ಕರ್ನಾಟಕ

karnataka

ETV Bharat / entertainment

ಭೀಕರ ಪ್ರವಾಹಕ್ಕೆ ನಲುಗಿದ ಅಸ್ಸೋಂ: 25 ಲಕ್ಷ ರೂ. ನೆರವು ನೀಡಿದ ನಟ ಅಮೀರ್ ಖಾನ್ - Laal Singh Chaddha

ಅಸ್ಸೋಂ ಭೀಕರ ಪ್ರವಾಹಕ್ಕೆ ಸಿಲುಕಿ ನಲುಗುತ್ತಿದ್ದು, ಬಾಲಿವುಡ್ ನಟ ಅಮೀರ್ ಖಾನ್ ಸಹಾಯ ಹಸ್ತ ಚಾಚಿದ್ದಾರೆ. ಅಸ್ಸಾಂ ಮುಖ್ಯಮಂತ್ರಿ ಪರಿಹಾರ ನಿಧಿಗೆ 25 ಲಕ್ಷ ರೂ ನೀಡಿದ್ದಾರೆ.

ನಟ ಅಮೀರ್ ಖಾನ್
ನಟ ಅಮೀರ್ ಖಾನ್

By

Published : Jun 30, 2022, 7:41 AM IST

ಅಸ್ಸೋಂನಲ್ಲಿ ಪ್ರವಾಹ ಪರಿಸ್ಥಿತಿ ತುಂಬಾ ಭೀಕರವಾಗಿದೆ. ಸುಮಾರು ಒಂದು ತಿಂಗಳಿನಿಂದ ಹಲವು ಜಿಲ್ಲೆಗಳಲ್ಲಿ ಲಕ್ಷಾಂತರ ಜನರು ಪ್ರವಾಹದಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ಅನೇಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೊಂದೆಡೆ, ಪ್ರವಾಹ ಸಂತ್ರಸ್ತರಿಗೆ ಎಲ್ಲ ರೀತಿಯ ಸೌಲಭ್ಯ ಕಲ್ಪಿಸುವಲ್ಲಿ ಸರ್ಕಾರ ನಿರತವಾಗಿದ್ದು, ಈ ಬೆನ್ನಲ್ಲೇ ನಟ ಅಮೀರ್ ಖಾನ್ ಆರ್ಥಿಕ ನೆರವು ನೀಡಿದ್ದಾರೆ.

ಅಸ್ಸೋಂಗೆ 25 ಲಕ್ಷ ರೂ. ನೆರವು ನೀಡಿದ ನಟ ಅಮೀರ್ ಖಾನ್

'ಬಾಲಿವುಡ್ ನಟ ಅಮೀರ್ ಖಾನ್ ಅವರು ಸಿಎಂ ಪರಿಹಾರ ನಿಧಿಗೆ 25 ಲಕ್ಷ ರೂ. ಕೊಡುಗೆ ನೀಡುವ ಮೂಲಕ ನಮ್ಮ ರಾಜ್ಯದ ಪ್ರವಾಹ ಪೀಡಿತ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚಿದ್ದಾರೆ. ಅವರ ಕಾಳಜಿ ಮತ್ತು ಉದಾರತೆಗೆ ಕೃತಜ್ಞತೆಗಳು’ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಟ್ವೀಟ್ ಮಾಡಿದ್ದಾರೆ.

ಇನ್ನು ಅಮೀರ್ ಖಾನ್ ಅಭಿನಯದ ಬಹುನಿರೀಕ್ಷಿತ 'ಲಾಲ್ ಸಿಂಗ್ ಚಡ್ಡಾ' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಅದ್ವೈತ್ ಚಂದನ್ ನಿರ್ದೇಶನ ಮಾಡಿದ್ದು, ಇದು ಹಾಲಿವುಡ್​ನ ‘ಫಾರೆಸ್ಟ್​ ಗಂಪ್’ನ ಅಧಿಕೃತ ರಿಮೇಕ್ ಚಿತ್ರವಾಗಿದೆ. ಟಾಲಿವುಡ್ ನಟ ನಾಗಚೈತನ್ಯ ಈ ಚಿತ್ರದ ಮೂಲಕ ಬಾಲಿವುಡ್​​ಗೆ ಪ್ರವೇಶಿಸುತ್ತಿದ್ದಾರೆ.

ಇದನ್ನೂ ಓದಿ:'ಹಿಂದೂಗಳ ಜೀವ ಮುಖ್ಯ': ಉದಯಪುರ ವ್ಯಕ್ತಿಯ ಶಿರಚ್ಛೇದ ಖಂಡಿಸಿದ ಖ್ಯಾತ ನಟಿ ಪ್ರಣಿತಾ

ABOUT THE AUTHOR

...view details