ಕರ್ನಾಟಕ

karnataka

ETV Bharat / entertainment

ನನಗೆ ಇಬ್ಬರು ಗಂಡು ಮಕ್ಕಳೇ ಬೇಕು ಎಂದಿದ್ದ ಆಲಿಯಾ ಭಟ್​​! - ಆಲಿಯಾ ಭಟ್ ಲೇಟೆಸ್ಟ್​​ ನ್ಯೂಸ್​​

ಮೊನ್ನೆಯಷ್ಟೇ ತಾನು ಮಗುವಿನ ನಿರೀಕ್ಷೆಯಲ್ಲಿದ್ದೇನೆ ಎಂದು ಬಹಿರಂಗಪಡಿಸುವ ಮೂಲಕ ಅಚ್ಚರಿ ಮೂಡಿಸಿದ್ದ ಆಲಿಯಾ ಭಟ್, ಇದೀಗ ಮತ್ತೊಂದು ಬೇಡಿಕೆಯನ್ನು ಪತಿ ರಣಬೀರ್ ಕಪೂರ್ ಮುಂದೆ ಇಟ್ಟಿದ್ದಾರೆ. ತಮಗೆ ಎರಡು ಗಂಡು ಮಕ್ಕಳು ಬೇಕು ಎನ್ನುವ ಆಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ.

Alia Bhatt wants two boys
ನನಗೆ ಇಬ್ಬರು ಗಂಡು ಮಕ್ಕಳೇ ಬೇಕು ಎಂದಿದ್ದ ಆಲಿಯಾ ಭಟ್​​

By

Published : Jun 29, 2022, 9:47 AM IST

2019ರಲ್ಲಿ ಆಲಿಯಾ ತಮ್ಮ ಸ್ನೇಹಿತೆ, ನಟಿ ಆಕಾಂಶಾ ರಂಜನ್ ಅವರೊಂದಿಗೆ ತನ್ನ ಯೂಟ್ಯೂಬ್ ಚಾನೆಲ್​ನಲ್ಲಿ ವಿಡಿಯೋದಲ್ಲಿ ಹೇಳಿದ್ದ ಸಂಗತಿಯೊಂದು ವೈರಲ್ ಆಗುತ್ತಿದೆ. ಸ್ಟೂಡೆಂಟ್ ಆಫ್ ದಿ ಇಯರ್ ವಿಡಿಯೋದಲ್ಲಿ ಆಲಿಯಾ ಭಟ್ ನನಗೆ ಎರಡು ಮಕ್ಕಳು ಬೇಕು ಎಂದು ಹೇಳಿದ್ದರು. ಅಲ್ಲದೇ, ಮಕ್ಕಳ ಬಗ್ಗೆ ಹಲವು ಯೋಜನೆಗಳನ್ನೂ ಅವರು ಹಾಕಿಕೊಂಡಿದ್ದಾರೆ.

ನನಗೆ ಇಬ್ಬರು ಗಂಡು ಮಕ್ಕಳೇ ಬೇಕು ಎಂದಿದ್ದ ಆಲಿಯಾ ಭಟ್​​..

ಮದುವೆಯಾಗಿ 57ನೇ ದಿನಕ್ಕೆ ತಾವು ತಾಯಿ ಆಗುತ್ತಿರುವುದಾಗಿ ಆಲಿಯಾ ಭಟ್ ತಿಳಿಸುತ್ತಿದ್ದಂತೆಯೇ ಇಡೀ ಬಾಲಿವುಡ್ ಸಂಭ್ರಮಿಸಿತು. ಕರಣ್ ಜೋಹಾರ್ ಸೇರಿದಂತೆ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಜೋಡಿಯನ್ನು ಇಷ್ಟ ಪಡುವ ಪ್ರತಿಯೊಬ್ಬರೂ ಹಾರೈಸಿದರು. ಈ ನಡುವೆ ಆಲಿಯಾ ಮತ್ತು ರಣಬೀರ್ ದಂಪತಿ ಮಗುವಿನ ಬಗ್ಗೆ ಪಕ್ಕಾ ಪ್ಲ್ಯಾನ್ ಕೂಡ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಈಗಾಗಲೇ ವಿದೇಶದಲ್ಲಿ ಮಗುವಿಗಾಗಿ ಶಾಪಿಂಗ್ ಕೂಡ ಮಾಡಿದ್ದಾರಂತೆ. ಹುಟ್ಟುವ ಮಗು ಗಂಡಾದರೆ ಏನು ಹೆಸರು ಇಡಬೇಕು? ಹೆಣ್ಣಾದರೆ ಯಾವ ಹೆಸರಿನಿಂದ ಕರೆಯಬೇಕು ಎನ್ನುವುದನ್ನೂ ಈಗಲೇ ನಿರ್ಧಾರ ಮಾಡಿದ್ದಾರಂತೆ. ಅಲ್ಲದೇ, ಆ ಮಗುವನ್ನು ಯಾವ ರೀತಿಯಲ್ಲಿ ಬೆಳೆಸಬೇಕು ಎನ್ನುವ ಕುರಿತೂ ಚರ್ಚೆ ಮಾಡಿದ್ದಾರೆ ಎನ್ನುವ ಸುದ್ದಿ ಅವರ ಆಪ್ತರಿಂದ ಬಹಿರಂಗವಾಗಿದೆ. ಇನ್ನು ಇಬ್ಬರು ಹಲವು ಚಿತ್ರಗಳಲ್ಲಿ ಬ್ಯುಸಿ ಇದ್ದು, ಅಯಾನ್ ಮುಖರ್ಜಿ ಅವರ ನಿರ್ದೇಶನದ ಬ್ರಹ್ಮಾಸ್ತ್ರದಲ್ಲಿ ರಣಬೀರ್ ಮತ್ತು ಆಲಿಯಾ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ:ಆಲಿಯಾ ಭಟ್​ ಪ್ರಗ್ನೆಂಟ್​.. ಮದುವೆಯಾದ ಎರಡೇ ತಿಂಗಳಲ್ಲಿ ಖುಷಿ ವಿಚಾರ ಹಂಚಿಕೊಂಡ ತಾರೆ

ABOUT THE AUTHOR

...view details