ಹೈದರಾಬಾದ್ (ತೆಲಂಗಾಣ): ಉತ್ತರ ಪ್ರದೇಶದ ಅಯೋಧ್ಯೆಯ ಪುಣ್ಯಭೂಮಿಯ ಸರಯೂ ನದಿಯ ದಂಡೆಯಲ್ಲಿ ಭಾನುವಾರ ಬಹು ನಿರೀಕ್ಷಿತ 'ಆದಿಪುರುಷ' ಚಿತ್ರದ ಟೀಸರ್ ಭಾನುವಾರ ಅನಾವರಣಗೊಂಡಿದೆ. ಡಾರ್ಲಿಂಗ್ ಪ್ರಭಾಸ್, ಕೃತಿ ಸನೋನ್, ಸೈಫ್ ಅಲಿ ಖಾನ್ ಮತ್ತು ಸನ್ನಿ ಸಿಂಗ್ ತಾರಾಗಣ ಇರುವ, ಓಂ ರಾವುತ್ ನಿರ್ದೇಶನದ ಆದಿಪುರುಷ ಆರಂಭದಿಂದಲೂ ಸಿನಿ ಪ್ರಿಯರ ಗಮನ ಸೆಳೆದಿದೆ.
ಈ ಮೆಗಾ-ಬಜೆಟ್ ಚಿತ್ರದ ಪ್ರಮುಖ ಜೋಡಿ ಪ್ರಭಾಸ್ ಮತ್ತು ಕೃತಿ ನಡುವಿನ ಕೆಮಿಸ್ಟ್ರಿ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಆದಿಪುರುಷ ಟೀಸರ್ ಬಿಡುಗಡೆ ವೇಳೆ ಪ್ರಭಾಸ್ ಮತ್ತು ಕೃತಿ ಪರಸ್ಪರ ಅಪ್ಪಿಕೊಂಡರು. ಈವೆಂಟ್‌ನ ವಿಡಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ವಿಡಿಯೋ ಕ್ಲಿಪ್ನಲ್ಲಿ ಪ್ರಭಾಸ್ ಅವರು ಮೆಟ್ಟಿಲುಗಳ ಕೆಳಗೆ ನಡೆಯುತ್ತಿದ್ದಾಗ ಕೃತಿಗೆ ಬೆಂಬಲಕ್ಕಾಗಿ ಕೈ ಚಾಚುತ್ತಿರುವುದನ್ನು ಕಾಣಬಹುದು. ಬಾಹುಬಲಿಗೆ ಧನ್ಯವಾದ ಹೇಳುತ್ತಿರುವ ಕೃತಿಯ ಮುಖದಲ್ಲಿ ಮಂದಹಾಸವಿದೆ. ವಿಡಿಯೋ ವೈರಲ್ ಆದ ನಂತರ ಅಭಿಮಾನಿಗಳು ಅವರ ಹೆಸರಿನ ಆರಂಭಿಕ ಅಕ್ಷರಗಳೊಂದಿಗೆ "ಪ್ರಕ್ರಿ" ಎಂಬ ಅಡ್ಡಹೆಸರಿನಿಂದ ಕರೆಯಲು ಆರಂಭಿಸಿದ್ದಾರೆ.
ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಪ್ರಭಾಸ್ ಅವರನ್ನು ಶ್ರೀರಾಮನ ಪಾತ್ರದಲ್ಲಿ ಬಹಿರಂಗಪಡಿಸಿ ಡಿಸೈನ್ ಮಾಡಿರುವ ಈ ಫಸ್ಟ್ ಲುಕ್ ಪೋಸ್ಟರ್ ಪವರ್ ಫುಲ್ ಆಗಿದೆ ಎನ್ನುತ್ತಾರೆ ಅಭಿಮಾನಿಗಳು. ರಾಮಾಯಣ ಆಧಾರಿತ ಈ ಸಿನಿಮಾದಲ್ಲಿ ಪ್ರಭಾಸ್ ರಾಮನ ಪಾತ್ರದಲ್ಲಿ ನಟಿಸುತ್ತಿದ್ದಾರೆ.