ಕರ್ನಾಟಕ

karnataka

ETV Bharat / entertainment

Gana first look: ಪ್ರಜ್ವಲ್ ದೇವರಾಜ್ ಅಭಿನಯದ 'ಗಣ' ಚಿತ್ರದ ಫಸ್ಟ್‌ ಲುಕ್ ಬಿಡುಗಡೆ; ವೀರಂ ಬಳಿಕ ಭಾರಿ ನಿರೀಕ್ಷೆ - ಗಣ ಸಿನಿಮಾದ ಫಸ್ಟ್ ಲುಕ್

ನಟ ಪ್ರಜ್ವಲ್ ದೇವರಾಜ್ ನಾಯಕರಾಗಿ ಅಭಿನಯಿಸಿರುವ ಗಣ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಸ್ಯಾಂಡಲ್​ವುಡ್​ನ ಕೆಲವು ನಟರು ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

prajwal devaraj
ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್

By

Published : Jun 11, 2023, 6:53 AM IST

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಸಿನಿಮಾಗಳ ಮೂಲಕ ತನ್ನದೇ ಆದ ಐಡೆಂಟಿಟಿ ಕ್ರಿಯೇಟ್ ಮಾಡಿಕೊಂಡಿರುವ ನಟ ಅಂದ್ರೆ 'ಡೈನಾಮಿಕ್ ಪ್ರಿನ್ಸ್' ಪ್ರಜ್ವಲ್ ದೇವರಾಜ್. 'ವೀರಂ' ಚಿತ್ರದ ಬಳಿಕ ಪ್ರಜ್ವಲ್ ದೇವರಾಜ್ ಅವರು 'ಗಣ' ಆಗಲು ಹೊರಟಿದ್ದಾರೆ‌. ಹೌದು, 'ಗಣ' ಎನ್ನುವುದು ಪ್ರಜ್ವಲ್ ನಟಿಸುತ್ತಿರುವ ಹೊಸ ಚಿತ್ರದ ಟೈಟಲ್​. ಇದೀಗ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ. ಸ್ಯಾಂಡಲ್​ವುಡ್ ನಟ ನಟಿಯರು ಬೆಂಬಲ​ ನೀಡಿದ್ದಾರೆ.

ಗಣ ಚಿತ್ರಕ್ಕೆ ಸಾಥ್ ಕೊಟ್ಟ ವಿಜಯ್​ ರಾಘವೇಂದ್ರ

ನಟ ‌‌‌ವಿಜಯ್​ ರಾಘವೇಂದ್ರ, ಶೃತಿ ಹರಿಹರನ್, ಪನ್ನಗಾಭರಣ, ವಾಸುಕಿ ವೈಭವ್, ಮೇಘನಾ ರಾಜ್, ರಾಗಿಣಿ ಪ್ರಜ್ವಲ್,‌ ಸಿಂಪಲ್ ಸುನಿ, ಶರಣ್, ಮೇಘ ಶೆಟ್ಟಿ, ರಾಗಿಣಿ ದ್ವಿವೇದಿ, ಪ್ರಣಾಮ್ ದೇವರಾಜ್, ತರುಣ್ ಸುಧೀರ್, ರಚನಾ ಇಂದರ್, ಗಿರೀಶ್ ಶಿವಣ್ಣ, ಡಾರ್ಲಿಂಗ್ ಕೃಷ್ಣ, ಮಿಲನ ನಾಗರಾಜ್, ಅಮೃತ ಅಯ್ಯಂಗಾರ್ ಹಾಗೂ ನಿರ್ದೇಶಕ ಲೋಹಿತ್ ಸೇರಿದಂತೆ ಹದಿನೇಳಕ್ಕೂ ಹೆಚ್ಚು ಚಂದನವನದ ತಾರೆಯರು ಗಣ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿರುವುದು ವಿಶೇಷವಾಗಿತ್ತು.

ಗಣ ಚಿತ್ರಕ್ಕೆ ಸಾಥ್ ನೀಡಿದ ಮೇಘನಾ ರಾಜ್

ಇದನ್ನೂ ಓದಿ :ಪ್ರಜ್ವಲ್ ದೇವರಾಜ್ ಅಭಿನಯದ ' ಗಣ ' ಚಿತ್ರೀಕರಣ ಮುಕ್ತಾಯ

ಗಣ ತಾರಾಗಣ: ಇನ್ನು ಅಭಿಮಾನಿಗಳಿಂದ ಕೂಡ ಫಸ್ಟ್ ಲುಕ್​ಗೆ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆ. ಸಿನಿಮಾದಲ್ಲಿ ಪ್ರಜ್ವಲ್ ಅವರ‌ ಹೊಸ ಲುಕ್​ಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ. ಚಿತ್ರದಲ್ಲಿ ಪ್ರಜ್ವಲ್ ದೇವರಾಜ್​ಗೆ ಯಶಾ ಶಿವಕುಮಾರ್ ಜೋಡಿಯಾಗಿದ್ದಾರೆ. ಇದರ ಜೊತೆಗೆ, ವೇದಿಕಾ ಕುಮಾರ್, ಕೃಷಿ ತಾಪಂಡ, ವಿಶಾಲ್ ಹೆಗಡೆ, ರವಿ ಕಾಳೆ, ಸಂಪತ್ ರಾಜ್, ಶಿವರಾಜ್ ಕೆ.ಆರ್. ಪೇಟೆ, ರಮೇಶ್ ಭಟ್ ಮುಂತಾದವರು ಬಣ್ಣ ಹಚ್ಚಿದ್ದಾರೆ.

ಗಣ ಚಿತ್ರಕ್ಕೆ ಸಾಥ್ ನೀಡಿದ ಡಾರ್ಲಿಂಗ್ ಕೃಷ್ಣ

ಇದನ್ನೂ ಓದಿ :ಡೈಲಾಗ್ ಇಲ್ಲದೇ ಆ್ಯಕ್ಷನ್ ನಿಂದಲೇ ಸೌಂಡ್ ಮಾಡುತ್ತಿರುವ ಪ್ರಜ್ವಲ್ ದೇವರಾಜ್ '' ಅಬ್ಬರ ''

ತೆರೆಯ ಹಿಂದಿನ ರುವಾರಿಗಳು: ಚೆರಿ ಕ್ರಿಯೇಷನ್ಸ್ ಲಾಂಛನದಲ್ಲಿ ಪಾರ್ಥು ಅವರು ನಿರ್ಮಿಸಿರುವ ಈ ಚಿತ್ರವನ್ನು ಹರಿಪ್ರಸಾದ್ ಜಕ್ಕ ನಿರ್ದೇಶಿಸಿದ್ದಾರೆ. ಜೈ ಆನಂದ್ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ ನಿರ್ದೇಶನ, ಹರೀಶ್ ಕೊಮ್ಮೆ ಸಂಕಲನ , ಸತೀಶ್ ಎ. ಕಲಾ ನಿರ್ದೇಶನ ಹಾಗೂ ಡಿ.ಜೆ ಕ್ರಿಯೇಟಿವ್ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಗಣ ಚಿತ್ರಕ್ಕೆ ಸಾಥ್ ನೀಡಿದ ಶೃತಿ ಹರಿಹರನ್

ಇದನ್ನೂ ಓದಿ :ಡೈರೆಕ್ಟರ್​ ಲೋಹಿತ್ ಜತೆ ಹೊಸ ಚಿತ್ರಕ್ಕೆ ಗ್ರೀನ್‌ ಸಿಗ್ನಲ್ ಕೊಟ್ಟ ಡೈನಾಮಿಕ್ ಪ್ರಿನ್ಸ್

ಇದರ ಜೊತೆಗೆ, ಮುರಳಿ ಅವರ ನೃತ್ಯ ನಿರ್ದೇಶನ 'ಗಣ' ಚಿತ್ರಕ್ಕಿದ್ದು, ಸಿನಿಮಾದ ಕಾರ್ಯಕಾರಿ ನಿರ್ಮಾಪಕರಾಗಿ ಚಿಕ್ಕಬಳ್ಳಾಪುರ ಶ್ರೀನಿವಾಸ್ ಕೆಲಸ ಮಾಡಿದ್ದಾರೆ. ಸದ್ಯಕ್ಕೆ ಫಸ್ಟ್ ಲುಕ್ ಅನಾವರಣ ಆಗಿದ್ದು, ಸದ್ಯದಲ್ಲೇ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ. ಬೆಂಗಳೂರು ಹಾಗೂ ಮೈಸೂರಿನಲ್ಲಿ 80 ದಿನಗಳ ಕಾಲ ಗಣ ಚಿತ್ರೀಕರಣ ನಡೆದಿದ್ದು, ಶೂಟಿಂಗ್‌ ಮುಕ್ತಾಯಗೊಂಡಿದೆ.

ಗಣ ಚಿತ್ರಕ್ಕೆ ಸಾಥ್ ನೀಡಿದ ವಾಸುಕಿ ವೈಭವ್

ಇದನ್ನೂ ಓದಿ :ಪ್ರೇಕ್ಷಕರ ನಡುವೆ ಪ್ರಜ್ವಲ್​ ದೇವರಾಜ್​ ಅಭಿನಯದ ವೀರಂ ಚಿತ್ರದ ಟ್ರೈಲರ್​ ಬಿಡುಗಡೆ

ABOUT THE AUTHOR

...view details