ಕನ್ನಡದ ಜನಪ್ರಿಯ ನಟಿ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ದಂಪತಿ ವಿಶೇಷವಾದ ಫೋಟೋ ಹಂಚಿಕೊಂಡಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಈ ಜೋಡಿ ವಿದೇಶಿ ಪ್ರವಾಸದಲ್ಲಿ ಇದ್ದರು. ಮೊನಾಕೊ ಮತ್ತು ಪ್ಯಾರಿಸ್‌ನಲ್ಲಿ ತೆಗೆದ ಇತ್ತೀಚಿನ ಚಿತ್ರಗಳನ್ನು ಮಿಲನಾ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಅವರು ತಮ್ಮ ಸೂಪರ್ ಹಿಟ್ ಕನ್ನಡ ಚಲನಚಿತ್ರ "ಲವ್ ಮಾಕ್ಟೇಲ್ 2"ನ ಕಲಾವಿದರೊಂದಿಗೆ ಪ್ರವಾಸಕ್ಕೆ ಹೋಗಿದ್ದಾರೆ.
ವಿದೇಶಿ ಪ್ರವಾಸದಲ್ಲಿ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಚಿತ್ರದಲ್ಲಿ ಅವರ ಪ್ರಮುಖ ಪಾತ್ರ ಉತ್ತಮ ವಿಮರ್ಶೆ ಪಡೆದಿದೆ. ಚಿತ್ರತಂಡ ಇತ್ತೀಚೆಗೆ ಥಾಯ್ಲೆಂಡ್‌ಗೆ ಭೇಟಿ ನೀಡಿತ್ತು. ಇಲ್ಲಿ ಮಿಲನಾ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಈಗ ಯುರೋಪ್‌ಗೆ ಭೇಟಿ ನೀಡುತ್ತಿದೆ. ಮಿಲನಾ ನಾಗರಾಜ್ ಅವರು ಮೊನೊಕೊ ನಗರವನ್ನು, "ತಾನು ಇಲ್ಲಿಯವರೆಗೆ ನೋಡಿದ ಅತ್ಯಂತ ಸುಂದರವಾದ ನಗರ" ಎಂದು ಬಣ್ಣಿಸಿದ್ದಾರೆ. ಅಲ್ಲದೇ ಪ್ಯಾರಿಸ್‌ನ ಐಫೆಲ್ ಟವರ್‌ನ ಮುಂದೆ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದಾರೆ.
ಇದನ್ನೂ ಓದಿ:'ಹ್ಯಾಪಿ ಬರ್ತ್ಡೇ ನಿಧಿಮಾ': 34ನೇ ವಸಂತಕ್ಕೆ ಕಾಲಿಟ್ಟ ಮಿಲನಾ ನಾಗರಾಜ್
ಪ್ಯಾರಿಸ್ ಅನ್ನೋದು ಪ್ರೇಮಿಗಳ ಸ್ವರ್ಗ ಎಂದೇ ಕರೆಸಿಕೊಂಡಿದೆ. ಇಲ್ಲಿಯ ಐಫೆಲ್ ಟವರ್ ಕೂಡ ಅಷ್ಟೇ ವಿಶೇಷ. ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಐಫೆಲ್ ಟವರ್ ಮುಂದೆ ನಿಂತು ಹತ್ತು ಹಲವು ಫೋಟೋಗಳನ್ನು ತೆಗೆದುಕೊಂಡು ಖುಷಿಪಟ್ಟಿದ್ದಾರೆ. ಮಿಲನಾ ನಾಗರಾಜ್ ಅವರು ತಮ್ಮ ಈ ಪ್ರವಾಸದ ಒಂದಷ್ಟು ವಿಶೇಷ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಮಿಲನಾ ಹಾಗೂ ಡಾರ್ಲಿಂಗ್ ಕೃಷ್ಣ 2021ರಲ್ಲಿ ವಿವಾಹವಾದರು. ಇಬ್ಬರು ಒಟ್ಟಿಗೆ ಸಿನಿಮಾ ನಿರ್ಮಾಣ ಹಾಗೂ ನಿರ್ದೇಶನದಲ್ಲಿ ತೊಡಗಿದ್ದಾರೆ. ಅವರ ಲವ್ ಮಾಕ್ಟೆಲ್ ಚಿತ್ರಕ್ಕೆ ಪ್ರತ್ಯೇಕ ಅಭಿಮಾನಿ ವರ್ಗವಿದೆ. ಪ್ರೀತಿಸಿ ವಿವಾಹವಾದ ಈ ಕ್ಯೂಟ್ ಜೋಡಿ ಆಗಾಗ ಒಟ್ಟಿಗೆ ಪ್ರವಾಸ ಮಾಡುತ್ತಿರುತ್ತಾರೆ.
ಮೊನಾಕೊ, ಪ್ಯಾರಿಸ್ ಪ್ರವಾಸದಲ್ಲಿ ನಟಿ ಮಿಲನಾ ನಾಗರಾಜ್ ಇದನ್ನೂ ಓದಿ:ಕನ್ನಡಿಗರ ಮನಸ್ಸು ಕದ್ದ ನಿಧಿಮಾ... ನಟಿ ಮಿಲನಾ ನಾಗರಾಜ ಮುದ್ದಾದ ಫೋಟೋಗಳು ಇಲ್ಲಿವೆ
ಪ್ರೀತಿಸಿ, ದಾಂಪತ್ಯ ಜೀವನ ಆರಂಭಿಸಿ ಸುಖ ಸಂಸಾರ ನಡೆಸುತ್ತಿರುವ ಸೆಲೆಬ್ರಿಟಿ ಜೋಡಿಗಳು ಸ್ಯಾಂಡಲ್ವುಡ್ನಲ್ಲಿವೆ. ಆ ಪೈಕಿ, ನಟಿ ಮಿಲನಾ ನಾಗರಾಜ್ ಮತ್ತು ನಟ ಡಾರ್ಲಿಂಗ್ ಕೃಷ್ಣ ದಂಪತಿ ಪ್ರಮುಖರು. ಮೇಡ್ ಫರ್ ಈಚ್ ಅದರ್ ಎನ್ನುವಂತಿದೆ ಈ ಕ್ಯೂಟ್ ಕಪಲ್. ಹಾಸನ ಮೂಲದ ಮಿಲನಾ 2013ರಲ್ಲಿ 'ನಮ್ ದುನಿಯಾ ನಮ್ ಸ್ಟೈಲ್' ಸಿನಿಮಾ ಮೂಲಕ ಚಂದನವನಕ್ಕೆ ಕಾಲಿರಿಸಿದರು. ಇವರಿಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟ ಸಿನಿಮಾ 'ಲವ್ ಮಾಕ್ಟೇಲ್'. 2020ರ ಜನವರಿ 31ರಂದು ತೆರೆಕಂಡ ಈ ಸಿನಿಮಾ ಸೂಪರ್ ಹಿಟ್ ಆಯಿತು. ಅದರ ಮುಂದುವರಿದ ಭಾಗ (ಲವ್ ಮಾಕ್ಟೇಲ್ 2) 2022ರ ಫೆಬ್ರವರಿಯಲ್ಲಿ ತೆರೆಕಂಡಿತು. ಈ ಚಿತ್ರದಲ್ಲಿ ಸಾಕಷ್ಟು ಯಶಸ್ಸು ಪಡೆದುಕೊಂಡ ಜೋಡಿ ಈಗ ಸ್ಯಾಂಡಲ್ವುಡ್ನ ಮಾದರಿ ದಂಪತಿಯಾಗಿದ್ದಾರೆ.
ಇದನ್ನೂ ಓದಿ:ಪ್ಯಾರಿಸ್ ಪ್ರವಾಸದಲ್ಲಿ 'ಲವ್ ಮಾಕ್ಟೇಲ್' ಜೋಡಿ: ಐಫೆಲ್ ಟವರ್ ಎದುರು ನಿಂತು ಹೇಗೆ ಕಾಣ್ತಾರೆ ನೋಡಿ..