ಕನ್ನಡ ಚಿತ್ರರಂಗದಲ್ಲಿ ರಾಜಕಾರಣಿಗಳ ಮಕ್ಕಳು ಸಿನಿಮಾ ರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಈ ಹಾದಿಯಲ್ಲಿ ಶಾಸಕ ಜಮೀರ್ ಅಹ್ಮದ್ ಪುತ್ರ ಝೈದ್ ಖಾನ್ ಕೂಡ ಇದ್ದಾರೆ. ಬನಾರಸ್ ಸಿನಿಮಾ ಮೂಲಕ ಝೈದ್ ಖಾನ್ ಚೊಚ್ಚಲ ಚಿತ್ರದಲ್ಲೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿರೋ ಬನಾರಸ್ ಸಿನಿಮಾ ಟ್ರೈಲರ್ ಬಿಡುಗಡೆ ಆಗಿದ್ದು, ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಬಾಲಿವುಡ್ ನಟ ಅರ್ಬಾಜ್ ಖಾನ್ ಇತ್ತೀಚೆಗೆ ಈ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಿ ಜಮೀರ್ ಪುತ್ರನಿಗೆ ಮತ್ತು ಚಿತ್ರತಂಡಕ್ಕೆ ಆಲ್ ದಿ ಬೆಸ್ಟ್ ಹೇಳಿದರು. ಟೈಮ್ ಟ್ರಾವೆಲಿಂಗ್ ಪರಿಕಲ್ಪನೆಯನ್ನು ಇಟ್ಟುಕೊಂಡು ಬಂದಿರುವ ಬನಾರಸ್ ಸಿನಿಮಾ ಟ್ರೈಲರ್ ಅನ್ನು ಬರೋಬ್ಬರಿ 4 ಮಿಲಿಯನ್ ಜನರು ನೋಡಿ ಮೆಚ್ಚಿಕೊಂಡಿದ್ದಾರೆ. ಗೊಂಬೆಗಳ ಲವ್, ಬೆಲ್ ಬಾಟಮ್ ಅಂತಹ ಸಿನಿಮಾಗಳನ್ನು ಮಾಡಿ ಗಮನ ಸೆಳೆದಿರುವ ಜಯತೀರ್ಥ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ.
ರಾಜಕೀಯ ಕುಟುಂಬದ ಹಿನ್ನೆಲೆ ಇರುವ ಝೈದ್ ಖಾನ್ ಬನಾರಸ್ ಸಿನಿಮಾ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಚೊಚ್ಚಲ ಚಿತ್ರದಲ್ಲಿ ಅವರಿಗೆ ಜೋಡಿಯಾಗಿ ಸೋನಲ್ ಮಾಂಥೆರೋ ನಟಿಸಿದ್ದಾರೆ. ಇಬ್ಬರ ಕೆಮಿಸ್ಟ್ರಿ ತುಂಬಾ ಚೆನ್ನಾಗಿ ಮೂಡಿ ಬಂದಿರೋದು ಟ್ರೈಲರ್ನಲ್ಲಿ ಗೊತ್ತಾಗುತ್ತದೆ. ಇನ್ನು ಸಿನಿಮಾದ ಕಥೆ ಏನು? ಬನಾರಸ್ ಅಂತಾ ಏಕೆ ಟೈಟಲ್ ಇಡಲಾಗಿದೆ ಅನ್ನೋದರ ಬಗ್ಗೆ ಟ್ರೇಲರ್ನಲ್ಲಿ ಕೊಂಚ ಸುಳಿವು ಸಿಕ್ಕಿದೆ. ಇಂದೊಂದು ಲವ್ ಸ್ಟೋರಿ ಆಗಿದ್ದು, ಅನೇಕ ಸಸ್ಪೆನ್ಸ್ಗಳನ್ನು ಒಳಗೊಂಡಿದೆ.
ಬನಾರಸ್ ಸಿನಿಮಾ ಟ್ರೈಲರ್ ರಿಲೀಸ್
ಇದನ್ನೂ ಓದಿ:ಕಾನನದೊಳಗಿನ ದಂತಕಥೆ..ಕಾಂತಾರದಲ್ಲಿ ಕರಾವಳಿ ಸೊಗಡು - ಹೊಸ ಅವತಾರದಲ್ಲಿ ರಿಶಬ್ ಶೆಟ್ಟಿ ಅಬ್ಬರ
ಝೈದ್ ಖಾನ್ ಹಾಗೂ ಸೋನಲ್ ಮಾಂಥೆರೋ ಅಲ್ಲದೇ ದೇವರಾಜ್, ಅಚ್ಯುತ್ ಕುಮಾರ್, ಸುಜಯ್ ಶಾಸ್ರ್ತಿ, ಸ್ವಪ್ನ ರಾಜ್, ಬರ್ಕತ್ ಆಲಿ, ಚಿರಂತ್ ಸೇರಿದಂತೆ ದೊಡ್ಡ ತಾರಾ ಬಳಗ ಈ ಚಿತ್ರದಲ್ಲಿದೆ. ಮಾಯಗಂಗೆ ಸಾಂಗ್ ಕೂಡ ಜನಮೆಚ್ಚುಗೆ ಗಳಿಸಿದೆ. ಅಜನೀಶ್ ಬಿ. ಲೋಕನಾಥ್ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಅದ್ವೈತ್ ಗುರುಮೂರ್ತಿ ಛಾಯಾಗ್ರಹಣವಿದೆ. ವಿಜಯ್ ಮಾಸ್ಟರ್, ಡಿಫರೆಂಟ್ ಡ್ಯಾನಿ ಈ ಸಿನಿಮಾಗೆ ಸಾಹಸ ನಿರ್ದೇಶನ ಮಾಡಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ತಿಲಕ್ ರಾಜ್ ಬಲ್ಲಾಳ್ ಅದ್ಧೂರಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಮಾಡಿದ್ದು, ಕನ್ನಡ, ತೆಲುಗು, ಮಲಯಾಳಂ, ಹಿಂದಿ ಹಾಗೂ ತಮಿಳು ಸೇರಿದಂತೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬನಾರಸ್ ಚಿತ್ರ ನವೆಂಬರ್ 4ರಂದು ಬಿಡುಗಡೆ ಆಗಲಿದೆ.