ಕರ್ನಾಟಕ

karnataka

ETV Bharat / entertainment

ಹೆಣ್ಣು ಮಗುವಿಗೆ ಜನ್ಮ ನೀಡಿದ‌ ನಟಿ ಪ್ರಣಿತಾ ಸುಭಾಷ್.. ಸಂಭ್ರಮದ ಕ್ಷಣ ಹಂಚಿಕೊಂಡ ನಟಿ - ಪ್ರಣಿತಾ ಸುಭಾಷ್ ​ಫೋಟೋಗಳು

ಬಹುಭಾಷಾ ನಟಿ ಪ್ರಣಿತಾ ಸುಭಾಷ್ ​ಸಂತಸದ ವಿಷಯ ಹಂಚಿಕೊಂಡಿದ್ದಾರೆ. ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಅವರು ಇತ್ತೀಚೆಗೆ ಪ್ರೆಗ್ನೆಂಟ್ ಆಗಿರುವ ವಿಚಾರ ಹೇಳಿಕೊಂಡಿದ್ದರು. ಇದೀಗ ಅವರ ಮನೆಗೆ ಹೆಣ್ಣು ಮಗುವಿನ ಆಗಮನವಾಗಿದ್ದು, ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.

ನಟಿ ಪ್ರಣಿತಾ ಸುಭಾಷ್
ನಟಿ ಪ್ರಣಿತಾ ಸುಭಾಷ್

By

Published : Jun 11, 2022, 6:50 AM IST

ಕನ್ನಡ ಚಿತ್ರರಂಗ ಮಾತ್ರವಲ್ಲದೇ ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ಅಭಿನಯಿಸಿ ತಮ್ಮದೇ ಬೇಡಿಕೆ ಹೊಂದಿರುವ ನಟಿ ಪ್ರಣಿತಾ ಸುಭಾಷ್ ಮನೆಗೆ ಹೊಸ‌ ಅತಿಥಿಯ ಆಗಮನವಾಗಿದೆ. ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಪ್ರಣಿತಾ ಸುಭಾಷ್, ಹೆಣ್ಣು ಮಗವಿಗೆ ಜನ್ಮ ನೀಡಿದ್ದಾರೆ‌.

ಸಾಮಾಜಿಕ ಮಾಧ್ಯಮದಲ್ಲಿ ಈ ಸಂತಸದ ಸುದ್ದಿ ಹಂಚಿಕೊಂಡಿರುವ ಅವರು, ಮಗಳು ಬಂದಾಗಿನಿಂದ ನನ್ನ ಜೀವನ ಅವಾಸ್ತವಿಕವಾಗಿದೆ ಎಂದು ಬರೆದುಕೊಂಡಿದ್ದಾರೆ. ನಾನು ತುಂಬಾ ಲಕ್ಕಿ. ನನ್ನ ತಾಯಿ ಸ್ತ್ರೀರೋಗ ತಜ್ಞರಾಗಿರುವುದರಿಂದ ನಾನು ಅದೃಷ್ಟವಂತೆ. ಯಾವುದೇ ಒತ್ತಡವಿಲ್ಲದೇ, ಸರಾಗವಾಗಿ ಹೆರಿಗೆಯಾಯಿತು. ಇದು ನನ್ನ ತಾಯಿಗೆ ಚಾಲೆಂಜಿಂಗ್ ಜೊತೆಗೆ ಬಹಳ ಭಾವನಾತ್ಮಕ ಕ್ಷಣ ಎಂದು ಹೇಳಿದ್ದಾರೆ.

ಹೆಣ್ಣು ಮಗುವಿಗೆ ಜನ್ಮ ನೀಡಿದ‌ ಪ್ರಣಿತಾ ಸುಭಾಷ್

ಕಳೆದ ವರ್ಷ ಮೇ ತಿಂಗಳಲ್ಲಿ ಬೆಂಗಳೂರು ಮೂಲದ ಉದ್ಯಮಿ ನಿತಿನ್ ರಾಜು ಅವರನ್ನ ಮದುವೆಯಾಗಿದ್ದರು. ಈ ಹಿಂದೆ ಸೋಷಿಯಲ್​ ಮೀಡಿಯಾದಲ್ಲಿ ಪತಿ ಜೊತೆಗಿನ ಸ್ಪೆಷಲ್​ ಫೋಟೋವನ್ನು ಪೋಸ್ಟ್​ ಮಾಡುವ ಮೂಲಕ ತಾವು ಗರ್ಭಿಣಿಯಾಗಿರುವ ವಿಷಯ ಶೇರ್​ ಮಾಡಿದ್ದರು. ಇತ್ತೀಚೆಗಷ್ಟೇ ಬೇಬಿ ಬಂಪ್‌ ಹಾಗೂ ಸೀಮಂತ ಕಾರ್ಯಕ್ರಮದ ಫೋಟೋಗಳು ವೈರಲ್​ ಆಗಿದ್ದವು.

ಹೆಣ್ಣು ಮಗುವಿಗೆ ಜನ್ಮ ನೀಡಿದ‌ ಪ್ರಣಿತಾ ಸುಭಾಷ್

2010ರಲ್ಲಿ 'ಪೊರ್ಕಿ' ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಪ್ರಣಿತಾ, ಕಡಿಮೆ ಸಮಯದಲ್ಲಿ ಸ್ಟಾರ್ ನಟರಾದ ಶಿವರಾಜ್ ಕುಮಾರ್, ಗಣೇಶ್, ತೆಲುಗು ನಟ ಪವನ್ ಕಲ್ಯಾಣ್, ಸಿದ್ದಾರ್ಥ್ ಹಾಗೂ ತಮಿಳು ನಟ ಸೂರ್ಯ, ಬಾಲಿವುಡ್ ನಟ ಅಜಯ್ ದೇವಗನ್ ಜೊತೆ ನಟಿಸಿ ಅಭಿಮಾನಿಗಳ ಪ್ರೀತಿ ಗಳಿಸಿದ್ದಾರೆ. ಸದ್ಯಕ್ಕೆ ಪತಿ ನಿತಿನ್ ರಾಜ್ ಜೊತೆ ಸಂತೋಷದ ಜೀವನ ನಡೆಸುತ್ತಿದ್ದು, ಕುಟುಂಬಕ್ಕೆ ಹೊಸ ಅತಿಥಿ ಆಗಮನವಾಗಿರುವುದು ಮತ್ತಷ್ಟು ಸಂಭ್ರಮ ಹೆಚ್ಚಿಸಿದೆ.

ಪತಿಯೊಂದಿಗೆ ನಟಿ ಪ್ರಣಿತಾ ಸುಭಾಷ್
ಪ್ರಣಿತಾ ಸುಭಾಷ್

ಇದನ್ನೂ ಓದಿ:ಪತಿಯೊಂದಿಗೆ ಪ್ರಗ್ನೆನ್ಸಿ ಫೋಟೋ ಹಂಚಿಕೊಂಡ ಪ್ರಣಿತಾ ಸುಭಾಷ್; ನಟಿಗೆ ಸ್ಟಾರ್​ಗಿರಿ ತಂದುಕೊಟ್ಟ ಕನ್ನಡ ಸಿನಿಮಾ

ABOUT THE AUTHOR

...view details