ಕರ್ನಾಟಕ

karnataka

By

Published : Jun 18, 2023, 3:44 PM IST

ETV Bharat / entertainment

ಜರಾ ಹಟ್ಕೆ ಜರಾ ಬಚ್ಕೆ ಕಲೆಕ್ಷನ್ ಏರಿಕೆ​​: ವಿಕ್ಕಿ ಸಾರಾ ಸಿನಿಮಾ ಸಕ್ಸಸ್​

40 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಜರಾ ಹಟ್ಕೆ ಜರಾ ಬಚ್ಕೆ ಈವರೆಗೆ ಒಟ್ಟು 65.97 ಕೋಟಿ ರೂ. ಕಲೆಕ್ಷನ್​ ಮಾಡಿದೆ.

Zara Hatke Zara Bachke collection
ಜರಾ ಹಟ್ಕೆ ಜರಾ ಬಚ್ಕೆ ಕಲೆಕ್ಷನ್​

ಲಕ್ಷ್ಮಣ್ ಉಟೇಕರ್ ನಿರ್ದೇಶನದ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಜರಾ ಹಟ್ಕೆ ಜರಾ ಬಚ್ಕೆ (Zara Hatke Zara Bachke) ಯ ಬಾಕ್ಸ್​ ಆಫೀಸ್ ಕಲೆಕ್ಷನ್​ ಸಂಖ್ಯೆಗೆ​ ಪ್ರಭಾಸ್ ಅಭಿನಯದ 'ಆದಿಪುರುಷ್'​​ ಹೊಡೆತ ಕೊಟ್ಟಿದೆ ಎಂದು ಗ್ರಹಿಸಲಾಗಿದೆ. ಆದ್ರೆ ವಿಕ್ಕಿ ಕೌಶಲ್ ಮತ್ತು ಸಾರಾ ಅಲಿ ಖಾನ್ ಮುಖ್ಯಭೂಮಿಕೆಯ ಈ ಚಲನಚಿತ್ರವು ಮೂರನೇ ಶನಿವಾರವೂ ಉತ್ತಮ ಪ್ರದರ್ಶನ ಕಂಡಿದೆ. ಆದಿಪುರುಷ್​ ಕ್ರೇಜ್​ ಹೊರತಾಗಿಯೂ, ಜರಾ ಹಟ್ಕೆ ಜರಾ ಬಚ್ಕೆ ಪ್ರದರ್ಶನ ಉತ್ತಮವಾಗಿ ಸಾಗಿದೆ.

ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ಕಥೆಯು (ಜರಾ ಹಟ್ಕೆ ಜರಾ ಬಚ್ಕೆ) ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯುವುದನ್ನು ಮುಂದುವರೆಸಿದೆ. ಮೂರನೇ ಶನಿವಾರದಂದು, ಸಿನಿಮಾ ಕಲೆಕ್ಷನ್​ ಸಂಖ್ಯೆ ಕೊಂಚ ಏರಿಕೆ ಕಂಡಿದೆ. ಚಿತ್ರದ ಗಳಿಕೆ ಏರಿಕೆ ಕಾಣುತ್ತಿರುವುದು ಚಿತ್ರತಂಡದ ಉತ್ಸಾಹವನ್ನು ಹೆಚ್ಚಿಸಿದೆ. ಆದಿಪುರುಷ್​​ ಪೈಪೋಟಿ ನಡುವೆಯು ಜರಾ ಹಟ್ಕೆ ಜರಾ ಬಚ್ಕೆ ಉತ್ತಮವಾಗಿ ಸಾಗುತ್ತಿದೆ.

ಜರಾ ಹಟ್ಕೆ ಜರಾ ಬಚ್ಕೆ ತೆರೆಕಂಡ 16ನೇ ದಿನದಂದು 1.89 ಕೋಟಿ ರೂ. ಸಂಪಾದಿಸಿದೆ. ಹಿಂದಿನ ದಿನದ ವ್ಯವಹಾರಕ್ಕೆ ಹೋಲಿಸಿದರೆ ಈ ಮೊತ್ತವು ದೊಡ್ಡದಾಗಿದೆ. 40 ಕೋಟಿ ರೂ. ಬಜೆಟ್‌ನಲ್ಲಿ ತಯಾರಾಗಿರುವ ಈ ಚಿತ್ರವು ಈವರೆಗೆ ಒಟ್ಟು 65.97 ಕೋಟಿ ರೂ. ಸಂಗ್ರಹಿಸಿದೆ. ದಿನೇಶ್ ವಿಜನ್ ಅವರ ಬ್ಯಾನರ್ ಮ್ಯಾಡಾಕ್ ಫಿಲ್ಮ್ಸ್‌ನಿಂದ ನಿರ್ಮಾಣಗೊಂಡಿರುವ ಜರಾ ಹಟ್ಕೆ ಜರಾ ಬಚ್ಕೆ 10ನೇ ದಿನದಂದು 50 ಕೋಟಿ ರೂಪಾಯಿ ದಾಟುವಲ್ಲಿ ಯಶಸ್ವಿ ಆಗಿತ್ತು.. ಒಟ್ಟು ಬಾಕ್ಸ್​ ಆಫೀಸ್ ಕಲೆಕ್ಷನ್​ ಸಂಖ್ಯೆ 65.97 ಕೋಟಿ ರೂ.

ದಿನನಿತ್ಯದ ಬಾಕ್ಸ್​ ಆಫೀಸ್ ಕಲೆಕ್ಷನ್​ ಸಂಖ್ಯೆ:

  • 5.49 ಕೋಟಿ ರೂ.
  • 7.20 ಕೋಟಿ ರೂ.
  • 9.90 ಕೋಟಿ ರೂ.
  • 4.14 ಕೋಟಿ ರೂ.
  • 3.87 ಕೋಟಿ ರೂ.
  • 3.51 ಕೋಟಿ ರೂ.
  • 3.24 ಕೋಟಿ ರೂ.
  • 5.76 ಕೋಟಿ ರೂ.
  • 7.02 ಕೋಟಿ ರೂ.
  • 2.70 ಕೋಟಿ ರೂ.
  • 2.52 ಕೋಟಿ ರೂ.
  • 2.25 ಕೋಟಿ ರೂ.
  • 1.95 ಕೋಟಿ ರೂ.
  • 1.08 ಕೋಟಿ ರೂ.
  • 1.89 ಕೋಟಿ ರೂ.
  • ಒಟ್ಟು: 65.97 ಕೋಟಿ ರೂ.

ಇದನ್ನೂ ಓದಿ:Animal: ಅನಿಮಲ್‌ ಚಿತ್ರದಲ್ಲಿ ರಣ್​ಬೀರ್ ಕಪೂರ್​-​ ರಶ್ಮಿಕಾ ಮಂದಣ್ಣ: ಸಿನಿಮಾ ಸೆಟ್‌ ಫೋಟೋ ವೈರಲ್​​

ಜರಾ ಹಟ್ಕೆ ಜರಾ ಬಚ್ಕೆಕಥೆ: ವಿಕ್ಕಿ ಕೌಶಲ್ ಮತ್ತು ಸಾರಾ ಅಲಿ ಖಾನ್ ಮೊಟ್ಟ ಮೊದಲ ಬಾರಿಗೆ ಸ್ಕ್ರೀನ್​ ಶೇರ್ ಮಾಡಿರುವ ಚಿತ್ರವಿದು. ಮಧ್ಯಮ ವರ್ಗದ ಕಥೆಯನ್ನು ಈ ಚಿತ್ರದಲ್ಲಿ ಹೇಳಲಾಗಿದೆ. ಕಾಲೇಜಿನಲ್ಲಿ ಭೇಟಿಯಾದ ಜೋಡಿ ಮದುವೆಯಾಗಿ ವೈವಾಹಿಕ ಜೀವನ ಶುರು ಮಾಡುತ್ತಾರೆ. ಆದರೆ, ಅವರಂದುಕೊಂಡಂತೆ ಏನೂ ನಡೆಯುವುದಿಲ್ಲ. ಮಧ್ಯಮ ವರ್ಗದ ಕೂಡು ಕುಟುಂಬವಾದ ಕಾರಣ ಈ ಜೋಡಿ ತಮ್ಮ ಖಾಸಗಿ ಸಮಯಕ್ಕಾಗಿ ಹಂಬಲಿಸುತ್ತಾರೆ. ಸ್ವಂತ ಮನೆ ಹೊಂದಲು ಇಚ್ಛಿಸುತ್ತಾರೆ. ಮನೆ ಹುಡುಕುವ ಹೊತ್ತಿಗೆ ಸರ್ಕಾರಿ ವಸತಿ ಯೋಜನೆ, ವಿಚ್ಛೇದಿತ ಮಹಿಳೆಯರಿಗೆ ಕೈಗೆಟುಕುವ ಮನೆ ಬಗ್ಗೆ ತಿಳಿದುಕೊಳ್ಳುತ್ತಾರೆ. ಎಲ್ಲರೆದುರು ಜಗಳವಾಡಿ ವಿಚ್ಛೇದನ ಪಡೆದು ಸರ್ಕಾರಿ ಯೋಜನೆಯಡಿ ಮಂಜೂರಾಗಿರುವ ಮನೆಯನ್ನು ಹೊಂದಲು ಎಲ್ಲಾ ರೀತಿಯ ಪ್ಲ್ಯಾನ್​ ಮಾಡುತ್ತಾರೆ. ಯಾವುದು ಕೂಡ ವರ್ಕ್​ ಔಟ್​ ಆಗುವುದಿಲ್ಲ. ಆದ್ರೆ ಇಲ್ಲಿ ಅವರ ಪ್ರೀತಿ ಪ್ರೇಕ್ಷಕರ ಮನ ಸೆಳೆಯುತ್ತದೆ.

ಇದನ್ನೂ ಓದಿ:Adipurush: 'ಆದಿಪುರುಷ'ನಿಗೆ ಭಾರಿ ಆಕ್ಷೇಪ; ವಿವಾದಿತ ಸಂಭಾಷಣೆ​ ಬದಲಿಸಲು ಚಿತ್ರತಂಡ ನಿರ್ಧಾರ

ABOUT THE AUTHOR

...view details