ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವತಾರದಲ್ಲೇ ಸ್ಯಾಂಡಲ್ವುಡ್ಗೆ ಜೂ. ಪವರ್‌ಸ್ಟಾರ್ ಎಂಟ್ರಿ ಆಗಿದೆ. ಒಂದೂವರೆ ವರ್ಷಗಳಿಂದ ಕಾಯುತ್ತಿದ್ದ ಅಭಿಮಾನಿಗಳ ಮೊಗದಲ್ಲಿ ಯುವ ರಾಜ್ಕುಮಾರ್ ತಮ್ಮ ಚೊಚ್ಚಲ ಚಿತ್ರದ ಮೂಲಕ ನಗು ತರಿಸಿದ್ದಾರೆ. ಯುವ ರಾಜ್ಕುಮಾರ್ ಅವರ ಮೊದಲ ಸಿನಿಮಾದ ಟೈಟಲ್ ಅನಾವರಣಗೊಂಡಿದೆ. 'ಯುವ' ಸಿನಿಮಾ ಶೀರ್ಷಿಕೆ. ಪವರ್ ಸ್ಟಾರ್ರಂತೆ ಪವರ್ಫುಲ್ ಲುಕ್‌ನಲ್ಲಿ ತಮ್ಮ ಚೊಚ್ಚಲ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ ಯುವ ರಾಜ್ಕುಮಾರ್.
ರಾಘವೇಂದ್ರ ರಾಜ್ಕುಮಾರ್ ಕಿರಿಯ ಪುತ್ರನಾಗಿರೋ ಯುವ ರಾಜ್ಕುಮಾರ್ ಅವರು ಕಿರಿಯ ವಯಸ್ಸಿನಿಂದಲೂ ಅಪ್ಪು ಚಿಕ್ಕಪ್ಪನನ್ನು ನೋಡಿ ಬೆಳೆದವರು. ಹೀಗಾಗಿ ಪವರ್ ಸ್ಟಾರ್ ಸಕ್ಸಸ್ ಹಾದಿಯನ್ನು ಯುವ ರಾಜ್ಕುಮಾರ್ ಅವರು ಚಾಚೂ ತಪ್ಪದೇ ಫಾಲೋ ಮಾಡುತ್ತಿದ್ದಾರೆ ಅನ್ನೋದಿಕ್ಕೆ ಶುಕ್ರವಾರ ಅದ್ಧೂರಿಯಾಗಿ ನಡೆದ ಯುವ ಸಿನಿಮಾದ ಟೈಟಲ್ ಅನಾವರಣ ಪ್ರೋಗ್ರಾಮ್ ಒಂದು ಉತ್ತಮ ಉದಾಹರಣೆ.
ಖಡಕ್ ಡೈಲಾಗ್‌ಗಳಿಗೆ ಫ್ಯಾನ್ಸ್ ಫಿದಾ ಆಗಿದ್ರೆ, ಯುವನ ಆ ಖದರ್ ನೋಡಿ ಅಭಿಮಾನಿಗಳಿಗೆ ಅಪ್ಪು ಅವರನ್ನೇ ಕಂಡಂತೆ ಆಗಿದೆ. ಇನ್ನುಂದೆ ಪುನೀತ್ ರಾಜ್‌ಕುಮಾರ್ ಮತ್ತು ಅವರ ಸಿನಿಮಾ ಇಲ್ಲವೆಂದು ನೊಂದುಕೊಂಡವರಿಗೆ ಈಗ ಹೊಸ ಭರವಸೆ ಬಂದಂತಾಗಿದೆ. ಈ ಕಾರಣಕ್ಕೆ ಟೀಸರ್‌ನಲ್ಲಿ ಕಂಡ ಯುವನನ್ನು ನೋಡಿ ಅಭಿಮಾನಿಗಳು ಭಾವುಕರಾಗಿದ್ದಾರೆ. ಪುನೀತ್ ಹಾಗೂ ಯುವ ಇಬ್ಬರಿಗೂ ಸಾಮ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.
ದೊಡ್ಮನೆಯ ಅಪ್ಪು ಆಗಿದ್ದ ಮಾಸ್ಟರ್ ಲೋಹಿತ್ ಸಿನಿಮಾಕ್ಕಾಗಿ ಪುನೀತ್ ರಾಜ್‍ಕುಮಾರ್ ಎಂಬ ಹೆಸರಿನೊಂದಿಗೆ ಪವರ್ ಸ್ಟಾರ್ ಕನ್ನಡ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದರು. ಅದೇ ರೀತಿ ಗುರುರಾಜ್ ಕುಮಾರ್ ಆಗಿದ್ದ ಯುವ ಈಗ ಸಿನಿಮಾಕ್ಕಾಗಿ ಯುವ ರಾಜ್ಕುಮಾರ್ ಆಗಿ ಬೆಳ್ಳಿತೆರೆಯಲ್ಲಿ ವಿಜೃಂಭಿಸಲು ಬರುತ್ತಿದ್ದಾರೆ.