿದರು.

'ಈಗ ಬಹಳಷ್ಟು ಬದಲಾಗಿದೆ. ಆದರೆ ನಾನು ಎಲ್ಲವನ್ನೂ ಹೇಳುವ ಅಗತ್ಯವಿಲ್ಲ ಎಂದು ನನಗೆ ಅರ್ಥವಾಯಿತು. ಉದಾಹರಣೆಗೆ, ನನ್ನ ಮತ್ತು ಅಭಯ್ ನಡುವಿನ ಜಗಳ. ಅಭಯ್ ಅವರಂತಹ ಉತ್ತಮ ನಟ ಈಗ ಏಕೆ ಸಿನಿಮಾದಲ್ಲಿ ಇಲ್ಲ ಎಂದು ಯಾರೋ ಒಬ್ಬರು ಲೇಖನವನ್ನು ಬರೆಯುತ್ತಿದ್ದರು ಮತ್ತು ನಾನು 13 ವರ್ಷಗಳ ಹಿಂದೆ ನಡೆದ ನನ್ನ ಅನುಭವಗಳ ಬಗ್ಗೆ ಮಾತನಾಡಿದೆ. ನಾನು ಅದನ್ನು ಸಾರ್ವಜನಿಕವಾಗಿ ಹೇಳುವ ಅಗತ್ಯವಿರಲಿಲ್ಲ' ಎಂದರು.

ಸುಶಾಂತ್ ನಿಧನ ನಿಜಕ್ಕೂ ಬೇಸರ: ಸುಶಾಂತ್ ಸಿಂಗ್ ರಜಪೂತ್ ನಿಧನ ಹೊಂದಿದ ಆ ದಿನ ನಿಜಕ್ಕೂ ಬೇಸರದ ದಿನವಾಗಿದೆ. ಅದಕ್ಕೂ ಮೂರು ವಾರಗಳ ಮೊದಲು ಯಾರೋ ಮಾತನಾಡಲು ನನನ್ನು ಸಂಪರ್ಕಿಸಲು ಬಯಸಿದ್ದರು. ಆದರೆ ನಾನು ಮಾತನಾಡಲ್ಲ ಎಂದಿದ್ದೆ. ನಿಜಕ್ಕೂ ಅದು ತುಂಬಾ ಸಂಕಟ ಪಡುವಂತೆ ಮಾಡಿತ್ತು. ಆದ್ದರಿಂದ ನಾನು ಅಭಯ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದೆ ಮತ್ತು ನಾನು ಅವನಲ್ಲಿ ಕ್ಷಮೆಯಾಚಿಸಿದೆ. ಅವರ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿದ್ದರಿಂದ ನನ್ನ ಬಗ್ಗೆ ಅಸಮಾಧಾನಗೊಂಡಿದ್ದರು ಎಂದು ಯಾರೋ ಹೇಳಿದ್ದರು ಎಂದು ಅನುರಾಗ್ ಹೇಳಿದರು.

ಅನುರಾಗ್ ಅವರು ಸುಶಾಂತ್ ಅವರ ಮ್ಯಾನೇಜರ್ ಜೊತೆಗಿನ ವಾಟ್ಸ್​ಆ್ಯಪ್​ ಸಂಭಾಷಣೆಯ ಸ್ಕ್ರೀನ್‌ಶಾಟ್‌ಗಳನ್ನು ಸಹ ಹಂಚಿಕೊಂಡಿದ್ದಾರೆ. "ಈ ಚಾಟ್ ಸುಶಾಂತ್​ ಅವರು ನಿಧನರಾಗುವ ಮೂರು ವಾರಗಳ ಹಿಂದಿನದ್ದು. ನನ್ನ ಸ್ವಂತ ಕಾರಣಗಳಿಗಾಗಿ ಸುಶಾಂತ್ ಅವರೊಂದಿಗೆ ಕೆಲಸ ಮಾಡಲು ನಾನು ಬಯಸಲಿಲ್ಲ" ಎಂದು ಅವರು ಟ್ವೀಟ್ ಮಾಡಿದ್ದರು.

ಸುಶಾಂತ್ ಸಿಂಗ್ ಸಾವು ಪ್ರಕರಣ: ಸುಶಾಂತ್ ಸಿಂಗ್ ರಜಪೂತ್ ಜೂನ್ 14, 2020 ರಂದು ಅವರ ಬಾಂದ್ರಾ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಆಗ ಅವರು ರಿಯಾ ಚಕ್ರವರ್ತಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದರು. ಅಂಕಿತಾ ಲೋಖಂಡೆ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಗೆಳತಿ. ಸುಶಾಂತ್ ಸಿಂಗ್ ರಜಪೂತ್ ಅವರ ಸಾವನ್ನು ಮುಂಬೈ ಪೊಲೀಸರು ಆರಂಭದಲ್ಲಿ ಆತ್ಮಹತ್ಯೆ ಎಂದು ತೀರ್ಮಾನಿಸಿದ್ದರು. ಆದರೆ, ಎಫ್ಐಆರ್ ನಂತರ ಪ್ರಕರಣವನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆ ನಡೆಸಿತು. ಸದ್ಯ ಹೆಚ್ಚುವರಿಯಾಗಿ, ಜಾರಿ ನಿರ್ದೇಶನಾಲಯ (ಇಡಿ) ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದೆ.

ಇದನ್ನೂ ಓದಿ:'ಕಾಂತಾರ' ಚಿತ್ರ ಕುರಿತು ಹೇಳಿಕೆ; ಬಾಲಿವುಡ್​ ನಿರ್ದೇಶಕರ ನಡುವೆ ಟ್ವೀಟ್​ ವಾರ್​​

Last Updated : Jan 30, 2023, 4:07 PM IST

ABOUT THE AUTHOR

...view details