ವಿಕ್ಕಿ ಕೌಶಲ್ ಮತ್ತು ಸಾರಾ ಅಲಿ ಖಾನ್ ಮುಖ್ಯಭೂಮಿಕೆಯ ಜರಾ ಹಟ್ಕೆ ಜರಾ ಬಚ್ಕೆ (Zara Hatke Zara Bachke) ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದೆ. ಜೋಡಿಯ ಆನ್ ಸ್ಕ್ರೀನ್ ಕೆಮಿಸ್ಟ್ರಿಯನ್ನು ಅಭಿಮಾನಿಗಳು ಇಷ್ಟಪಡುತ್ತಿದ್ದಾರೆ. 6ನೇ ದಿನದ ಕಲೆಕ್ಷನ್ ಸಂಖ್ಯೆ ಕೊಂಡ ಕಡಿಮೆ ಇದ್ದರೂ, ಈವರೆಗಿನ ಒಟ್ಟು ಕಲೆಕ್ಷನ್ ಉತ್ತಮವಾಗಿದೆ. ಸಿನಿಮಾ ತೆರೆಕಂಡು 5 ದಿನಗಳಲ್ಲಿ 30 ಕೋಟಿ ಗಡಿ ದಾಟಿದೆ. 6 ದಿನಗಳ ಒಟ್ಟು ಕಲೆಕ್ಷನ್ 34.11 ಕೋಟಿ ರೂಪಾಯಿ.
'ದಿ ಕೇರಳ ಸ್ಟೋರಿ' ಮತ್ತು 'ಸ್ಪೈಡರ್ ಮ್ಯಾನ್: ಅಕ್ರಾಸ್ ದಿ ಸ್ಪೈಡರ್-ವರ್ಸ್' ಸಿನಿಮಾದ ಉತ್ತಮ ಪ್ರದರ್ಶನಗಳ ನಡುವೆಯೂ, ಲಕ್ಷ್ಮಣ್ ಉಟೇಕರ್ ನಿರ್ದೇಶನದ ಈ ಚಿತ್ರವು ಚಿತ್ರಮಂದಿರಗಳಲ್ಲಿ ದೃಢವಾಗಿ ನಿಂತಿದೆ. ಸಿನಿಮಾ ತೆರೆಕಂಡ ಮೊದಲನೇ ದಿನದಂದು ಸರಿಸುಮಾರು 5.25 ಕೋಟಿ ರೂ. ಗಳಿಸುವಲ್ಲಿ ಯಶಸ್ವಿ ಆಯಿತು ಮತ್ತು ಪ್ರೇಕ್ಷಕರಿಂದ ಮಿಶ್ರ ವಿಮರ್ಶೆಗಳನ್ನು ಪಡೆಯಿತು. ಮೂಲಗಳ ಪ್ರಕಾರ, ಚಿತ್ರವು 6ನೇ ದಿನದಂದು ಸುಮಾರು 3.60 ಕೋಟಿ ರೂಪಾಯಿಗಳನ್ನು ಗಳಿಸಿತು, ಒಟ್ಟು ದೇಶೀಯ ಬಾಕ್ಸ್ ಆಫೀಸ್ ಕಲೆಕ್ಷನ್ ಸಂಖ್ಯೆ 34.11 ಕೋಟಿ ರೂಪಾಯಿಗಳಿಗೆ ತಲುಪಿದೆ.
'ಉರಿ : ದಿ ಸರ್ಜಿಕಲ್ ಸ್ಟ್ರೈಕ್' ಸಿನಿಮಾ ನಂತರ 'ಜರಾ ಹಟ್ಕೆ ಜರಾ ಬಚ್ಕೆ' ಚಿತ್ರ ನಾಯಕ ನಟ ವಿಕ್ಕಿ ಕೌಶಲ್ ಅವರ ಎರಡನೇ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿ ಹೊರಹೊಮ್ಮಿದೆ. ಭಾರತದಾದ್ಯಂತ ಪ್ರೇಕ್ಷಕರು ವಿಕ್ಕಿ ಮತ್ತು ಸಾರಾ ಅವರ ಕಿಮಿಸ್ಟ್ರಿ, ನಟನೆ ಬಗ್ಗೆ ಶ್ಲಾಘಿಸಿದ್ದಾರೆ. ಚಿತ್ರದ ಸಂಗೀತಕ್ಕೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.