ಕರ್ನಾಟಕ

karnataka

ETV Bharat / entertainment

ಶ್ರೀಕಾಳಹಸ್ತಿ ದೇವಾಲಯಕ್ಕೆ ಭೇಟಿ ಕೊಟ್ಟ ರೆಮೋ ಚಿತ್ರದ ನಾಯಕ ನಟ ಇಶಾನ್ - actor Ishaan visits Srikalahasti temple

ಸಿನಿಮಾದ ಭರ್ಜರಿ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವ ಚಿತ್ರದ ನಾಯಕ ನಟ ಇಶಾನ್ ಇಂದು ಶ್ರೀಕಾಳಹಸ್ತಿಗೆ ಭೇಟಿ ಕೊಟ್ಟ ದೇವರ ಆರ್ಶೀವಾದವನ್ನು ಪಡೆದಿದ್ದಾರೆ.

actor Ishaan
ನಾಯಕ ನಟ ಇಶಾನ್

By

Published : Nov 22, 2022, 11:04 PM IST

ಶ್ರೀಕಾಳಹಸ್ತಿ(ಆಂಧ್ರಪ್ರದೇಶ):ಪವನ್ ಒಡೆಯರ್ ನಿರ್ದೇಶನದ ಇಶಾನ್, ಆಶಿಕಾ ರಂಗನಾಥ್ ನಟನೆಯ ‘ರೆಮೋ’ ಸಿನಿಮಾ ಸ್ಯಾಂಡಲ್ ವುಡ್ ಸಿನಿ ಪ್ರೇಕ್ಷಕರ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದೆ. ಎಲ್ಲಿ ನೋಡಿದರೂ ‘ರೆಮೋ’ ಟಾಕ್ ಜೋರಾಗಿದೆ. ಕ್ರೇಜಿ ಹಾಗೂ ಅದ್ದೂರಿ ಟ್ರೇಲರ್, ಹಾಡುಗಳ ಮೂಲಕ ಎಲ್ಲರ ಮನಗೆದ್ದಿರೋ ‘ರೆಮೋ’ ನವೆಂಬರ್ 25ಕ್ಕೆ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಸಿನಿಮಾದ ಭರ್ಜರಿ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವ ಚಿತ್ರದ ನಾಯಕ ನಟ ಇಶಾನ್ ಇಂದು ಶ್ರೀಕಾಳಹಸ್ತಿ ದೇವರ ಆರ್ಶೀವಾದವನ್ನು ಪಡೆದಿದ್ದಾರೆ.

ಇದೇ ವಾರ ರೆಮೋ ಸಿನಿಮಾ ಬಿಡುಗಡೆಯಾಗುತ್ತಿರುವ ಪ್ರಯುಕ್ತ ನಾಯಕ ನಟ ಇಶಾನ್ ಹಾಗೂ ಚಿತ್ರತಂಡ ಆಂಧ್ರದಲ್ಲಿರುವ ಶ್ರೀಕಾಳಹಸ್ತಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ದೇವರ ದರ್ಶನ ಮಾಡಿ ಸಿನಿಮಾ ಗೆಲುವಿಗಾಗಿ ಪೂಜೆ ಸಲ್ಲಿಸಿದ್ದಾರೆ.

ಇಶಾನ್ ಸಿನಿ ಕೆರಿಯರ್ ನ ಬಹು ನಿರೀಕ್ಷಿತ ಸಿನಿಮಾ ‘ರೆಮೋ’. ಪೂರಿ ಜಗ್ಗನಾಥ್ ನಿರ್ದೇಶನದ 'ರೋಗ್' ಸಿನಿಮಾ ಮೂಲಕ ನಾಯಕ ನಟನಾಗಿ ಎಂಟ್ರಿ ಕೊಟ್ಟ ಇಶಾನ್ ಬಿಗ್ ಬ್ರೇಕ್ ನಂತರ ಕಂಬ್ಯಾಕ್ ಮಾಡುತ್ತಿದ್ದಾರೆ. ಈ ಸಿನಿಮಾ ಮೇಲೆ ಇಶಾನ್ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಚಿತ್ರಕ್ಕಾಗಿ ಅವರ ತಯಾರಿ ಕೂಡ ಬಿಡುಗಡೆಯಾಗಿರುವ ಸ್ಯಾಂಪಲ್ ಗಳಲ್ಲಿ ಎದ್ದು ಕಾಣುತ್ತಿದೆ.

ಸ್ಕ್ರೀನ್ ಮೇಲೆ ಇಶಾನ್ ಅಪಿಯರೆನ್ಸ್ ಕೂಡ ಸಿನಿರಸಿಕರನ್ನು ಇಂಪ್ರೆಸ್ ಮಾಡಿದೆ. ಸಿನಿಮಾ ಹಾಗೂ ತಮ್ಮ ಬಗ್ಗೆ ಕೇಳಿ ಬರ್ತಿರೋ ಟಾಕ್ ಕೇಳಿ ಸಂತಸ ಗೊಂಡಿರುವ ಇಶಾನ್ ನವೆಂಬರ್ 25ರಂದು ಪ್ರೇಕ್ಷಕರ ರೆಸ್ಪಾನ್ಸ್ ಹೇಗಿರುತ್ತೆ ಎಂಬುದನ್ನು ನೋಡಲು ಕಾತರರಾಗಿದ್ದಾರೆ.

ರೆಮೋ ಸಿನಿಮಾ ಮ್ಯೂಸಿಕಲ್ ಮತ್ತು ಔಟ್ ಅಂಡ್ ಔಟ್ ರೋಮ್ಯಾಂಟಿಕ್ ಸಬ್ಜೆಕ್ಟ್ ಒಳಗೊಂಡಿದೆ. ಚಿತ್ರವನ್ನು ಜಯಾದಿತ್ಯ ಬ್ಯಾನರ್ ನಡಿ ಸಿ ಆರ್ ಮನೋಹರ್ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಸಿ ಆರ್ ಗೋಪಿ ಅವರ ಸಹ ನಿರ್ಮಾಣವೂ ಚಿತ್ರಕ್ಕಿದೆ.

ವೈದಿ ಕ್ಯಾಮೆರಾ ವರ್ಕ್, ಕೆ.ಎಂ. ಪ್ರಕಾಶ್ ಸಂಕಲನ, ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಸಾಕಷ್ಟು ವಿಶೇಷತೆ ಹೊತ್ತ ‘ರೆಮೋ’ ನವೆಂಬರ್ 25ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಇದನ್ನೂ ಓದಿ:ನಿರ್ದೇಶನ, ನಿರ್ಮಾಣದ ಜೊತೆಗೆ ನಟನೆಗೆ ಮುಂದಾದ ನಿರ್ದೇಶಕ ಸತ್ಯ ಪ್ರಕಾಶ್

ABOUT THE AUTHOR

...view details