ಕರ್ನಾಟಕ

karnataka

ETV Bharat / entertainment

'ಮೇಡ್ ಇನ್ ಹೆವೆನ್' ಮತ್ತೆ ಬರಲಿದೆ: ಪೋಸ್ಟರ್​ ಬಿಡುಗಡೆಗೊಳಿಸಿ ಗುಡ್​ನ್ಯೂಸ್​ ಕೊಟ್ಟ ಜೋಯಾ ಅಖ್ತರ್ - ಈಟಿವಿ ಭಾರತ ಕನ್ನಡ

ಕಿರುತೆರೆ ಕಾರ್ಯಕ್ರಮ 'ಮೇಡ್ ಇನ್ ಹೆವೆನ್ ಸೀಸನ್​ 2' ಬರಲಿದೆ ಎಂದು ನಿರ್ಮಾಪಕಿ ಜೋಯಾ ಅಖ್ತರ್ ತಿಳಿಸಿದ್ದಾರೆ.

Made In Heaven
ಮೇಡ್ ಇನ್ ಹೆವೆನ್

By

Published : Jul 6, 2023, 7:05 PM IST

ಬಾಲಿವುಡ್​ ನಿರ್ದೇಶಕಿ ಮತ್ತು ನಿರ್ಮಾಪಕಿ ಜೋಯಾ ಅಖ್ತರ್ ಅವರು 'ಮೇಡ್ ಇನ್ ಹೆವೆನ್' ಕಿರುತೆರೆ ಕಾರ್ಯಕ್ರಮದ ಎರಡನೇ ಸೀಸನ್‌ನ ಮೊದಲ ಪೋಸ್ಟರ್ ಅನ್ನು ಗುರುವಾರ ಅನಾವರಣಗೊಳಿಸಿದ್ದಾರೆ. ಅವರು ಪೋಸ್ಟರ್ ಬಿಡುಗಡೆಗೊಳಿಸಲು ಇನ್​ಸ್ಟಾ ವೇದಿಕೆಯನ್ನು ಬಳಸಿಕೊಂಡರು. "ಮದುವೆಗಳು, ನಾಟಕ ಮತ್ತು ಅವ್ಯವಸ್ಥೆಗಳು 2X ಗ್ರ್ಯಾಂಡ್ ಆಗಲಿವೆ. #MadeInHeavenS2OnPrime ಶೀಘ್ರದಲ್ಲೇ ಬರಲಿದೆ!"​ ಎಂದು ತಿಳಿಸಿದ್ದಾರೆ.

ಜೋಯಾ ಅಖ್ತರ್ ಮತ್ತು ರೀಮಾ ಕಾಗ್ತಿ ರಚಿಸಿದ 'ಮೇಡ್ ಇನ್ ಹೆವೆನ್' ಸೀಸನ್​ 2ರ ಅಧಿಕೃತ ದಿನಾಂಕ ಇನ್ನೂ ಪ್ರಕಟಗೊಂಡಿಲ್ಲ. ಕಾರ್ಯಕ್ರಮವು ಓಟಿಟಿ ಪ್ಲಾಟ್‌ಫಾರ್ಮ್ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮ್ ಆಗಲಿದೆ. 'ಮೇಡ್ ಇನ್ ಹೆವೆನ್' ದೆಹಲಿಯ ಇಬ್ಬರು ವೆಡ್ಡಿಂಗ್ ಪ್ಲಾನರ್‌ಗಳ ಕಥೆಯಾಗಿದೆ. ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ನಿರ್ಮಿಸಿದ ಈ ಕಾರ್ಯಕ್ರಮವನ್ನು ಜೋಯಾ ಅಖ್ತರ್ ಮತ್ತು ರೀಮಾ ಕಾಗ್ತಿ ರಚಿಸಿದ್ದಾರೆ. ಇವರೊಂದಿಗೆ ಅಲಂಕೃತ ಶ್ರೀವಾಸ್ತವ ಕೂಡ ಸೇರಿಕೊಂಡಿದ್ದಾರೆ.

ತಯಾರಕರು ಕಾರ್ಯಕ್ರಮದ ಮೊದಲ ಪೋಸ್ಟರ್ ಅನ್ನು ಅನಾವರಣಗೊಳಿಸಿದ ಕೂಡಲೇ, ಅಭಿಮಾನಿಗಳು ರೆಡ್ ಹಾರ್ಟ್ಸ್ ಮತ್ತು ಫೈರ್ ಎಮೋಜಿನೊಂದಿಗೆ ಕಾಮೆಂಟ್ ವಿಭಾಗವನ್ನು ತುಂಬಿದ್ದಾರೆ. ಶಿಬಾನಿ ದಾಂಡೇಕರ್, "ಕಾಯಲು ಸಾಧ್ಯವಿಲ್ಲ!!" ಎಂದಿದ್ದಾರೆ. ಮತ್ತೊಬ್ಬರು, ವಾವ್​ ಇದು ನಿಜವೇ! ಉಸಿರು ಬಿಗಿ ಹಿಡಿದು ಕಾಯುತ್ತಿದ್ದೇನೆ" ಎಂದು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ:Salaar: ಬಿಡುಗಡೆಯಾದ ಕೆಲ ಗಂಟೆಯಲ್ಲೇ 25 ಮಿಲಿಯನ್​ ವೀಕ್ಷಣೆ .. ಸಲಾರ್​ ಟೀಸರ್​ ಬಗ್ಗೆ ಅಭಿಮಾನಿಗಳೇನಂದ್ರು?

'ದಿ ಆರ್ಚೀಸ್‌' ಟೀಸರ್ ಔಟ್​: ಈ ಮಧ್ಯೆ ಜೋಯಾ ಅಖ್ತರ್ ಅವರು, ಲೈವ್ ಆ್ಯಕ್ಷನ್ ಮ್ಯೂಸಿಕಲ್ ವೆಬ್​ಸಿರೀಸ್​ 'ದಿ ಆರ್ಚೀಸ್'​ ಮೂಲಕ ಮಿಂಚಲು ಸಿದ್ಧತೆ ಮಾಡಿಕೊಂಡಿದ್ದಾರೆ. ಈಗಾಗಲೇ ಚಿತ್ರೀಕರಣ ಮುಕ್ತಾಯಗೊಂಡಿದೆ. ಇತ್ತೀಚೆಗೆ 'ದಿ ಆರ್ಚೀಸ್‌'ನ ಟೀಸರ್ ಅನ್ನು ಅನಾವರಣಗೊಳಿಸಿದ್ದಾರೆ. ಇದರಲ್ಲಿ ಬಾಲಿವುಡ್​ ಸೂಪರ್​ ಸ್ಟಾರ್​ ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರ ಪುತ್ರಿ ಸುಹಾನಾ ಖಾನ್​, ಬೋನಿ ಕಪೂರ್ ಮತ್ತು ದಿವಂಗತ ಶ್ರೀದೇವಿ ಅವರ ಪುತ್ರಿ ಖುಷಿ ಕಪೂರ್ ಮತ್ತು ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ಅಭಿನಯಿಸಿದ್ದಾರೆ.

ಒಂದು ನಿಮಿಷದ ಟೀಸರ್, ಚಿತ್ರದ ಕಥೆಯು 1964 ರಲ್ಲಿ ನಡೆದದ್ದು ಎಂಬುದನ್ನು ತಿಳಿಸುತ್ತದೆ. ಇದು ಆಂಗ್ಲೋ ಇಂಡಿಯನ್ ಕಥೆಯನ್ನು ಆಧರಿಸಿದೆ. ಈ ವೆಬ್​ಸಿರೀಸ್ ಆರ್ಚಿ, ಬೆಟ್ಟಿ, ಡಿಲ್ಟನ್, ಈಥರ್, ಜಗ್‌ಹೆಡ್, ರೆಗ್ಗೀ ಮತ್ತು ವೆರೋನಿಕಾ ಎಂಬ ಏಳು ಪಾತ್ರಗಳ ಗ್ಯಾಂಗ್​ ಕಥೆಯನ್ನು ಹೇಳುತ್ತದೆ. ಯುವ ನಟರಾದ ಮಿಹಿರ್ ಅಹುಜಾ, ಡಾಟ್, ಯುವರಾಜ್ ಮೆಂಡಾ ಮತ್ತು ವೇದಂಗ್ ರೈನಾ ಕೂಡ ಚಿತ್ರದ ಪಾತ್ರವರ್ಗದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವು ಟೈಗರ್​ ಬೇಬಿ ಸಂಸ್ಥೆಯ ಅಡಿಯಲ್ಲಿ ನಿರ್ಮಾಣಗೊಂಡಿದೆ. 'ದಿ ಆರ್ಚೀಸ್' OTT ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಪ್ರದರ್ಶನಗೊಳ್ಳಲಿದೆ.

ಇದನ್ನೂ ಓದಿ:Salaar: 400 ಕೋಟಿ ರೂಪಾಯಿ ವೆಚ್ಚ, 14 ಅದ್ಭುತ ಸೆಟ್‌ಗಳಲ್ಲಿ ಶೂಟಿಂಗ್​! ಸಲಾರ್‌ ಸಿನಿಮಾ ನಿರ್ಮಾಣದ ರೋಚಕ ಮಾಹಿತಿ

ABOUT THE AUTHOR

...view details