ಕಿರುತೆರೆ ಲೋಕದ ಖ್ಯಾತ ನಟಿ ಹಿನಾ ಖಾನ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಗುರುವಾರ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ ಖ್ಯಾತಿಯ ನಟಿ ತೀವ್ರ ಜ್ವರದಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ತೀವ್ರ ಜ್ವರದಿಂದ ಭಯಾನಕ ರಾತ್ರಿಗಳನ್ನು ಕಳೆದಿದ್ದೇನೆ. ತೀವ್ರ ಅಸ್ವಸ್ಥತೆ ಉಂಟಾಗಿದೆ ಎಂಬುದಾಗಿ ಮಾಹಿತಿ ನೀಡಿದ್ದಾರೆ.
ನಟಿ ಹಿನಾ ಖಾನ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ಹೈ ಟೆಂಪ್ರೇಚರ್ ಪ್ರದರ್ಶಿಸುವ ಥರ್ಮಾಮೀಟರ್‌ನ ಫೋಟೋ ಇದಾಗಿದೆ. ಫೋಟೋ ಕ್ಯಾಪ್ಷನ್ನಲ್ಲಿ, ತೀವ್ರ ಜ್ವರದ ಕಾರಣ ನಾಲ್ಕು ಭಯಾನಕ ರಾತ್ರಿ ಕಳೆದಿರುವುದಾಗಿ ತಿಳಿಸಿದ್ದಾರೆ. ಪರಿಸ್ಥಿತಿ ಸುಧಾರಿಸುತ್ತಿಲ್ಲ ಎಂಬುದಾಗಿಯೂ ಉಲ್ಲೇಖಿಸಿದ್ದಾರೆ. ನಿರಂತರ 102-103 ಟ್ರೆಂಪ್ರೇಚರ್. ಉಫ್, ಸದ್ಯ ನನ್ನಲ್ಲಿ ಶಕ್ತಿ ಉಳಿದಿಲ್ಲ. ಇದು ಅನಾರೋಗ್ಯಕರ. ನನಗಾಗಿ ಚಿಂತಿಸುತ್ತಿರುವ ಎಲ್ಲರಿಗೂ ಈ ಅಪ್‌ಡೇಟ್ಸ್, ನಾನು ಚೇತರಿಸಿಕೊಂಡು ಮರಳುತ್ತೇನೆ. ದಯವಿಟ್ಟು ನಿಮ್ಮ ಪ್ರೀತಿಯನ್ನು ಕಳುಹಿಸಿ ಎಂಬರ್ಥದಲ್ಲಿ ಬರೆದುಕೊಂಡಿದ್ದಾರೆ.
36 ವರ್ಷ ಹರೆಯದ ನಟಿ ಮತ್ತೊಂದು ಫೋಟೋ ಹಂಚಿಕೊಂಡಿದ್ದಾರೆ. ಕೈಗೆ ಇಂಜೆಕ್ಷನ್ ಹಾಕಿರುವ ಚಿತ್ರ ಇದಾಗಿದೆ. "ಲೈಫ್ ಅಪ್‌ಡೇಟ್ಸ್, 4ನೇ ದಿನ" ಎಂದು ಕ್ಯಾಪ್ಷನ್ ನೀಡಿದ್ದಾರೆ. '#onedayatatime' ಎಂಬ ಹ್ಯಾಶ್‌ಟ್ಯಾಗ್ ಕೊಟ್ಟಿದ್ದಾರೆ. ಫೋಟೋವೊಂದರಲ್ಲಿ, ಹಿನಾ ಖಾನ್ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವುದನ್ನು ಕಾಣಬಹುದು. ತಮ್ಮ ಅಭಿಮಾನಿಗಳಿಗೆ ಶೀಘ್ರ ಚೇತರಿಸಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿಸಿದ ನಟಿ ಶೀಘ್ರದಲ್ಲೇ ಚೇತರಿಸಿಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.