ಹೈದರಾಬಾದ್:ಇತ್ತೀಚೆಗೆ ತೆರೆಕಂಡವಿಕ್ಕಿ ಕೌಶಲ್ ಮತ್ತು ಸಾರಾ ಅಲಿಖಾನ್ ಅಭಿನಯದ 'ಜರಾ ಹಟ್ಕೆ ಜರಾ ಬಚ್ಕೆ' ಬಾಲಿವುಡ್ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸಖತ್ ಸದ್ದು ಮಾಡುತ್ತಿದೆ. ಲಕ್ಷ್ಮಣ್ ಉಟೇಕರ್ ಅವರ ನಿರ್ದೇಶನದ ಈ ಚಿತ್ರ ಬಿಡುಗಡೆಯಾಗಿ 10 ದಿನಗಳು ಪೂರ್ಣಗೊಳಿಸಿದ್ದು, ಎರಡನೇ ವಾರಾಂತ್ಯಕ್ಕೆ 16.20 ಕೋಟಿ ರೂ ಗಳಿಕೆ ಮಾಡಿದೆ. ಈ ಮೂಲಕ ಬಾಕ್ಸ್ ಆಫೀಸ್ನಲ್ಲಿ ಎರಡು ವಾರಗಳಲ್ಲಿ 53.55 ಕೋಟಿ ರೂ. ಕಲೆಕ್ಷನ್ ಮಾಡಿದೆ. ಫ್ಯಾಮಿಲಿ ಎಂಟರ್ಟ್ರೈನರ್ ಚಿತ್ರವಾಗಿರುವ ಇದು ಬಿಡುಗಡೆ ದಿನದಂದು 5.49 ಕೋಟಿ ಬಾಚಿಕೊಂಡು ಉತ್ತಮ ಇನ್ನಿಂಗ್ಸ್ ಆರಂಭಿಸಿತು. ಮೊದಲ ವಾರಾಂತ್ಯದಲ್ಲಿ 37.35 ಕೋಟಿ ರೂ ಹರಿದು ಬಂದಿತ್ತು.
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿರುವ ಚಿತ್ರತಂಡ, 'ಜರಾ ಹಟ್ಕೆ ಜರಾ ಬಚ್ಕೆ' ಚಿತ್ರವು 7.02 ಕೋಟಿ ರೂಪಾಯಿಗಳ ನೋಂದಾಯಿತ ವ್ಯಾಪಾರವನ್ನು ಹೊಂದಿದೆ, ಇದು 9ನೇ ದಿನದ ಕಲೆಕ್ಷನ್‌ಗಿಂತ ದೊಡ್ಡದಾಗಿದೆ. ಮೊದಲ ವಾರ 37.35 ಕೋಟಿ ರೂ. ಗಳಿಸಿದರೆ, 2ನೇ ವಾರ 16.20 ಕೋಟಿ ಗಳಿಸಿದೆ. ಚಲನಚಿತ್ರ ಬಿಡುಗಡೆಯಾದ 10 ದಿನಗಳ ನಂತರ ದೇಶೀಯ ಮಾರುಕಟ್ಟೆಯಲ್ಲಿ ಒಟ್ಟು 53.55 ಕೋಟಿ ರೂ. ಕಲೆಕ್ಷನ್ ಮಾಡಿದೆ.
ಜರಾ ಹಟ್ಕೆ ಜರಾ ಬಚ್ಕೆ 10 ದಿನದ ಬಾಕ್ಸ್ ಆಫೀಸ್ ಕಲೆಕ್ಷನ್
- ಮೊದಲ ದಿನ Rs 5.49 cr
- ಎರಡನೇ ದಿನ Rs 7.20 cr
- ಮೂರನೇ ದಿನ Rs 9.90 cr
- ಐದನೇ ದಿನ Rs 4.14 cr
- ಆರನೇ ದಿ Rs 3.87 cr
- ಏಳನೇ ದಿನ Rs 3.51 cr
- ಎಂಟನೇ ದಿನ Rs 3.24 cr
- ಒಂಭತ್ತನೇ ದಿನೆ Rs 5.76 cr
- ಹತ್ತನೇ ದಿನ Rs 7.02 cr
ಜರಾ ಹಟ್ಕೆ ಜರಾ ಬಚ್ಕೆ ವಾರದ ಬಾಕ್ಸ್ ಆಫೀಸ್ ಕಲೆಕ್ಷನ್
- ಮೊದಲ ವಾರ : ₹ 37.35 cr
- ಎರಡನೇ ವಾರ: ₹ 16.20 cr